ರಾಜಕೀಯ ಕಾರಣಕ್ಕೆ ಅಯೋಧ್ಯೆಗೆ ಬರುವವರನ್ನು ರಾಮ ಆಶೀರ್ವದಿಸುವುದಿಲ್ಲ: ರಾವತ್

Public TV
1 Min Read

ಮುಂಬೈ: ಶ್ರೀರಾಮಚಂದ್ರನು ನಕಲಿ ಭಾವನೆಗಳನ್ನು ಮತ್ತು ರಾಜಕೀಯ ಕಾರಣಗಳಿಗಾಗಿ ಅಯೋಧ್ಯೆಗೆ ಬರುವವರನ್ನು ಆಶೀರ್ವದಿಸುವುದಿಲ್ಲ ಎಂದು ಎಂಎನ್‍ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ಶಿವಸೇನಾ ಸಂಸದ ಸಂಜಯ್ ರಾವತ್ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನ ಬಳಿಗೆ ಹೋಗುವವರು ಸುಳ್ಳು ಭಾವನೆ ಮತ್ತು ರಾಜಕೀಯ ಕಾರಣಗಳಿದ್ದರೆ ಆಶೀರ್ವಾದ ಸಿಗುವುದಿಲ್ಲ. ಜೊತೆಗೆ ಜನರು ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಟೀಕಿಸಿದರು.

Raj Thackeray

ಇದೇ ಸಂದರ್ಭದಲ್ಲಿ ಆದಿತ್ಯ ಠಾಕ್ರೆ ಅಯೋಧ್ಯೆಗೆ ಹೋಗುವುದರ ಕುರಿತು ಮಾತನಾಡಿ, ಜೂನ್ 10ರ ಸುಮಾರಿಗೆ ಆದಿತ್ಯ ಠಾಕ್ರೆ ಅವರ ಅಯೋಧ್ಯೆ ಭೇಟಿ ನೀಡಲಿದ್ದಾರೆ. ಮಹಾರಾಷ್ಟ್ರ ಮತ್ತು ದೇಶಾದ್ಯಂತ ಶಿವಸೇನೆಯ ಕಾರ್ಯಕರ್ತರು ಅವರ ಜೊತೆಯಲ್ಲಿರುತ್ತಾರೆ. ಇದು ರಾಜಕೀಯವಲ್ಲ, ಆದರೆ ನಮಗೆ ನಂಬಿಕೆಯ ವಿಷಯವಾಗಿದೆ. ಹಿಂದುತ್ವದ ನಿಜವಾದ ಸಾರವನ್ನು ಎತ್ತಿ ಹಿಡಿಯಲು ಆದಿತ್ಯ ಠಾಕ್ರೆ ಅವರನ್ನು ಸಮಾಜದ ವಿವಿಧ ವರ್ಗಗಳಿಂದ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಕರೆ ನೀಡಿದ ನಂತರ ವಿವಾದವನ್ನು ಎಬ್ಬಿಸಿದ ರಾಜ್ ಠಾಕ್ರೆ, ಶ್ರೀರಾಮನ ಆಶೀರ್ವಾದ ಪಡೆಯಲು ಜೂನ್ 5ರಂದು ಅಯೋಧ್ಯೆಗೆ ಭೇಟಿ ನೀಡುವುದಾಗಿ ಘೋಷಿಸಿದ್ದರು. ಇದನ್ನೂ ಓದಿ: ಚಂದ್ರನ ಮಣ್ಣಿನಿಂದ ಆಮ್ಲಜನಕ, ಇಂಧನ ಉತ್ಪಾದಿಸಬಹುದು: ಚೀನಾ

ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ರಾಜ್ ಠಾಕ್ರೆ ಅವರ ಅಯೋಧ್ಯೆ ಭೇಟಿಯನ್ನು ವಿರೋಧಿಸಿದ್ದಾರೆ ಮತ್ತು ಉತ್ತರ ಭಾರತೀಯರನ್ನು ಅವಮಾನಿಸಿದಕ್ಕಾಗಿ ಸಾರ್ವಜನಿಕ ಕ್ಷಮೆಯಾಚಿಸುವವರೆಗೂ ರಾಜ್ ಠಾಕ್ರೆ ಅವರನ್ನು ನಗರಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಭಾರತೀಯರ ಕ್ಷಮೆ ಕೇಳುವವರೆಗೂ ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಬೇಡಿ ಎಂದು ವಿನಂತಿಸಿದ್ದರು. ಇದನ್ನೂ ಓದಿ: ತಾಜ್‌ ಮಹಲ್‌ ಹಿಂದೆ ʼತೇಜೋ ಮಹಾಲಯʼವಾಗಿತ್ತು, ಅಲ್ಲಿ ಹಿಂದೂ ವಿಗ್ರಹಗಳಿವೆ – ತನಿಖೆಗಾಗಿ ಕೋರ್ಟ್‌ಗೆ ಮನವಿ

Share This Article
Leave a Comment

Leave a Reply

Your email address will not be published. Required fields are marked *