ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟಿದೆ ಲೇಬಲ್ ಬಜಾರ್ ಫ್ಯಾಷನ್ ಡಿಸೈನರ್ ಪ್ರದರ್ಶನ

Public TV
2 Min Read

– ಬೆಂಗಳೂರಿನಲ್ಲಿ ಇಂದು ಈ ಫ್ಯಾಷನ್ ಪ್ರದರ್ಶನ ಆಕರ್ಷಣೆ
– ಪ್ರದರ್ಶನಕ್ಕೆ ಸಾನಿಯಾ ಮಿರ್ಜಾ ಚಾಲನೆ

ಬೆಂಗಳೂರು: ಭಾರತದ ಬಹು ಚರ್ಚಿತ ಆಭರಣ ಪ್ರದರ್ಶನದ ಲೇಬಲ್ ಬಜಾರ್ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದೆ. ಲೇಬಲ್ ಬಜಾರ್ ನ ಜಾಗತಿಕ ರಾಯಭಾರಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇಂದು ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಮಗುವಿನ ಜನ್ಮ ನೀಡಿದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಸಹೋದರಿ ಆನಂ ಮಿರ್ಜಾ ಅವರೊಂದಿಗೆ ಆಗಮಿಸಿದ ಸಾನಿಯಾ ಮಿರ್ಜಾ ಲೇಬಲ್ ಬಜಾರ್ ಫ್ಯಾಷನ್ ಡಿಸೈನರ್ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಫ್ಯಾಷನ್ ಪ್ರದರ್ಶನ ನಡೆದಿದ್ದು, ಜ್ಯುವೆಲ್ಲರಿ, ಮೇಕಪ್, ಔಟ್ ಫಿಟ್ ಫ್ಯಾಷನ್ ಆಕರ್ಷಣೆ, ಹೇರ್ ಮತ್ತು ಫೋಟೋಗ್ರಫಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ 15ಕ್ಕೂ ಹೆಚ್ಚು ಬ್ರಾಂಡ್ ಗಳು ಗ್ರಾಹಕರಿಗೆ ಫ್ಯಾಷನ್ ಲೋಕ ತೆರೆದಿಡಲಿವೆ. ಈಗಾಗಲೇ ದೇಶಾದ್ಯಂತ 14 ಯಶಸ್ವಿ ಪ್ರದರ್ಶನಗಳನ್ನು ನಡೆಸಿದ್ದು, ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಯುಬಿ ಸಿಟಿಯ ಸ್ಕೈಲಾಂಚ್ ನಲ್ಲಿ ಬಹು ನಿರೀಕ್ಷೆಯ ಪ್ರದರ್ಶನ ನಡೆಯಿತು.

ಪ್ರದರ್ಶನದ ಮುಖ್ಯ ಪ್ರಾಯೋಜಕರಾದ ಶ್ರೀಕೃಷ್ಣ ಜ್ಯುವೆಲ್ಲರ್ಸ್ ಸಹಯೋಗದಲ್ಲಿ ಪ್ರಶಸ್ತಿ ಪುರಸ್ಕೃತ ಡಿಸೈನರ್ಸ್ ವಿನ್ಯಾಸ ಪಡಿಸಿದ ವಜ್ರ ಮತ್ತು ಚಿನ್ನದ ಆಭರಣಗಳು ಈ ಪ್ರದರ್ಶನದಲ್ಲಿ ಮನಸೂರೆಗೊಂಡವು. ದಶಕಗಳಿಂದ ಶ್ರೀಕೃಷ್ಣ ಜ್ಯುವೆಲ್ಲರ್ಸ್ ಅತ್ಯುತ್ತಮ ಮತ್ತು ಅತಿ ವಿಶೇಷ ಆಭರಣಗಳಿಗೆ ಮನೆ ಮಾತಾಗಿದ್ದು ಹೈದರಾಬಾದ್, ಅಮೆರಿಕದ ಮಿಚಿಗನ್ ಮತ್ತು ಟೆಕ್ಸಾಸ್ ನಲ್ಲಿ ಶೋರೂಮ್ ತೆರೆದು ಆಭರಣ ಮಾರಾಟದಲ್ಲಿ ದಂತಕತೆಯಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಆಭರಣಗಳು ಮತ್ತು ರತ್ನಗಳ ವೈವಿಧ್ಯ ಶ್ರೇಣಿ ಮತ್ತು ವಿಶಿಷ್ಟ ಸಂಗ್ರಹ ಹೊಂದಿದೆ.

ಲೇಬಲ್ ಬಜಾರ್ ಪ್ರದರ್ಶನದಲ್ಲಿ ಆಭರಣಗಳ ಜೊತೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಶೂಗಳು ಹಾಗೂ ಬ್ಯಾಗ್ ಗಳು ದೊರೆಯಲಿವೆ. ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ರಾಯಭಾರಿ ಯಾಗಿರುವ ಈ ಪ್ರದರ್ಶನದಲ್ಲಿ ವೈವಿಧ್ಯಮಯ ಆಕರ್ಷಕ ಆಭರಣಗಳು, ವಸ್ತುಗಳು ಒಂದೆಡೆ ಮನಸೆಳೆದವು. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಶೇಷ ವಿನ್ಯಾಸಗಳ ಆಭರಣಗಳು ಪ್ರದರ್ಶನದ ಆಕರ್ಷಣೆಯಾಗಿದ್ದವು.

ಈಗಾಗಲೇ ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ದುಬೈನಲ್ಲಿ ಪ್ರದರ್ಶನ ನಡೆದಿದ್ದು, ಕ್ಲಾಸಿಕ್ ಮತ್ತು ಲಕ್ಸುರಿ ಬ್ರಾಂಡ್ ಗಳು ಎಲ್ಲೆಡೆ ಬೇಡಿಕೆ ಸೃಷ್ಟಿಸಿವೆ. ನಾನ್ ಕಾನ್, ಫೋರಂ, ದೀಪಾ ಬೈ ದೀಪಾ ಗುರುನಾನಿ ಯಶೋವರ್ಧನ್ ಬಹು ಬೇಡಿಕೆಯ ಬ್ರಾಂಡ್‍ಗಳು ಜಫ್ರಾನ್ ಕೋಚರ್ ಮತ್ತೊಂದು ಪ್ರಮುಖ ಆಕರ್ಷಣೆ.

ಲೇಬಲ್ ಬಜಾರ್ ಭಾರತದ ಪ್ರಮುಖ ಆಕರ್ಷಣೆಯಾಗಿದ್ದು ಅದರ ರಾಯಭಾರಿಯಾಗಿ ಪಾಲ್ಗೊಂಡಿರೊದಕ್ಕೆ ಹೆಮ್ಮೆ ಇದೆ. ಬೆಂಗಳೂರಿನಲ್ಲಿ ಬೇಡಿಕೆ ಇರೋದ್ರಿಂದ ಇಲ್ಲಿಗೆ ಬಂದಿದ್ದೇವೆ ಎಂದು ಸಾನಿಯಾ ಮತ್ತು ಆನಂ ಮಿರ್ಜಾ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *