ಸರೋಜಮ್ಮ ತುಂಬಾ ನೆಮ್ಮಯಿಂದ ಹೋಗಿದ್ದಾರೆ – ತಮಿಳುನಟ ಕಾರ್ತಿ ಕಂಬನಿ

Public TV
1 Min Read

ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಬಿ.ಸರೋಜಾ ದೇವಿ (SarojaDevi) ಅವರು ಇಂದು ವಿಧಿವಶವಾಗಿದ್ದಾರೆ. ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಭಾಗ್ಯವಂತರು, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಕನ್ನಡ ಚಿತ್ರರಂಗದ ಕಿತ್ತೂರು ರಾಣಿ ಚೆನ್ನಮ್ಮ ಅಂತಲೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ಸರೋಜಾದೇವಿ ಅವರು ತಮ್ಮ ನಿವಾಸದಲ್ಲಿ ಉಸಿರು ಚೆಲ್ಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಸಿನಿ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ತಮಿಳುನಟ ಕಾರ್ತಿ (Karthi) ಅವರಿಂದು ಅಂತಿಮ ದರ್ಶನ ಪಡೆದು ನುಡಿ ನಮನ ಅರ್ಪಿಸಿದ್ದಾರೆ. ಸರೋಜಮ್ಮ ಆ ಕಾಲದಲ್ಲೇ ಪ್ಯಾನ್‌ ಇಂಡಿಯಾ ಸ್ಟಾರ್‌, ತಮಿಳುನಾಡಿನಲ್ಲಿದ್ದಾಗ ಪ್ರತಿ ತಿಂಗಳೂ ನನ್ನನ್ನ ಕರೆದು ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರು ತುಂಬಾ ನೆಮ್ಮದಿಯಿಂದ ಹೋಗಿದ್ದಾರೆ ಅಂತ ಭಾವುಕರಾಗಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ…..

Share This Article