– ಚಂದ್ರಬಾಬು ನಾಯ್ಡು ಬಾವುಟ ಹಾರಿಸಿದ್ರೆ ಮೋದಿ ಸರ್ಕಾರ ಉರುಳುತ್ತೆ ಎಂದ ಸಚಿವ
ಕೊಪ್ಪಳ: ಕೇಂದ್ರ ಬಿಜೆಪಿ ಐಸಿಯುನಲ್ಲಿದೆ, ಬಿಜೆಪಿಗೆ ಬಹುಮತ ಇಲ್ಲ. ಒಂದು ವೇಳೆ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಫ್ಲಾಗ್ ಹಾರಿಸಿದ್ರೆ ಮೋದಿ ಸರ್ಕಾರ ಉರುಳುತ್ತೆ. ಪ್ರಧಾನಿ ಮೋದಿಯ (PM Modi) ಬದಲಾವಣೆ ಏಕೆ ಆಗಬಾರದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ (Santosh Lad) ಕುಟುಕಿದ್ದಾರೆ.
ಕೊಪ್ಪಳದಲ್ಲಿ (Koppal) ಮಾತನಾಡಿದ ಸಚಿವರು, ನಾಯ್ಡು ಫ್ಲಾಗ್ ಹಾರಿಸಿದ್ರೆ ಕೇಂದ್ರ ಸರ್ಕಾರ ಬೀಳಲಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸದ್ಯ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಚಂದ್ರಬಾಬು ನಾಯ್ಡು (Chandrababu Naidu) ಫ್ಲಾಗ್ ಹಾರಿಸಿದ್ರೆ ಮೋದಿ ಸರ್ಕಾರ ಉರುಳಲಿದೆ ಅಂತ ಟೀಕಿಸಿದರಲ್ಲದೇ ಯಾಕೆ ಪ್ರಧಾನಿ ಮೋದಿ ಬದಲಾವಣೆ ಆಗಬಾರದು? ಅಂತಲೂ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಎಸಿಗಳು, ತಹಶೀಲ್ದಾರರು ಕಡ್ಡಾಯವಾಗಿ ಜನರಿಗೆ ಸಿಗಬೇಕು – ಕೃಷ್ಣ ಬೈರೇಗೌಡ ಫುಲ್ ಕ್ಲಾಸ್
ನಮ್ಮದು ಸುಭದ್ರ ಸರ್ಕಾರ
ನಾವು 137 ಶಾಸಕರಿದ್ದೇವೆ. ನಮ್ಮ ಸರ್ಕಾರ ಭದ್ರ, ಸಿಎಂ ಬದಲಾವಣೆಯೂ ಆಗುವುದಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಏನೂ ಆಗಿಲ್ಲ. ನಿಜವಾಗಿ ಕೇಂದ್ರ ಬಿಜೆಪಿ ಐಸಿಯುನಲ್ಲಿದೆ. ಬಿಜೆಪಿಗೆ ಬಹುಮತ ಇಲ್ಲ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಫ್ಲಾಗ್ ಹಾರಿಸಿದರೆ ಸರ್ಕಾರ ಉರುಳುತ್ತದೆ. ಸಿಎಂ ಬದಲಾವಣೆ ವಿಷಯ ಬಂದಾಗಲೆಲ್ಲ ನಾವು ಸಮರ್ಪಕ ಉತ್ತರ ಕೊಟ್ಟಿದ್ದೇವೆ. ಆದ್ರೆ ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಚುನಾವಣೆವರೆಗೂ ಬಿಜೆಪಿಗರು ಬರಿ ಮೋದಿ ಅಂತಾರೆ. ಹೀಗಾಗಿ ಮೋದಿ ಅವರ ಬಗ್ಗೆ ನಾವೇಕೆ ಮಾತನಾಡಬಾರದು? ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ಮೋದಿಗೂ 75 ವರ್ಷ ವಯಸ್ಸಾಗಿದೆ. ಆರ್‌ಎಸ್‌ಎಸ್ ನಾಯಕರೇ ಹೇಳಿದ್ದಾರೆ 75 ವರ್ಷ ಸಿಮೀತ ಅಂತ ಬದಲಾವಣೆ ಆದರೆ ತಪ್ಪೇನು? ಈ ಬಗ್ಗೆಯೂ ಬಿಜೆಪಿ ಮಾತನಾಡಬೇಕು ಅಂತ ಸಚಿವ ಲಾಡ್ ಕುಟುಕಿದರು.
ಇನ್ನು ರಾಜ್ಯದಲ್ಲಿ ಶಾಸಕರ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲ ಶಾಸಕರು ಆಡಳಿತ ಬಗ್ಗೆ ಆರೋಪ ಮಾಡಿದ್ದಾರೆ. ಅದರ ಭಾಗವಾಗಿ ಸುರ್ಜೇವಾಲಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಪಕ್ಷದಲ್ಲಿ ಶಿಸ್ತು ಕಾಪಾಡಬೇಕಿದೆ. ಅವರೇನೂ ಸೂಪರ್ ಸಿಎಂ ಅಲ್ಲ. ನಮ್ಮ ಕೇಂದ್ರದ ಹೈಕಮಾಂಡ್ ನಾಯಕರು ಅವರು. ಮೋದಿ ಅನೇಕ ಬಾರಿ ವಿದೇಶಕ್ಕೆ ಹೋಗುತ್ತಾರೆ. ಹಾಗಂತ ಅವರೇ ಆ ದೇಶದ ಸೂಪರ್ ಪ್ರಧಾನಿ ಆಗುತ್ತಾರಾ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಯುಜಿಸಿಇಟಿ: ಆಪ್ಷನ್ಸ್ ದಾಖಲಿಸಲು ಜುಲೈ 22ರವರೆಗೆ ದಿನಾಂಕ ವಿಸ್ತರಣೆ-ಕೆಇಎ
ಇನ್ನೂ ಗ್ಯಾರಂಟಿಗಳ ಬಗ್ಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜನರಿಗೆ ವರವಾಗಿವೆ. ಗೃಹಲಕ್ಷ್ಮಿ ಯೋಜನೆಯಡಿ ಹಣ ಬರುವುದು ಕೆಲ ತಿಂಗಳು ತಡವಾಗಿರಬಹುದು. ಆದರೆ, ಎಲ್ಲರಿಗೂ ಬರುತ್ತಿದೆ. ಚುನಾವಣೆ ವೇಳೆ ಮಾತ್ರ ಹಾಕುವುದಿಲ್ಲ. ಬಿಜೆಪಿಯವರಿಗೆ ಅಂಥ ಕೆಲಸ ಮಾಡಿ ಅಭ್ಯಾಸ ಇದೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ‘Sher’ Will Roar | ನಿಮಿಷಕ್ಕೆ 700 ಬುಲೆಟ್ ಹಾರಿಸಬಲ್ಲ `AK-203′ ರೈಫಲ್ ಸೇನೆಗೆ!