ಪಾಕ್ ಗೆಲುವಿನ ಬಳಿಕ ಸಾನಿಯಾ ಟ್ವೀಟ್ – ನೆಟ್ಟಿಗರಿಂದ ಟ್ರೋಲ್

Public TV
1 Min Read

ನವದೆಹಲಿ: 2019ರ ವಿಶ್ವಕಪ್ ನಲ್ಲಿ ಗೆಲುವಿನ ನಾಗಲೋಟದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಪಾಕಿಸ್ತಾನ ಬುಧವಾರ ಸೋಲಿನ ರುಚಿಯನ್ನು ತೋರಿಸಿದೆ. ಸತತ ಎರಡು ಸೋಲುಗಳಿಂದ ಟೀಕೆಗೊಳಗಾಗಿದ್ದ ಪಾಕ್ ತಂಡ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪಾಕ್ ತಂಡ ಗೆಲುವಿನ ಬಳಿಕ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಾಡಿರುವ ಟ್ವೀಟ್ ಟ್ರೋಲ್ ಆಗುತ್ತಿದೆ.

ಕಿವೀಸ್ ಪಡೆಯ ವಿರುದ್ಧ ಬಾಬರ್ ಅಜಮ್ ಅಜೇಯ ಶತಕದ ನೆರವಿನೊಂದಿಗೆ ಆರು ವಿಕೆಟ್ ಗಳ ಅಂತರದಲ್ಲಿ ಪಾಕ್ ಗೆಲುವು ದಾಖಲಿಸಿತ್ತು. ಗೆಲುವಿನ ಬಳಿಕ ಸಾನಿಯಾ ಮಿರ್ಜಾ ಟ್ವಿಟ್ಟರ್ What an incredibly great leveler sport can be ಎಂದು ಬರೆದುಕೊಂಡಿದ್ದರು. ಇದೀಗ ಸಾನಿಯಾರ ಟ್ವೀಟ್ ಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಮೆಂಟ್ ಮಾಡುವ ಮೂಲಕ ಭಿನ್ನ ಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಕಿವೀಸ್ ವಿರುದ್ಧದ ಪಂದ್ಯದಲ್ಲಿ ಪಾಕ್ ಶೋಯೆಬ್ ಮಲ್ಲಿಕ್ ರನ್ನು ಕೈ ಬಿಡಲಾಗಿತ್ತು. ತಂಡದಲ್ಲಿ ಶೋಯೆಬ್ ಮಲ್ಲಿಕ್ ರನ್ನು ಕೈಬಿಟ್ಟಿದ್ದರಿಂದ ಪಾಕಿಸ್ತಾನ ಗೆಲುವು ದಾಖಲಿಸಿದೆ. ಮತ್ತೆ ಕೆಲವರು ಜೀಜಾಜಿ (ಬಾವ) ಪಂದ್ಯದಲ್ಲಿ ಇರಬೇಕಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಟೀಂ ಇಂಡಿಯಾ ವಿರುದ್ಧ ಸೋಲುಂಡಾಗ ವೈರಲ್ ಆಗಿದ್ದ ಕೆಲ ಫೋಟೋಗಳನ್ನು ಬಳಸಿ ಟ್ವಟ್ಟಿಗರು ಸಾನಿಯಾ ಮಿರ್ಜಾರ ಕಾಲೆಳೆದಿದ್ದಾರೆ.

ಭಾರತದ ವಿರುದ್ಧ ಪಂದ್ಯದಲ್ಲಿ ಶೋಯೆಬ್ ಮಲ್ಲಿಕ್ ಶೂನ್ಯ ಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಾನಿಯಾ ಮಿರ್ಜಾ ಪತಿಯೊಂದಿಗೆ ಪಾರ್ಟಿ ಮಾಡಿದ್ದ ಫೋಟೋ ಮತ್ತು ವಿಡಿಯೋ ವೈರಲ್ ಆಗಿತ್ತು. ತಮ್ಮ ವಿಡಿಯೋ ಮಾಡಿದ್ದ ವ್ಯಕ್ತಿಗೆ ಸಾನಿಯಾ ಮಿರ್ಜಾ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಕ್ ನಟಿ ವೀಣಾ ಮಲ್ಲಿಕ್ ಮತ್ತು ಸಾನಿಯಾ ಮಿರ್ಜಾ ನಡುವೆ ದೊಡ್ಡ ಟ್ವೀಟ್ ಯುದ್ಧವೇ ನಡೆದಿತ್ತು.

ಪಾಕಿಸ್ತಾನದ ವಿರುದ್ಧ ಸೋಲಿನ ಬಳಿಕ ಕಿವೀಸ್ ಪಡೆ 11 ಅಂಕಗಳ ಮೂಲಕ ಎರಡನೇ ಸ್ಥಾನದಲ್ಲೇ ಮುಂದುವರಿದರೆ, ಪಾಕಿಸ್ತಾನ 7 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳನ್ನು ಜಯಿಸಿ 9 ಅಂಕ ಪಡೆದಿರುವ ಭಾರತ ಮೂರನೇ ಸ್ಥಾನದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *