ಮಕರ ಸಂಕ್ರಾಂತಿ. ಎಳ್ಳು ಬೆಲ್ಲ ತಿಂದು ಸಂಭ್ರಮಿಸುವ ಕಾಲ. ಮಕರ ಸಂಕ್ರಾಂತಿಯಂದು ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥವನ್ನು ಬದಲಾಯಿಸುತ್ತಾನೆ. ಇದೇ ಕಾರಣಕ್ಕೆ ಇದನ್ನ ಉತ್ತರಾಯಣ ಎಂದು ಕರೆಯುತ್ತಾರೆ.
ಮಕರ ಸಂಕ್ರಾಂತಿಯ ಈ ಹಬ್ಬವು ಹಲವು ರಾಶಿಯವರಿಗೆ ಹಲವು ರೀತಿಯ ಫಲಾಫಲಗಳನ್ನ ನೀಡಲಿದೆ. ಯಾವ ರಾಶಿಯವರಿಗೆ ಯಾವ ರೀತಿಯ ಫಲಾಫಲಗಳಿವೆ? ಯಾವ ರಾಶಿಯವರಿಗೆ ಸಂಕ್ರಾಂತಿ ಯೋಗವನ್ನು ತರಲಿದೆ ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ.
ಮೇಷ:ಸಾಧಾರಣ ಫಲ, ಹೊಸ ಹೂಡಿಕೆ ಬಗ್ಗೆ ವಿಶೇಷ ಗಮನವಿರಲಿ, ಹಳೆ ವ್ಯಾಜ್ಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಬೇಡ.
ವೃಷಭ: ಮಂಗಳಕರ, ಸಾಕಷ್ಟು ಆರ್ಥಿಕ ಲಾಭದ ಜೊತೆ ಸಾಲ ನೀಡಿದ್ದ ಹಣ ಈಗ ವಾಪಸ್ಸು ಬರಲಿದೆ.
ಮಿಥುನ: ಈ ವರ್ಷ ಮಿಶ್ರಫಲ ಇರಲಿದೆ , ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ , ಪ್ರಮೋಷನ್, ಹೊಸ ಉದ್ಯೋಗಕ್ಕೆ ಸೂಕ್ತ ಕಾಲವಲ್ಲ.
ಕರ್ಕ: ಶುಭಫಲ ಸಿಗಲಿದೆ, ವಿಳಂಬವಾಗಿದ್ದ ವಿವಾಹ ಕಾರ್ಯ ನೆರವೇರಲಿದೆ,ಶುಭ ಕಾರ್ಯಗಳಿಗೆ ಇದು ಸಕಾಲ, ಯೋಗ ಕೂಡಿ ಬಂದವರಿಗೆ ವಿವಾಹ ಭಾಗ್ಯ.
ಸಿಂಹ: ಬಹಳ ಎಚ್ಚರಿಕೆಯಿಂದ ಇರಬೇಕು, ಮುಂಗೋಪ ಬಿಡುವ ಮೂಲಕ ಅನಾಹುತಗಳನ್ನ ತಡೆಯಬೇಕು, ಉದ್ಯೋಗ ಮತ್ತು ಹಲವು ಕಡೆ ಸಾಧನೆಗೆ ಸಕಾಲ.
ಕನ್ಯಾ: ಅಂದುಕೊಂಡ ಕೆಲಸ ಎಲ್ಲವೂ ಸುಲಭವಾಗಿ ಆಗಲಿದೆ, ಔದ್ಯೋಗಿಕವಾಗಿ, ಕೌಟುಂಬಿಕವಾಗಿ ಸಾಕಷ್ಟು ಅನುಕೂಲ, ಉತ್ತಮ ಸಂವಹನ ಸಾಮರ್ಥ್ಯ ಇರುವುದರಿಂದ ಒಳ್ಳೆಯದಾಗಲಿದೆ, ಬಿಸಿನೆಸ್ ವ್ಯವಹಾರ ಸಾಕಷ್ಟು ಉತ್ತಮಗೊಳ್ಳಲಿದೆ.
ತುಲಾ: ಆರ್ಥಿಕ ಅನುಕೂಲವಾಗಲಿದೆ. ವ್ಯಾಪಾರ ಅಭಿವೃದ್ಧಿಯಾಗಲಿದೆ, ಖರೀದಿ, ಮಾರಾಟ, ಯಾವ ವ್ಯಾಪಾರ ಮಾಡಿದ್ರೂ ಲಾಭ, ರಿಯಲ್ ಎಸ್ಟೇಟ್ ಸೇರಿ ಯಾವುದೇ ವ್ಯಾಪಾರ ಮಾಡಿದ್ರು ಲಾಭ.
ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಸಂಕಷ್ಟದ ಸಮಯ, ಕೋರ್ಟ್ ಕಚೇರಿ ಅಲೆದಾಡೋ ಸಾಧ್ಯತೆ, ಹಳೆಯ ವ್ಯಾಜ್ಯಗಳ ಇತ್ಯರ್ಥಕ್ಕೆ ತರಾತುರಿ ಬೇಡ, ನಿಧಾನವಾದ್ರೂ ಮುಂದಿನ ದಿನಗಳಲ್ಲಿ ಅನುಕೂಲ. ಈ ರಾಶಿಯವರಿಗೆ ತಾಳ್ಮೆಯ ಅಗತ್ಯವಿದೆ, ಮೊಂಡುತನ, ಈಗಲೇ ಆಗಬೇಕೆಂಬ ತರಾತುರಿ ಬೇಡ.
ಧನಸ್ಸು: ಇದು ಉತ್ತಮ ಕಾಲ, ಉನ್ನತ ವ್ಯಾಸಂಗ, ಉದ್ಯೋಗದ ಕನಸಿದ್ದವರಿಗೆ ಶುಭ.
ಮಕರ: ಸಂಕ್ರಾಂತಿಯಿಂದ ಶುಭಫಲ, ಸ್ಥಿರಾಸ್ತಿ ವ್ಯವಹಾರ ಮಂಗಳಕರವಾಗಲಿದೆ .
ಕುಂಭ: ಸಾಧಾರಣ ಫಲಾಫಲ, 3 ತಿಂಗಳುಗಳವರೆಗೆ ಸ್ಥಳ ಬದಲಾವಣೆ ಬೇಡ, ಹೊಸ ಮನೆಗೆ ಶಿಫ್ಟ್, ಬಾಡಿಗೆ ಮನೆ ಬದಲಾವಣೆ ಬೇಡ, ಸ್ಥಾನಪಲ್ಲಟದಿಂದ ಹೆಚ್ಚು ತೊಂದರೆಯಾಗುವ ಸಾಧ್ಯತೆ.
ಮೀನ: ಮಧ್ಯಮ ಫಲಾಫಲ ತರಲಿದೆ, 50% ಶುಭ ಫಲ ಇದ್ದರೆ 50% ಅಶುಭ ಫಲ ಇರಲಿದೆ.

