ಮುಂಬೈ: ಸಾಂಗ್ಲಿ (Sangli) ಜಿಲ್ಲೆಯ ಇಸ್ಲಾಮ್‌ಪುರವನ್ನು (Islampur) ಈಶ್ವರಪುರ (Ishwarpur) ಎಂದು ಮರುನಾಮಕರಣಕ್ಕೆ ಮಹಾರಾಷ್ಟ್ರ ಸರ್ಕಾರ (Maharashtra Govt) ನಿರ್ಧರಿಸಿದೆ.
ಮಳೆಗಾಲ ಅಧಿವೇಶನ ಸಂಬಂಧ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಭಾಜಿ ಭಿಡೆ ನೇತೃತ್ವದ ಹಿಂದುತ್ವ ಸಂಘಟನೆಯಾದ ಶಿವ ಪ್ರತಿಷ್ಠಾನವು ಇಸ್ಲಾಂಪುರದ ಹೆಸರನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ಸಾಂಗ್ಲಿ ಜಿಲ್ಲಾಧಿಕಾರಿಗೆ ಜ್ಞಾಪಕ ಪತ್ರವೊಂದನ್ನು ಕಳುಹಿಸಿದ್ದರು. ಇದರ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.ಇದನ್ನೂ ಓದಿ: ಮೋದಿ ವರ್ಚಸ್ಸು ಕಡಿಮೆಯಾಗಿರೋದಕ್ಕೆ ಬಿಜೆಪಿ ಫ್ರೀ ಗ್ಯಾರಂಟಿಗಳನ್ನ ಘೋಷಿಸ್ತಿದೆ – ಹೆಚ್.ಎಂ.ರೇವಣ್ಣ
ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಛಗನ್ ಭುಜಬಲ್ ವಿಧಾನಸಭೆಯಲ್ಲಿ ಮಾತನಾಡಿ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ ರಾಜ್ಯ ಸರ್ಕಾರ ತೆಗೆದುಕೊಂಡ ಈ ನಿರ್ಧಾರದ ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಇಸ್ಲಾಂಪುರದಿಂದ ಬಂದ ಶಿವಸೇನಾ ನಾಯಕರೊಬ್ಬರು ಮಾತನಾಡಿ, ಹೆಸರು ಬದಲಾವಣೆಯ ಈ ಬೇಡಿಕೆ 1986ರಿಂದಲೂ ಬಾಕಿ ಇದೆ. ಸಂಭಾಜಿ ಭಿಡೆ ನೇತೃತ್ವದಲ್ಲಿರುವ ಶಿವ ಪ್ರತಿಷ್ಠಾನದ ಬೆಂಬಲಿಗರು ತಮ್ಮ ಬೇಡಿಕೆ ಈಡೇರುವವರೆಗೂ ಸುಮ್ಮನಾಗುವುದಿಲ್ಲ ಎಂದರು.ಇದನ್ನೂ ಓದಿ:ಬೀಚ್‌ನಲ್ಲಿ ಡೀಪ್ ಕಿಸ್ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ