ಸಂಡೂರು ಉಪಚುನಾವಣೆ | ದಾಖಲೆ ಇಲ್ಲದ 27.50 ಲಕ್ಷ ನಗದು ಹಣ ಜಪ್ತಿ

Public TV
1 Min Read

ಬಳ್ಳಾರಿ: ಸಂಡೂರು (Sanduru) ವ್ಯಾಪ್ತಿಯ ಡಿ.ಬಸಾಪುರ ಗ್ರಾಮದ ಬಳಿ ಇರುವ ಆಂಧ್ರಪ್ರದೇಶದ (Andhra Pradesh) ಗಡಿಗೆ ಹೊಂದಿಕೊಂಡಿರುವ ಚೆಕ್‌ಪೋಸ್ಟ್‌ನಲ್ಲಿ ದಾಖಲೆಗಳು ಇಲ್ಲದೇ ಸಾಗಿಸಲಾಗ್ತಿದ್ದ 27.50 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿದೆ.

ಎಸ್‌ಎಸ್‌ಟಿ ತಂಡದ ಮುಖ್ಯಸ್ಥ ಅಲಗೇರಿ ಲಿಂಗಪ್ಪ ಅವರ ತಂಡವು ಜಪ್ತಿ ಮಾಡಿದ್ದು, ಹರಪನಹಳ್ಳಿ ಕಡೆಯಿಂದ ಬರುತ್ತಿದ್ದ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. 27.50 ಲಕ್ಷ ರೂ. ಸಿಕ್ಕ ಬೆನ್ನಲ್ಲೇ ಚುನಾವಣಾಧಿಕಾರಿಗಳು (Election Officials) ಕೇಸ್ ಅನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವರ್ಗಾಯಿಸಿದ್ದಾರೆ.

 

10 ಲಕ್ಷ ರೂ.ವರೆಗೆ  ಹಣ ಸಿಕ್ಕರೆ ಮಾತ್ರ ಚುನಾವಣಾಧಿಕಾರಿಗಳು ಜಪ್ತಿ ಮಾಡಲು ಅವಕಾಶ ಇದೆ. ಇಲ್ಲಿ 27.50 ಲಕ್ಷ ಹಣ ಸಿಕ್ಕಿದ್ದರಿಂದ ಅದನ್ನ ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು.

Share This Article