ಕಾಂಗ್ರೆಸ್‍ನವರಿಗೆ ಚಡ್ಡಿ ಸುಡುವ ಅಭ್ಯಾಸ ಇದ್ರೆ ನಂದೂ ಚಡ್ಡಿ ಕೊಡ್ತೇನೆ, ಅದನ್ನು ಸುಡಲು ಹೇಳಿ: ಸಂಜಯ್ ಪಾಟೀಲ್

Public TV
1 Min Read

ಬೆಳಗಾವಿ: ಕಾಂಗ್ರೆಸ್‍ನವರಿಗೆ ಚಡ್ಡಿ ಸುಡೋದು ಅಭ್ಯಾಸ ಇದ್ರೆ ನಂದೂ ಚಡ್ಡಿ ಕೊಡುತ್ತೇನೆ, ಅದನ್ನೂ ಸುಡಲು ಹೇಳಿ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್‍ಎಸ್ ಸಂಘಟನೆಯ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ಸಿಗಿಲ್ಲ. ದೇಶಭಕ್ತಿ ಸಮಾಜಸೇವಾ ಸಂಘಟನೆ ಜೊತೆಗೆ ನಮಗೆ ಮಾರ್ಗದರ್ಶನವನ್ನು ಸಂಘ ಮಾಡುತ್ತದೆ. ಕಾಂಗ್ರೆಸ್‍ನವರು ಆರ್‌ಎಸ್‍ಎಸ್ ಬಗ್ಗೆ ಮಾತನಾಡುವ ಮೂಲಕ ಸೂರ್ಯನ ಮೇಲೆ ಉಗುಳು ಪ್ರಯತ್ನ ಮಾಡ್ತಿದ್ದಾರೆ. ಅದು ಅವರ ಮೇಲೆ ಬೀಳುತ್ತದೆ ಎಂದು ಟೀಕಿಸಿದರು.

Congress

ನೀವೂ ಕಾಂಗ್ರೆಸ್‍ಗೆ ಚಡ್ಡಿ ಕೊಡ್ತೀರಾ ಎಂಬ ಮಾಧ್ಯಮದವರ ಪ್ರಶ್ನೆ ವಿಚಾರಕ್ಕೆ, ನಂದೂ ಚಡ್ಡಿ ಕೊಡ್ತೇನಿ ಸುಡಾಕ್ ಹೇಳಿ. ಅವರಿಗೆ ಸುಡೋದು ಅಭ್ಯಾಸ ಇದ್ದರೆ ನಾವೇನು ಮಾಡಲು ಆಗುತ್ತದೆ. ನಂದ್ ಫೋನ್ ನಂಬರ್ ಕೊಡಿ ಅವರಿಗೆ. ಯಾವಾಗ ಬೇಕು ಅವಾಗ ನಾನು ಪರ್ಸನಲ್ ಆಗಿ ಕಳುಹಿಸಿ ಕೊಡುತ್ತೇನೆ. ಅವಶ್ಯಕತೆ ಬಿದ್ರೆ ನನಗೆ ತಿಳಿಸಿ ನಾನು ಕಳುಹಿಸಿ ಕೊಡುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹಿಜಬ್ ಧರಿಸಿ ಬಂದ 24 ವಿದ್ಯಾರ್ಥಿನಿಯರಿಗೆ 1 ವಾರ ತರಗತಿಗೆ ನಿರ್ಬಂಧ

ಆರ್‌ಎಸ್‍ಎಸ್ ಬಗ್ಗೆ ಪ್ರೀತಿಯಲ್ಲ ಕಾಂಗ್ರೆಸ್ ಖಿನ್ನತೆಗೆ ಒಳಗಾಗಿದೆ. ಪ್ರಧಾನಿ ನೇತೃತ್ವದಲ್ಲಿ ಪ್ರತಿಯೊಂದು ರಾಜ್ಯದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸಿದ್ದೇವೆ. ಒಂದು ಕಾಲದಲ್ಲಿ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿತ್ತು. ಇದೀಗ ವಿರೋಧ ಪಕ್ಷದ ಸ್ಥಾನವೂ ಸಿಗುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್ ಖಿನ್ನತೆಗೆ ಒಳಗಾಗಿ ಈ ತರಹ ಮಾಡುತ್ತಿದ್ದಾರೆ. ಇವತ್ತು ಬಿಜೆಪಿ ಅಧಿಕಾರಕ್ಕೆ ಬರಲು ಆರ್‌ಎಸ್‍ಎಸ್ ಕೊಡುಗೆ ಅಪಾರವಾಗಿದೆ. ಅವರ ಆಶೀರ್ವಾದ, ಮಾರ್ಗದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು

Share This Article
Leave a Comment

Leave a Reply

Your email address will not be published. Required fields are marked *