ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ (Kantara) ಸ್ವಿಕ್ವೇಲ್ ಸಿನಿಮಾದಲ್ಲಿ ಲೀಲಾ ಆಗಿ ಮಿಂಚಿದ್ದ ಸಪ್ತಮಿ ಗೌಡ (Sapthami Gowda) ಬಳಿಕ ತೆಲುಗು ಸಿನಿಮಾದಲ್ಲೂ ನಟಿಸಿ ಖ್ಯಾತಿ ಗಳಿಸಿದ್ದಾರೆ. ಇದೀಗ ವಿದೇಶದ ಸುಂದರ ತಾಣಗಳಲ್ಲಿ ನಿಂತು ವಿಧ ವಿಧವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಪ್ತಮಿಗೌಡ ಸ್ವಿಟ್ಜರ್ಲ್ಯಾಂಡ್ನ (Switzerland) ಬ್ಯೂಟಿಫುಲ್ ಲೊಕೇಶನ್‌ನಲ್ಲಿ ಸ್ಟೈಲ್ ಸ್ಮೈಲ್ ಕೊಟ್ಟಿದ್ದಾರೆ.
ಸಪ್ತಮಿಗೌಡ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರ್ತಾರೆ. ಇತ್ತೀಚೆಗೆ ತೂಕ ಇಳಿಸಿ, ತೆಳ್ಳಗೆ ಬಳುಕುವ ಬಳ್ಳಿಯ ಹಾಗೆ ಮತ್ತಷ್ಟು ಪಿಟ್ ಆಗಿ ಕಣ್ಮನ ಸೆಳೆಯುತ್ತಿದ್ದಾರೆ. ಪ್ರಕೃತಿಯ ಸೊಬಗನ್ನು ಸವಿಯುತ್ತಾ ಹೊಸ ಹೊಸ ಉಡುಗೆಯಲ್ಲಿ ವಿದೇಶದ ಬೀದಿಯಲ್ಲಿ ರೌಂಡ್ ಹೊಡೆಯುತ್ತಿದ್ದಾರೆ. ಇದನ್ನೂ ಓದಿ: ಎಷ್ಟೇ ಕೆಟ್ಟ ಕಾಮೆಂಟ್ಸ್ ಬಂದ್ರೂ ಡೋಂಟ್ ಕೇರ್ ಎಂದ ನಿವೇದಿತಾ ಗೌಡ
ಸದ್ಯ ವಿಶ್ವದಾದ್ಯಂತ ಕಾಂತಾರ ಚಾಪ್ಟರ್-1 ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇತ್ತ ಕಾಂತಾರ ಸಿಕ್ವೇಲ್ ಸುಂದರಿ ಸಿಂಗಾರ ಸಿರಿ ಸ್ವಿಟ್ಜರ್ಲ್ಯಾಂಡ್ನ ಯಾತ್ರೆ ಕೈಗೊಂಡಿದ್ದಾರೆ. ಸಪ್ತಮಿಗೌಡ ಹಾಕಿರುವ ಪೋಸ್ಟ್‌ಗೆ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತವಾಗ್ತಿದೆ.