ಮೊನ್ನೆಯಷ್ಟೇ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ ತಮಗೆ ತಂದುಕೊಟ್ಟ ಯಶಸ್ಸನ್ನ ನೆನೆದು ಸಾರ್ಥಕ ಭಾವದಿಂದ ಪತ್ರ ಬರೆದಿದ್ದರು ರುಕ್ಮಿಣಿ ವಸಂತ್ (Rukmini Vasanth). ಮೈತುಂಬಾ ಸೀರೆಯುಟ್ಟು ಕಾಣಿಸ್ಕೊಳ್ಳುವುದೇ ರುಕ್ಮಿಣಿ ಶೈಲಿಯಾಗಿತ್ತು. ಇದುವರೆಗೂ ರುಕ್ಮಿಣಿ ಪಕ್ಕದ್ಮನೆ ಹುಡುಗಿ ಲುಕ್‌ನಿಂದಲೇ ಮನಸೊರೆಗೊಂಡವರು. ಆದರೆ ಇದೇ ಮೊದಲ ಬಾರಿ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ ರುಕ್ಮಿಣಿ. ಕೆಂಪು ಬಣ್ಣದ ಗೌನ್ ಧರಿಸಿರುವ ರುಕ್ಮಿಣಿ ಹಿಂದೆಂದೂ ಕಂಡು ಕೇಳರಿಯದ ಬೋಲ್ಡ್ ಅವತಾರದಲ್ಲಿ ಪೋಸ್ ಕೊಟ್ಟಿದ್ದಾರೆ.
ಸಿನಿಮಾ ಪಾತ್ರ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಅಪ್‌ಲೋಡ್ ಮಾಡುವಲ್ಲೂ ರುಕ್ಮಿಣಿ ಇದುವರೆಗೆ ಬೋಲ್ಡ್ ಲುಕ್ ಲೈನ್ ದಾಟಿರಲಿಲ್ಲ. ಆದರೆ ಪಾತ್ರಕ್ಕೆ ತಕ್ಕಂತೆ ಬದಲಾವಣೆ, ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವಿಕೆ ಅನಿವಾರ್ಯ ಅನ್ನೋದು ರುಕ್ಮಿಣಿ ಗಮನಕ್ಕೆ ಈಗ ಬಂದಿರಬಹುದು. ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವ ಹೊಸ ಫೋಟೋಶೂಟ್‌ನಲ್ಲಿ ರುಕ್ಮಿಣಿ ಎದೆಸೀಳು ಕಾಣುವಂತೆ ಉಡುಗೆ ಧರಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಇದೀಗ ರುಕ್ಮಿಣಿ ವಸಂತ್ ಹೆಚ್ಚು ಜನಪ್ರಿಯರಾಗಿದ್ದು, ಕನ್ನಡದ ಜೊತೆ ಜೊತೆಗೆ ಪರಭಾಷೆಯ ಇಂಡಸ್ಟ್ರಿಯಲ್ಲೂ ಹೆಸರು ಮಾಡುತ್ತಿದ್ದಾರೆ. ಕಾಂತಾರ-1 , ಡ್ರ್ಯಾಗನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಬಳಿಕವಂತೂ ರುಕ್ಮಿಣಿ ಖ್ಯಾತಿ ಮೇಲ್ಪಂಕ್ತಿಗೆ ಬಂದಿದೆ. ಬೇಡಿಕೆ, ಅವಕಾಶಗಳು ಹೆಚ್ಚಾದಂತೆ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ವೀವ್ ಆಗತೊಡಗಿದ್ದಾರೆ ರುಕ್ಮಿಣಿ. ಒಟ್ನಲ್ಲಿ ರುಕ್ಮಿಣಿ ಫ್ಯಾಶನ್ ಶೈಲಿ ಬದಲಾಗುತ್ತಿದೆ.