ಸಂಜು ವೆಡ್ಸ್ ಗೀತಾ 2: ರಮ್ಯಾ ಬದಲು ರಚಿತಾ ಹೀರೋಯಿನ್?

By
2 Min Read

ನಾಗಶೇಖರ್ ಮತ್ತೆ ಸಂಜು ಮತ್ತು ಗೀತಾ ಹಿಂದೆ ಬಿದ್ದಿರುವ ವಿಚಾರ ಗೊತ್ತೇ ಇದೆ. 2011ರಲ್ಲಿ ತೆರೆಕಂಡ ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಪಾರ್ಟ್ 2 ಅನ್ನು ನಿರ್ದೇಶಕ ನಾಗಶೇಖರ್ ಮತ್ತೆ ಕೈಗೆತ್ತಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಕಾಂಬಿನೇಷನ್ ನ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು. ಇದೀಗ ಸಂಜು ವೆಡ್ಸ್ ಗೀತಾ 2 (Sanju Weds Geetha 2) ಸಿನಿಮಾ ಸೆಟ್ಟೇರಲು ರೆಡಿಯಾಗಿದ್ದು, ಗೀತಾ ಪಾತ್ರವನ್ನು ರಮ್ಯಾ ಮಾಡುತ್ತಾರಾ ಅಥವಾ ಬೇರೆ ನಾಯಕಿಯರು ಇರುತ್ತಾರಾ ಎನ್ನುವ ಪ್ರಶ್ನೆ ಮೂಡಿತ್ತು.

ನಾಗಶೇಖರ್ (Nagashekhar) ಆಪ್ತರು ಹೇಳುವಂತೆ, ಬಹುಶಃ ರಮ್ಯಾ (Ramya) ಅವರು ಈ ಸಿನಿಮಾದಲ್ಲಿ ಪಾತ್ರ ಮಾಡುತ್ತಿಲ್ಲವಂತೆ. ಹಾಗಾಗಿ ರಚಿತಾ ರಾಮ್ (Rachita Ram) ಜೊತೆ ನಿರ್ದೇಶಕರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಚಿತಾ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಶ್ರೀನಗರ ಕಿಟ್ಟಿ (Srinagar Kitty) ಹುಟ್ಟು ಹಬ್ಬದ ದಿನದಂದು ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಬಗ್ಗೆ ಸಣ್ಣದೊಂದು ಸುಳಿವು ಕೊಟ್ಟಿದ್ದರು ನಿರ್ದೇಶಕ ನಾಗಶೇಖರ್. ಕಿಟ್ಟಿ ಹುಟ್ಟು ಹಬಕ್ಕಾಗಿ ಈ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದರು ನಿರ್ದೇಶಕರು. ಈ ಪೋಸ್ಟರ್ ಕೇವಲ ಹುಟ್ಟುಹಬ್ಬಕ್ಕೆ ಮೀಸಲಾಗಿರುತ್ತದೆ ಎಂದು ಗಾಂಧಿನಗರ ಮಾತಾಡಿಕೊಂಡಿತು. ಆದರೆ, ನಾಗಶೇಖರ್ ಬೇಗ ಅಪ್ ಡೇಟ್ ನೀಡಿದ್ದಾರೆ. ಇದನ್ನೂ ಓದಿ:ರಚ್ಚು- ಸತೀಶ್ ನೀನಾಸಂ ಕಡೆಯಿಂದ ಗುಡ್ ನ್ಯೂಸ್- ‘ಮ್ಯಾಟ್ನಿ’ ಚಿತ್ರದ ಅಪ್‌ಡೇಟ್

ಸಂಜು ವೆಡ್ಸ್ ಗೀತಾ 2 ಸಿನಿಮಾದ ಮುಹೂರ್ತ ದಿನಾಂಕವನ್ನು ನಾಗಶೇಖರ್ ಫಿಕ್ಸ್ ಮಾಡಿದ್ದಾರೆ. ಆಗಸ್ಟ್ 15ರಂದು ಚಿತ್ರಕ್ಕೆ ಮುಹೂರ್ತವೆಂದು ನಾಗಶೇಖರ್ ಹೇಳಿಕೊಂಡಿದ್ದಾರೆ. ಮುಹೂರ್ತದ ನಂತರ ಶೂಟಿಂಗ್ ಯಾವಾಗ ಎಂದು ಅವರು ಹೇಳಿಕೊಂಡಿಲ್ಲ. ಒಂದು ಕಡೆ ನಾಗಶೇಖರ್ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ನಾಯಕಿಯ ವಿಚಾರ ಕೂಡ ಮುನ್ನೆಲೆಗೆ ಬಂದಿದೆ.

ಸಂಜು ಐ ಲವ್ ಯೂ ಎಂಬ ಡೈಲಾಗ್, ಸಂಜು-ಗೀತಾ ಲವ್ ಕಹಾನಿ 2011ರಲ್ಲಿ ಸಿನಿ ಪ್ರೇಕ್ಷಕರಿಗೆ ಕಮಾಲ್ ಮಾಡಿತ್ತು. ಮತ್ತೆ ಈ ಜೋಡಿ ಅದ್ಯಾವಾಗ ಸಂಜು ಮತ್ತು ಗೀತಾ ಒಟ್ಟಿಗೆ ಬರಲಿದ್ದಾರೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಈಗ ಸಿಹಿಸುದ್ದಿಯಂತೂ ಸಿಕ್ಕಿದೆ. ಮುಂದೆ ಏನೆಲ್ಲ ಬೆಳವಣಿಗೆ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್