– ಸಚಿವ ಸಂಪುಟ ಪುನಾರಚನೆ ಮಾಡುವುದಾದ್ರೆ ಸಿಎಂ-ಡಿಸಿಎಂಗೆ ಪೂರ್ಣ ಅಧಿಕಾರ
– 145 ಕೋಟಿ ಭಾರತೀಯರೂ ದೇಶ ಪ್ರೇಮಿಗಳೇ, RSSಗೆ ವಿಶೇಷವಾಗಿ ದೇಶ ಪ್ರೇಮ ಇಲ್ಲ; ಲೇವಡಿ
ಬೀದರ್: ಕೇಂದ್ರ ಬಿಜೆಪಿಯಲ್ಲೂ ʻನವೆಂಬರ್ ಕ್ರಾಂತಿʼ ಇದೆ. ನಿತಿನ್ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ ಎಂದು ಸಚಿವ ಸಂತೋಷ್ ಲಾಡ್ (Santosh Lad) ಹೊಸ ಬಾಂಬ್ ಸಿಡಿಸಿದ್ದಾರೆ.
ಬೀದರ್‌ನಲ್ಲಿ (Bidar) ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿನ್ನರ್ ಮೀಟಿಂಗ್‌ನಲ್ಲಿ ಸಂಪುಟ ಪುನರ್ ರಚನೆ (Cabinet reshuffle) ಬಗ್ಗೆ ಮಾತನಾಡಿಲ್ಲ. ಸಂಪುಟ ಪುನರ್‌ರಚನೆ ಮಾಡುವುದಾದ್ರೆ ಸಿಎಂ ಡಿಸಿಎಂಗೆ ಪೂರ್ಣ ಅಧಿಕಾರ ಇದೆ, ಮಾಡಲಿ. ಅಲ್ಲದೇ ನಮಗೂ ಕೇಂದ್ರದ ʻನವಂಬರ್ ಕಾಂತ್ರಿʼ ಬಗ್ಗೆ ಕುತೂಹಲವಿದೆ. ನಿತಿನ್ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ ಎಂದು ಹೇಳಿದ್ದಾರೆ.
RSSಗೆ ವಿಶೇಷ ದೇಶಪ್ರೇಮ ಇಲ್ಲ:
ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಆರ್‌ಎಸ್‌ಎಸ್ ಬ್ಯಾನ್ ಬಗ್ಗೆ ಮಾತನಾಡಿ, 145 ಕೋಟಿ ಭಾರತೀಯರೂ ದೇಶ ಪ್ರೇಮಿಗಳೇ ಆರ್‌ಎಸ್‌ಎಸ್‌ಗೆ ವಿಶೇಷವಾಗಿ ದೇಶ ಪ್ರೇಮ ಇಲ್ಲ. ಈ ಹಿಂದೇ 3 ಸಾವಿರ ಕೋಟಿ ಖರ್ಚು ಮಾಡಿ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ನಿರ್ಮಾಣ ಮಾಡಿದ್ದು ಅವರು ಕಾಂಗ್ರೆಸ್‌ನಲ್ಲಿ ಇದ್ದಾಗ ಪ್ರತಿಮೆ ಮಾಡಲು ಬಿಜೆಪಿ ವಿರೋಧ ಮಾಡಿದ್ರು ಎಂದು ಕುಟುಕಿದರು.
ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಗ್ಯಾರೆಂಟಿ ಹೊರೆಯಿಂದ ಅಭಿವೃದ್ಧಿ ಕುಂಟಿತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಲಾಡ್, ನಮ್ಮ ಗ್ಯಾರಂಟಿಗಳನ್ನ ಹಿಡಿದುಕೊಂಡು ಮೋದಿ ಓಡಾಡುತ್ತಿದ್ದಾರೆ. ಬಿಹಾರ್ ಎಲೆಕ್ಷನ್‌ನಲ್ಲಿ ಮಹಿಳೆಯರಿಗೆ ಒಂದು ಮತಕ್ಕೆ 10 ಸಾವಿರ ರೂ. ಕೊಡುತ್ತಿದ್ದಾರೆ. ಮೋದಿ ಸಾಹೇಬ್ರು ನಮ್ಮ ಗ್ಯಾರಂಟಿಗಳನ್ನ ಬಿಹಾರ ಚುನಾವಣೆಯಲ್ಲಿ ಬಳಸುತ್ತಿದ್ದಾರೆ ಎಂದು ಕಿಡಿ ಕಾರಿದರು.