ನೀಳ ಕೇಶರಾಶಿಗೆ ಕತ್ತರಿ ಹಾಕಿದ ಸಂಗೀತಾ ಭಟ್

1 Min Read

ರಡನೇ ಸಲ ಚಿತ್ರದ ನಟಿ, ಇತ್ತೀಚೆಗಷ್ಟೇ ಕಮಲ್ ಶ್ರೀದೇವಿ ಚಿತ್ರದ ಮೂಲಕ ಸೌಂಡ್ ಮಾಡಿದ್ದ ನಟಿ ಸಂಗೀತ ಭಟ್‌ (Sangeetha Bhat) ತಮ್ಮ ನೀಳ ಕೇಶರಾಶಿಗೆ ಕತ್ತರಿ ಪ್ರಯೋಗ ಮಾಡಿಸಿದ್ದಾರೆ. ಹೇರ್ ಕಟ್ ಮಾಡಿಸುವುದು ದೊಡ್ಡ ವಿಚಾರವಲ್ಲ. ಆದರೆ, ಯಾಕೆ ಸಂಗೀತ ಚಿಕ್ಕದಾಗಿ ಹೇರ್‌ಕಟ್ ಮಾಡಿಸಿದ್ದಾರೆ. ಕಟ್ ಮಾಡಿದ ಕೂದಲನ್ನ ಯಾವ ಕೆಲಸಕ್ಕೆ ಬಳಸುತ್ತಿದ್ದಾರೆ ಅನ್ನೋದು ವಿಶೇಷ.

ಹೌದು, ಸಂಗೀತ ಸ್ಯಾಂಡಲ್‌ವುಡ್‌ನಲ್ಲಿ ಉದ್ದ ತಲೆಕೂದಲಿನ ಸುಂದರಿ ಎಂದೇ ಫೇಮಸ್ ಆಗಿದ್ದವರು. ಇದೀಗ ಕಾರಣಾಂತರದಿಂದ ಕೊಂಚ ತಲೆಕೂದಲನ್ನಷ್ಟೇ ಉಳಿಸಿಕೊಂಡು ಪೂರ್ತಿ ಹೇರ್‌ಕಟ್ ಮಾಡಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ಸಂಗೀತ ಭಟ್ ಗರ್ಭಕೋಶ ಅನಾರೋಗ್ಯದ ಕಾರಣಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ತಲೆಕೂದಲು ಉದುರಲು ಆರಂಭಿಸಿದೆ. ಹೀಗಾಗಿ, ಕೂದಲನ್ನ ಕಟ್ ಮಾಡಿಸಿಕೊಳ್ಳಲು ಮನಸ್ಸು ಮಾಡಿದ್ದರು. ಈಗ ಸಂಗೀತ ಭಟ್ ನೀಳ ಜಡೆಯನ್ನೇ ಕಟ್ ಮಾಡಿಕೊಂಡಿದ್ದಾರೆ. ಆ ಕೂದಲನ್ನ ಕ್ಯಾನ್ಸರ್ ಪೀಡಿತ ಮಕ್ಕಳ ತಲೆಕೂದಲ ರೀಪ್ಲಾಂಟೇಷನ್‌ಗೆ ನೀಡಲಿದ್ದಾರಂತೆ ಸಂಗೀತ. ಹೀಗೆ ದುಃಖದಲ್ಲೂ ಮಾನವೀಯ ಮೌಲ್ಯಕ್ಕೆ ಒತ್ತು ಕೊಟ್ಟಿದ್ದಾರೆ ನಟಿ.

Share This Article