‘ಸಂಜು ವೆಡ್ಸ್ ಗೀತಾ 2’ ಸಿನಿಮಾವನ್ನು ಅಪ್ಪು ಬಾಸ್‌ಗೆ ಅರ್ಪಿಸಿದ ನಾಗಶೇಖರ್

Public TV
1 Min Read

ನ್ನಡ ಸಿನಿಪ್ರೇಕ್ಷಕರಿಗೆ ನಿರ್ದೇಶಕ ನಾಗಶೇಖರ್ (Nagashekar) ಅವರು ಸಿಹಿಸುದ್ದಿ ನೀಡಿದ್ದಾರೆ. ‘ಸಂಜು ವೆಡ್ಸ್ ಗೀತಾʼ (Sanju Weds Geetha) ಸಿನಿಮಾ ನೋಡಿ ಮೆಚ್ಚಿಕೊಂಡ ಫ್ಯಾನ್ಸ್‌ಗೆ ಸೀಕ್ವೆಲ್ ಅನೌನ್ಸ್‌ಮೆಂಟ್‌ನಿಂದ ಈಗಾಗಲೇ ಬ್ರೇಕಿಂಗ್ ನ್ಯೂಸ್  ಕೊಟ್ಟಿದ್ದಾರೆ. ಈಗ ಈ ಸಿನಿಮಾವನ್ನು ತಮ್ಮ ಬದುಕಿನ ವಿಶೇಷ ವ್ಯಕ್ತಿಗೆ ಅರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:‘ಭರಾಟೆ’ ಬ್ಯೂಟಿಯ ಲೀಲೆಗೆ ಟಾಲಿವುಡ್ ಮಂದಿ ಬೋಲ್ಡ್

2011ರಲ್ಲಿ ‘ಸಂಜು ವೆಡ್ಸ್ ಗೀತಾ’ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಮತ್ತು ಮೋಹಕ ತಾರೆ ರಮ್ಯಾ (Ramya) ನಟಿಸಿ ಪ್ರೇಕ್ಷಕರ ದಿಲ್ ಗೆದ್ದಿದ್ದರು. ನಾಗಶೇಖರ್ ಕಥೆ, ನಿರ್ದೇಶನ, ಕಿಟ್ಟಿ-ರಮ್ಯಾ ನಟನೆ ಎಲ್ಲವೂ ಫ್ಯಾನ್ಸ್ ಕಿಕ್ ಕೊಟ್ಟಿತ್ತು. ಈಗ ಈ ಸಿನಿಮಾದ ಮುಂದುವರೆದ ಭಾಗ ಬರುತ್ತಿದೆ.

ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬದ ಸ್ಪೆಷಲ್ ಪೋಸ್ಟರ್ ರಿವೀಲ್ ಮಾಡಿ, ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸೀಕ್ವೆಲ್ ಬರೋದಾಗಿ ತಿಳಿಸಿದ್ದರು. ‘ಸಂಜು ಮತ್ತು ಗೀತಾ’ ಆಗಿ ಈ ಬಾರಿ ಶ್ರೀನಗರ ಕಿಟ್ಟಿ ಮತ್ತು ಡಿಂಪಲ್ ಬೆಡಗಿ ರಚಿತಾ ರಾಮ್(Rachitha Ram) ಕಾಣಿಸಿಕೊಳ್ತಿದ್ದಾರೆ. ಇದೆಲ್ಲದರ ನಡುವೆ ಈ ಚಿತ್ರವನ್ನು ಅಪ್ಪು ಬಾಸ್‌ ಪುನೀತ್‌ಗೆ ನಿರ್ದೇಶಕ ನಾಗಶೇಖರ್ ಅರ್ಪಣೆ ಮಾಡಿದ್ದಾರೆ.

ಹೀಗೆ ಸಿನಿಮಾವನ್ನು ಘೋಷಿಸಿದ್ದ ನಾಗಶೇಖರ್ ಸದ್ಯ ಚಿತ್ರದ ಲಾಂಚ್ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಇದೇ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15ರ ಸಂಜೆ 6.30ಕ್ಕೆ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ‘ಸಂಜು ವೆಡ್ಸ್ ಗೀತಾ 2’ ಲಾಂಚ್ ಆಗಲಿದೆ. ಈ ಕಾರ್ಯಕ್ರಮಕ್ಕೆ ವಿಶೇಷವಾದ ಆಮಂತ್ರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಆಮಂತ್ರಣದಲ್ಲಿ ತಮ್ಮ ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ನಿರ್ದೇಶಕ ನಾಗಶೇಖರ್ ತಮ್ಮ ಬಾಸ್ ಡಾ.ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಒಟ್ನಲ್ಲಿ ನಿರ್ದೇಶಕನ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್