ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು

Public TV
1 Min Read

ಬೆಂಗಳೂರಿನ 20 ಸರಕಾರಿ ಶಾಲೆಯ 100 ಮಕ್ಕಳು ಸೇರಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಉಪಗ್ರಹ ತಯಾರಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಹೆಸರಿನ ಈ ಉಪಗ್ರಹ ಉಡಾವಣೆಗೆ ಸ್ವತಃ ರಾಜ್ಯ ಸರ್ಕಾರ ಮುಂದಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಈ ಮಹತ್ವದ ನಿರ್ಧಾರವಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ ಘೋಷಣೆ ಮಾಡಿದ್ದಾರೆ. ಉಪಗ್ರಹ ಉಡಾವಣೆ ಯೋಜನೆಗೆ ಸಚಿವರೇ ಚಾಲನೆ ನೀಡಿದ್ದಾರೆ. ಇದನ್ನೂ ಓದಿ : ಮೊದಲ ಬಾರಿಗೆ ಒಂದಾದ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ರಾಜಮೌಳಿ

ಸ್ವಾತಂತ್ರ್ಯ ಬಂದು 75 ವರ್ಷ ಆಗುತ್ತಿರೋ ಹಿನ್ನೆಲೆಯಲ್ಲಿ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ 75 ಉಪಗ್ರಹಗಳನ್ನ ಉಡಾವಣೆ ಮಾಡುತ್ತಿದೆ. ಇದರಲ್ಲಿ ಒಂದು ಉಪಗ್ರಹವನ್ನು ರಾಜ್ಯ ಸರ್ಕಾರದ ಸಹಕಾರದಲ್ಲಿ ಕರ್ನಾಟಕ ಸರ್ಕಾರಿ  ಶಾಲಾ ವಿದ್ಯಾರ್ಥಿಗಳು ದೇಶದಲ್ಲಿ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವುದು ವಿಶೇಷ. ಈ ವಿದ್ಯಾರ್ಥಿಗಳು ನಿರ್ಮಾಣ ಮಾಡುತ್ತಿರೋ ಉಪಗ್ರಹಕ್ಕೆ ಪುನೀತ್ ರಾಜ್ ಕುಮಾರ್ ಉಪಗ್ರಹ ಅಂತ ಹೆಸರು ಇಡಲಾಗಿದೆ. ಇದನ್ನೂ ಓದಿ : ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಾಯಿ ವಿಧಿವಶ

ಉಪಗ್ರಹ ತಯಾರಿಕೆಗಾಗಿ ಬೆಂಗಳೂರಿನ ಸರಕಾರಿ ಶಾಲೆಯ 100 ವಿದ್ಯಾರ್ಥಿಗಳ ಆಯ್ಕೆ ಕೂಡ ವಿಶೇಷವಾಗಿದೆ. ಈ  ವಿದ್ಯಾರ್ಥಿಗಳನ್ನ ವಿವಿಧ ಸ್ಪರ್ಧೆಗಳು, ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ಜೊತೆಗೂ ಉಪಗ್ರಹ ನಿರ್ಮಾಣ ಮಾಡಲಿದ್ದಾರೆ.  ಇದನ್ನೂ ಓದಿ : ನಿಜ ಜೀವನದಲ್ಲಿಯೂ ಹೀರೋಯಿನ್ ಆದ ಶ್ವೇತಾ ಶ್ರೀವಾತ್ಸವ್.

ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ಹಣ ಖರ್ಚು ಆಗಲಿದ್ದು, ಸುಮಾರು 1.5 ಕೆಜಿ ಉಪಗ್ರಹದ ತೂಕ ಇರಲಿದೆ. ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಉಪಗ್ರಹ ನಿರ್ಮಾಣ ಕಾರ್ಯ ಮುಕ್ತಾಯ ಅಗಲಿದೆ. ನಂತರ ಉಡಾವಣೆಗೆ ದಿನಾಂಕ ನಿಗಧಿಯಾಗಲಿದೆಯಂತೆ.

Share This Article
Leave a Comment

Leave a Reply

Your email address will not be published. Required fields are marked *