Breaking-‘ಉತ್ತರಕಾಂಡ’ ಚಿತ್ರದ ಫೋಟೋ ಹಂಚಿಕೊಂಡ ಸಪ್ತಮಿ: ರಮ್ಯಾ ಪಾತ್ರ ಏನು?

Public TV
2 Min Read

ಡಾಲಿ ಧನಂಜಯ್ (Dolly Dhananjay) ನಟನೆಯ ‘ಉತ್ತರಕಾಂಡ’ (Uttarkanda) ಸಿನಿಮಾದಲ್ಲಿ ರಮ್ಯಾ ಮತ್ತು ಸಪ್ತಮಿ ಗೌಡ  (Saptami Gowda)ಇಬ್ಬರೂ ನಾಯಕಿಯರಾಗಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯನ್ನು ಪಬ್ಲಿಕ್ ಟಿವಿ ಡಿಜಿಟಲ್ ಈ ಹಿಂದೆಯೇ ಬ್ರೇಕ್ ಮಾಡಿತ್ತು. ಆದರೆ, ಸಿನಿಮಾದ ಶೂಟಿಂಗ್ ಶುರುವಾಗಿದೆಯಾ? ಇಲ್ಲವಾ? ಎನ್ನುವ ಮಾಹಿತಿ ಬಂದಿರಲಿಲ್ಲ. ಆದರೆ, ಸದ್ದಿಲ್ಲದೇ ಚಿತ್ರೀಕರಣವನ್ನೂ ಶುರು ಮಾಡಿದ್ದಾರೆ ನಿರ್ದೇಶಕ ಪದಕಿ. ಅದಕ್ಕೆ ಸಾಕ್ಷಿ ಎನ್ನುವಂತೆ ಡಾಲಿ ಮತ್ತು ಸಪ್ತಮಿ ಗೌಡ ನಟಿಸಿರುವ ಫೋಟೋ ಸಿಕ್ಕಿವೆ.

ಇಂದು ಡಾಲಿ ಧನಂಜಯ್ ಅವರ ಹುಟ್ಟು ಹಬ್ಬ. ಈ ಸಂದರ್ಭದಲ್ಲಿ ಡಾಲಿ ಜೊತೆ ನಟಿಸಿರುವ ದೃಶ್ಯದ ಫೋಟೋಗಳನ್ನು ಸಪ್ತಮಿ ಗೌಡ ಹಂಚಿಕೊಂಡಿದ್ದಾರೆ. ಈ ಮೂಲಕ ಸಿನಿಮಾದ ಚಿತ್ರೀಕರಣ ಶುರುವಾಗಿರುವ ಕುರಿತು ಖಚಿತ ಮಾಹಿತಿಯನ್ನು ನೀಡಿದ್ದಾರೆ. ಆದರೆ, ರಮ್ಯಾ ಮತ್ತು ಡಾಲಿ ಕಾಂಬಿನೇಷನ್ ನ ದೃಶ್ಯಗಳು ಶೂಟ್ ಆಗಿವೆಯಾ ಎನ್ನುವ ಮಾಹಿತಿ ಸದ್ಯಕ್ಕೆ ಸಸ್ಪೆನ್ಸ್. ಇದನ್ನೂ ಓದಿ:ಬದ್ಧವೈರಿ ಕಂಗನಾ ಚಿತ್ರ ನೋಡುವ ಆಸೆ ಇದೆ ಎಂದ ಕರಣ್ : ಭಯವಾಗುತ್ತಿದೆ ಅಂತಾರೆ ನಟಿ

ಡಾಲಿಯ ಹುಟ್ಟು ಹಬ್ಬದ ಮುನ್ನಾ ದಿನ (ಆ.22) ರಂದು ಉತ್ತರಕಾಂಡ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಜೊತೆಗೆ ಗಬ್ರು ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ‘ಉತ್ತರಕಾಂಡ’ ಸಿನಿಮಾದ ಮುಹೂರ್ತವಾಗಿ ಹಲವು ತಿಂಗಳುಗಳೇ ಕಳೆದಿವೆ. ಮುಹೂರ್ತದ ನಂತರ ಯಾವುದೇ ಅಪ್ ಡೇಟ್ ನೀಡಿರಲಿಲ್ಲ ಚಿತ್ರತಂಡ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿಲ್ಲ ಎಂದು ಹೇಳಲಾಗಿತ್ತು. ಶೂಟಿಂಗ್ ಶೂರು ಮಾಡಿರುವುದರ ಜೊತೆಗೆ ಇದೀಗ ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ.

 

ರೋಹಿತ್ ಪದಕಿ ನಿರ್ದೇಶನದಲ್ಲಿ ಉತ್ತರಕಾಂಡ ಸಿನಿಮಾ ಮೂಡಿ ಬರಲಿದ್ದು, ಮೋಹಕ ತಾರೆ ರಮ್ಯಾ (Ramya) ಮತ್ತೆ ಈ ಸಿನಿಮಾದ ಮೂಲಕ ನಟಿಯಾಗಿ ಚಿತ್ರೋದ್ಯಮಕ್ಕೆ ವಾಪಸ್ಸಾಗಿದ್ದಾರೆ. ಇದೇ ಮೊದಲ ಬಾರಿಗೆ ಡಾಲಿ ಜೊತೆ ರಮ್ಯಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹತ್ತು ಹಲವು ಕಾರಣಗಳಿಂದಾಗಿ ಸಿನಿಮಾ ಕುತೂಹಲವನ್ನಂತೂ ಮೂಡಿಸಿದೆ.

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್