ಕೆಲ ಬಿಜೆಪಿಯವರು ಸಿಎಂ ಮಾತ್ರ ಅಲ್ಲ, ಪ್ರಧಾನಿಯನ್ನು ಬದಲಾವಣೆ ಮಾಡಬೇಕೆಂದು ಕೇಳ್ತಿದ್ದಾರೆ: ಸಂತೋಷ್ ಲಾಡ್

Public TV
1 Min Read

ಹುಬ್ಬಳ್ಳಿ: ರಾಜ್ಯದ ಸಿಎಂ ಬದಲಾವಣೆ ಮಾತು ಅಷ್ಟೇ ಅಲ್ಲಾ, ದೇಶದ ಪ್ರಧಾನಿ ಬದಲಾವಣೆ ಮಾಡಬೇಕೆಂದು ಕೆಲ ಬಿಜೆಪಿಯವರು ಕೇಳ್ತಿದ್ದಾರೆ ಎಂಬ ನನಗೆ ಮಾಹಿತಿ ಇದೆ ಎಂದು ಸಚಿವ ಸಂತೋಷ್ ಲಾಡ್ (Santosh Lad) ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ, 140 ಶಾಸಕರು ಇರುವ ಪಕ್ಷ. ಹೀಗಾಗಿ ಅಸಮಾಧಾನ ಸಹಜ, ಅವರ ಅಸಮಾಧಾನ ಪಕ್ಷದ ವಿರುದ್ಧ ಅಲ್ಲ. ಸುರ್ಜೇವಾಲ ಅವರು ಅವರ ಜೊತೆ ಮಾತನಾಡುತ್ತಿದ್ದಾರೆ. ಅವರ ಅಸಮಾಧಾನ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಹಗರಣ| ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ – ಎಸ್‌ಐಟಿ ರದ್ದು, ಸಿಬಿಐ ತನಿಖೆಗೆ ಆದೇಶ

ಕಲ್ಲಿದ್ದಲು ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲಾ ಅಂತ ಬಿಜೆಪಿ ಸರ್ಕಾರವೇ ಹೇಳಿದೆ. ಯುಪಿಎ ಸರ್ಕಾರದಲ್ಲಿ ಯಾವುದೇ ಹಗರಣ ಆಗಿಲ್ಲ ಎಂದು ಇದೇ ಬಿಜೆಪಿ ಸರ್ಕಾರ ರಿಪೋರ್ಟ್ ಹೇಳಿದೆ. ಇವರ 11 ವರ್ಷದ ಅವಧಿಯಲ್ಲಿ ಯಾರಿಗೆಲ್ಲಾ ಟೆಂಡರ್ ಕೊಟ್ಟಿದ್ದಾರೆ ಅಂತ ಬಿಜೆಪಿ ಹೇಳಲಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಹೆಚ್ಚುತ್ತಿರುವ ಹೃದಯಾಘಾತ – ಮೈಸೂರಿನ ಜಯದೇವ ಆಸ್ಪತ್ರೆಗೆ ತಪಾಸಣೆಗೆ ಬರುವವರ ಸಂಖ್ಯೆ ದಿಢೀರ್ ಏರಿಕೆ

ವಿಶ್ವಗುರು ಪವರಫುಲ್ ಅಂತ ಬರೀ ಹೇಳಿಕೊಂಡು ಅಡ್ಡಾಡಿದ್ರೆ ಸಾಲದು. ಪೆಹಲ್ಗಾಮ್ ಘಟನೆ ಬಗ್ಗೆ ಕೇಳಬಾರದಾ? ಸಮಸ್ಯೆಗಳ ಬಗ್ಗೆ ಮೊದಲು ಚರ್ಚೆ ಮಾಡಬೇಕು. ಚೀನಾ ಮತ್ತು ಭಾರತವನ್ನು ಹೋಲಿಸಿಕೊಂಡು ಮಾತನಾಡಿದರೆ, ಚೀನಾದ ವಸ್ತುಗಳನ್ನು ಬಳಸಬೇಡಿ ಅಂತ ಮೋದಿ ಹೇಳ್ತಾರೆ. ಆದರೆ ಅಲ್ಲಿನ ವಸ್ತುಗಳನ್ನು ಆಮದು ಮಾಡ್ತಿರೋದು ಯಾರು? ದೇಶದ ವಿಚಾರದಲ್ಲಿ ಪ್ರಶ್ನೆ ಕೇಳುವ ಅಧಿಕಾರವಿದೆ. ಬಿಜೆಪಿಯವರ ಫಾರಿನ್ ಪಾಲಿಸಿ ಫೇಲ್ ಆಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | CAT ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ – ಸಿಎಂ

ಪೆಟ್ರೋಲ್, ಡೀಸೆಲ್, ಸಿನಿಮಾ ಟಿಕೆಟ್ ಮೇಲೆ ಸೆಸ್ ಹಾಕೋ ವಿಚಾರವನ್ನು ಸರ್ಕಾರಕ್ಕೆ ತಿಳಿಸಿದ್ದೇವೆ. ಸ್ವಲ್ಪ ಪ್ರಮಾಣದಲ್ಲಿ ಸೆಸ್ ಹೆಚ್ಚು ಮಾಡುವುದರಿಂದ ಜನರಿಗೆ ಹೆಚ್ಚಿನ ಹೊರೆ ಆಗುವುದಿಲ್ಲ ಎಂದಿದ್ದಾರೆ.

Share This Article