‘ನಕ್ಷತ್ರ’ವೊಂದಕ್ಕೆ ಸಾನ್ಯಾ ಅಯ್ಯರ್ ಹೆಸರು: ಇದು ಅಭಿಮಾನಿಗಳ ಗಿಫ್ಟ್

Public TV
2 Min Read

ಕ್ಷತ್ರಗಳಿಗೆ (Stars)  ತಮ್ಮ ನೆಚ್ಚಿನ ತಾರೆಯರು ಹೆಸರು ಇಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಕನ್ನಡದಲ್ಲಿ ಇದನ್ನು ಮೊದಲು ಶುರು ಮಾಡಿದ್ದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು. ಪುನೀತ್ ಅಗಲಿದಾಗ ನಕ್ಷತ್ರವೊಂದಕ್ಕೆ ಪುನೀತ್ ಅವರ ಹೆಸರು ಇಡಲಾಗಿತ್ತು. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬದಂದು ಹರೀಶ್ ಅರಸು ಅವರು ಸುದೀಪ್ ಅವರ ಹೆಸರನ್ನು ನಕ್ಷತ್ರವೊಂದಕ್ಕೆ ಇಟ್ಟಿದ್ದರು. ಇದೀಗ ಕಿರುತೆರೆ ನಟಿ ಸಾನ್ಯಾ ಅಯ್ಯರ್ ಅಭಿಮಾನಿಗಳು ನಟಿಯ ಹೆಸರಿನ್ನು ನಕ್ಷತ್ರವೊಂದಕ್ಕೆ ಇಟ್ಟಿದ್ದಾರೆ.

ಸಾನ್ಯಾ ಅಯ್ಯರ್ ಹುಟ್ಟು ಹಬ್ಬದಂದು ಅಭಿಮಾನಿಗಳು ಈ ಕೆಲಸ ಮಾಡಿದ್ದು, ಆ ವಿಡಿಯೋವನ್ನು ಸ್ವತಃ ಸಾನ್ಯಾ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಕ್ಷತ್ರಗಳಿಗೆ ಹೆಸರು ಇಡುವುದು ನನಗೆ ಗೊತ್ತೇ ಇರಲಿಲ್ಲ. ಇದೇ ಮೊದಲ ಬಾರಿಗೆ ನನಗೆ ಗೊತ್ತಾಗಿದ್ದು ಎಂದು ಅಚ್ಚರಿಯನ್ನು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಇಂಥದ್ದೊಂದು ಕೆಲಸ ಮಾಡಿದ ಅಭಿಮಾನಿಗಳಿಗೆ ಧನ್ಯವಾದಗಳನ್ನೂ ಅವರು ಹೇಳಿದ್ದಾರೆ.

ಕಿರುತೆರೆಯ ಮುದ್ದಾದ ಗೊಂಬೆ ಎಂದೇ ಖ್ಯಾತರಾದವರು ಸಾನ್ಯಾ ಅಯ್ಯರ್ (Sanya Iyer). ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವುದಕ್ಕಾಗಿಯೇ ಬಾಲಿವುಡ್ (Bollywood) ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ (Daboo Ratnani) ಅವರಿಂದ ಫೋಟೋಶೂಟ್ (Photo Shoot) ಮಾಡಿಸಿಕೊಂಡಿದ್ದರು. ಬಿಳಿ ಬಣ್ಣದ ಕಾಸ್ಟ್ಯೂಮ್ ನಲ್ಲಿ ಥೇಟ್ ರಾಣಿಯಂತೆ ಕಂಡಿದ್ದರು.

ಬಾಲಿವುಡ್ ನ ಖ್ಯಾತ ನಟ ನಟಿಯರ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ಶ್ರೇಯಸ್ಸು ಡಬು ರತ್ನಾನಿಗೆ ಸಲ್ಲುತ್ತದೆ. ಅಮಿತಾಭ್ ಬಚ್ಚನ್ ರಿಂದ ಹಿಡಿದು ಈ ಹೊತ್ತಿನ ಯುವ ನಟರವರೆಗೂ ಡಬು ತಮ್ಮ ಕ್ಯಾಮೆರಾದಲ್ಲಿ ಅವರನ್ನು ಸೆರೆ ಹಿಡಿದಿದ್ದಾರೆ. ಈ ಹಿಂದೆ ಕನ್ನಡದ ಹೆಸರಾಂತ ನಟ ಯಶ್ ಕೂಡ ಇವರ ಬಳಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಸಾನ್ಯಾ ಕೂಡ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು. ಈ ಫೋಟೋ ಶೂಟ್ ಬಳಿಕ ಅವರು ಕನ್ನಡ ಸಿನಿಮಾವೊಂದನ್ನು ಒಪ್ಪಿಕೊಂಡರು. ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ (Gauri) ಚಿತ್ರಕ್ಕೆ ಇವರೇ ನಾಯಕಿಯಾಗಿ ನಟಿಸುತ್ತಿದ್ದಾರೆ.

ಸುದೀಪ್ ಹೆಸರಿನಲ್ಲೂ ನಕ್ಷತ್ರ

ಕಿಚ್ಚ ಸುದೀಪ್ (Sudeep) ಅವರ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನು ನೀಡಿತ್ತು ಅರಸು ಕ್ರಿಯೇಷನ್ಸ್ (Arasu Creation). ಸುದೀಪ್ ಅವರ ಹೆಸರನ್ನು ನಕ್ಷತ್ರವೊಂದಕ್ಕೆ (Nakshatra) ನಾಮಕರಣ ಮಾಡಿದ್ದು, ಅಧಿಕೃತವಾಗಿ ನೋಂದಣಿ ಕೂಡ ಮಾಡಿಸಿತ್ತು. ಈ ಹಿಂದೆ ದಕ್ಷಿಣದ ಖ್ಯಾತ ನಟ ಮಹೇಶ್ ಬಾಬು ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಇಂಥದ್ದೊಂದು ನೋಂದಣಿ ಮಾಡಿಸಿದ್ದರು. ಅಲ್ಲದೇ, ಪುನೀತ್ ರಾಜ್ ಕುಮಾರ್ ಹೆಸರಿನಲ್ಲೂ ಒಂದು ನಕ್ಷತ್ರವಿದೆ. ಅಂಥದ್ದೊಂದು ಗೌರವ ಸುದೀಪ್ ಪಾಲಾಗಿತ್ತು. ಮೀನ ರಾಶಿಯ ನಕ್ಷತ್ರಪುಂಜದಲ್ಲಿ ಕಾಣಸಿಗುವ ನಕ್ಷತ್ರವೊಂದಕ್ಕೆ ಸುದೀಪ್ ಹೆಸರು ಇಡಲಾಗಿತ್ತು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್