Bigg Boss Kannada- ದೊಡ್ಡಪ್ಪನ ಮಾತು ಕೇಳಿ ತಾಳಿ ಕಟ್ಟಿದ್ದೆ: ವರ್ತೂರು ಸಂತೋಷ್

Public TV
2 Min Read

ನ್ನ ದೊಡ್ಡಪ್ಪನ ಮಾತು ಕೇಳಿ ತಾಳಿ ಕಟ್ಟಿದ್ದೆ. ನನ್ನ ತಾಯಿಯನ್ನ ಇಗ್ನೋರ್ ಮಾಡೋಕೆ ಆಕೆ ಶುರು ಮಾಡಿದ್ರು. ನನ್ನ ಜನ ಎಲ್ಲಾ ಬಿಟ್ಟು ಅವರ ಹಿಂದೆ ಹೋಗೋಕೆ ಆಗಲ್ಲ ನನಗೆ.  ಇಲ್ಲಿಂದ ಆಚೆ ಹೋದ್ಮೇಲೆ ಮನೆ ಹತ್ರ ಹೋಗ್ತೀನಿ. ನನ್ನ ಮಾತಿಗೆ ಒಪ್ಪಿ ಬಂದ್ರೆ ಅವರು ಈಗಲೂ ರಾಣಿನೇ. ಗೇಟಿಂದ ಆಚೆ ಹೋಗು ಅಂದಿದ್ರು. ಆವತ್ತೇ ಮಾತು ಕೊಟ್ಟು ಬಂದೆ. ಆ ಮಾತಿಗೆ ಇವತ್ತಿಗೂ ನಿಂತಿದೀನಿ. ಹೀಗೆ ಮದುವೆಯ ಸಂಪೂರ್ಣ ವಿಚಾರ   ಕೊನೆಗೂ ವರ್ತೂರ್ ಸಂತೋಷ್ ಬಾಯ್ಬಿಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ (Varthur Santhosh). ತಮ್ಮದು ಮದುವೆ ಆಗಿದ್ದು ನಿಜ. ನನ್ನ ಕಂಡಿಷನ್ ಗೆ ಒಪ್ಪಿ ಅವಳು ಮತ್ತೆ ಬಂದರೆ ರಾಣಿ ಹಾಗೆ ನೋಡ್ಕೋತೀನಿ ಅಂದಿದ್ದಾರೆ. ಮದುವೆ ಆದ ನಂತರ ಕುಟುಂಬದ ಬಗ್ಗೆ ಆಕೆಗೆ ತಾತ್ಸಾರ ಇತ್ತು. ಕುಟುಂಬ ಮತ್ತು ನಾನು ಸಂಪಾದಿಸಿದ ಜನರನ್ನು ತೊರೆದು ಬರುವಂತೆ ಹೇಳಿದರು. ಅದಕ್ಕಾಗಿ ನಾನು ಹೋಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಒಂದು ಕಡೆ ಬಿಗ್ ಬಾಸ್ ಕಾರಣದಿಂದ ವರ್ತೂರು ಸುದ್ದಿ ಆಗುತ್ತಿದ್ದರೆ, ಮತ್ತೊಂದು ಕಡೆ ಅವರು ಮದುವೆ (Marriage) ಆಗಿದ್ದಾರೆ ಎನ್ನಲಾದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಜಯಶ್ರೀ ಅನ್ನುವವರ ಜೊತೆ ಸಂತೋಷ್ ಈ ಹಿಂದೆ ಮದುವೆ ಆಗಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ಈ ಕುರಿತು ಬಿಗ್ ಬಾಸ್ ಮನೆಯಲ್ಲಿ ಯಾವತ್ತೂ ಸಂತೋಷ್ ಹೇಳಿಕೊಂಡಿರಲಿಲ್ಲ.

ಬಿಗ್ ಬಾಸ್ (Bigg Boss) ಮನೆಯ ಬಹುತೇಕ ಕಂಟೆಸ್ಟೆಂಟ್ ಗಳು ತಮ್ಮ ಸಂಬಂಧಗಳ ಕುರಿತು ಮಾತನಾಡಿದ್ದಾರೆ. ಮದುವೆ, ಲವ್, ಬ್ರೇಕ್ ಅಪ್, ಕ್ರಶ್, ಡಿವೋರ್ಸ್ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಹಳೆ ಲವರ್, ಹೊಸ ಲವ್ ಸ್ಟೋರಿ ಬಗ್ಗೆಯೂ ಹಂಚಿಕೊಂಡಿದ್ದಾರೆ. ಆದರೆ, ವರ್ತೂರು ಸಂತೋಷ್ ಮಾತ್ರ ಈವರೆಗೂ ತಮ್ಮ ಮದುವೆ ಬಗ್ಗೆ ಮಾತನಾಡಿರಲಿಲ್ಲಲ್ಲ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೂ ಅವರು ತಮ್ಮ ತಾಯಿಯನ್ನು ಮಾತ್ರ ಕರೆದುಕೊಂಡು ಬಂದಿದ್ದರು. ಹೆಂಡತಿ ಬಂದಿರಲಿಲ್ಲ.

 

ಮೊನ್ನೆಯಷ್ಟೇ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ, ವರ್ತೂರು ಸಂತೋಷ್ ಅವರ ಕುಚಿಕು ಗೆಳೆಯನಂತಿದ್ದ ಬುಲೆಟ್ ರಕ್ಷಕ್ , ಈ ಹಿಂದೆ ಸಂತೋಷ್ ಬಗ್ಗೆ ಮಾತನಾಡಿದ್ದರು. ಅವರು ಮನೆಯಿಂದ ಆಚೆ ಬಂದ ತಕ್ಷಣವೇ ಎಂಗೇಜ್ ಮೆಂಟ್ ಆಗಲಿದ್ದಾರೆ ಎಂದು ಹೇಳಿದ್ದರು. ಹಾಗಾಗಿ ವರ್ತೂರು ಮದುವೆ ಬಗ್ಗೆ ಅನೇಕ ಗೊಂದಲಗಳು ಎದ್ದಿವೆ. ಆದರೆ, ವರ್ತೂರು ಸಂತೋಷ್ ಅವರದ್ದೇ ಎನ್ನಲಾದ ಮದುವೆ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈಗ ಎಲ್ಲದಕ್ಕೂ ಸಂತೋಷ್ ಫುಲ್ ಸ್ಟಾಪ್ ಇಟ್ಟಿದ್ದಾರೆ.

Share This Article