ಕ್ಯಾಲಿಫೋರ್ನಿಯಾದಲ್ಲಿ ಟ್ರೆಕ್ಕಿಂಗ್ ಮಾಡಿದ ಸಪ್ತಮಿ ಗೌಡ

Public TV
1 Min Read

ಕಾಂತಾರ ಬೆಡಗಿ ಸಪ್ತಮಿ ಗೌಡ (Saptami Gowda) ಅಮೆರಿಕಾ ಪ್ರವಾಸದಲ್ಲಿದ್ದಾರೆ. ಅಲ್ಲಿನ ಹಲವು ಪ್ರವಾಸಿ ತಾಣಗಳನ್ನ ವಿಸಿಟ್ ಮಾಡ್ತಾ ಅದರ ಫೋಟೋಗಳನ್ನ ಇನ್ಸ್ಟಾದಲ್ಲಿ ನಿರಂತರ ಶೇರ್ ಮಾಡುತ್ತಿದ್ದಾರೆ ಸಪ್ತಮಿ. ಇದೀಗ ಅಮೆರಿಕಾದ ಇನ್ನೊಂದು ವಿಸ್ಮಯದ ಜಾಗವನ್ನ ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಸಿದ್ದಾರೆ. ಅದುವೇ ಕ್ಯಾಲಿಫೋರ್ನಿಯಾದಲ್ಲಿರುವ (California) ಯೊಸ್ಮೆಂಟ್ ನ್ಯಾಶನಲ್ ಪಾರ್ಕ್.

ನದಿ-ಜರಿ-ಬಂಡೆಗಳು ಸೇರಿದಂತೆ ಮರಗಳಿಂದ ಕೂಡಿದ ಪ್ರಕೃತಿ ವಿಸ್ಮಯ ಈ ಪಾರ್ಕ್ ಹೊದ್ದುನಿಂತಿದೆ. ಪೃಕೃತಿ ನಿರ್ಮಿತ ಈ ವಿಶಾಲ ಉದ್ಯಾನವನ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಹೀಗಾಗಿ ಅಡ್ವೆಂಚರ್ ಪ್ರಿಯೆ ಸಪ್ತಮಿ ಗೌಡ ಈ ವಿಶೇಷ ಜಾಗಕ್ಕೆ ಭೇಟಿ ನೀಡಿದ್ದಾರೆ.

ಇಲ್ಲಿ ನಿಂತು ಸೂರ್ಯಾಸ್ತ ಕಣ್ಮುಂಬಿಕೊಳ್ಳುವುದು, ನಕ್ಷತ್ರಗಳನ್ನ ನೋಡುವುದು. ಕಾರ್ಮೋಡಗಳನ್ನು ಆಹ್ಲಾದಿಸುವ ಸಂಸತವನ್ನ ಸಪ್ತಮಿ ಹಂಚಿಕೊಂಡಿದ್ದಾರೆ. ಇಲ್ಲಿ ಟ್ರೆಕ್ಕಿಂಗ್ ಮಾಡಲು ಶಕ್ತಿ ಹಾಗೂ ಉತ್ಸಾಹ ಕೊಂಚ ಹೆಚ್ಚಾಗೇ ಬೇಕಾಗುತ್ತೆ. ಹೀಗಾಗಿ ಅಲ್ಲಿನ ಪರ್ವತದ ತುತ್ತ ತುದಿ ವರೆಗೆ ಹೋಗಿರುವ ಸಪ್ತಮಿ ಅಲ್ಲಿಂದ ಫೋಟೋಗಳನ್ನ ಶೇರ್ ಮಾಡಿದ್ದಾರೆ.

 

ಅಂದಹಾಗೆ ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಸಪ್ತಮಿ ಗೌಡ ಪಾಲ್ಗೊಂಡಿದ್ರು. ಬಳಿಕ ಅಲ್ಲಿಯೇ ಕೆಲ ದಿನ ಉಳಿದುಕೊಂಡು ಸಂಪೂರ್ಣ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಇದೀಗ ಅಲ್ಲಿನ ಪ್ರಸಿದ್ಧ ಜಾಗವೊಂದರ ದರ್ಶನ ಮಾಡಿಸಿದ್ದಾರೆ.

Share This Article