ಪಾಪರಾಜಿಗಳ ವಿರುದ್ಧ ಸ್ಯಾಂಡಲ್‌ವುಡ್ ತಾರೆಯರು ಹೊಸ ಅಭಿಯಾನ ಶುರುಮಾಡಿದ್ದಾರೆ. ಸಿನಿಮಾ ತಾರೆಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಮಗೆ ಆಗ್ತಿರೋ ತೊಂದರೆಯನ್ನು ಹೊರಹಾಕುತ್ತಿದ್ದಾರೆ.
ರಕ್ಷಿತಾ ಪ್ರೇಮ್ ಈ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದು, ಸಪ್ತಮಿ ಗೌಡ, ಮೋಹಕ ತಾರೆ ರಮ್ಯಾ, ನಟ ಯುವರಾಜ್‌ಕುಮಾರ್ ಸೇರಿದಂತೆ ಅನೇಕರು ಸಾಥ್ ಕೊಟ್ಟಿದ್ದಾರೆ. ಸುದ್ದಿಗೋಷ್ಠಿ ಹಾಗೂ ಕಾರ್ಯಕ್ರಮಗಳಲ್ಲಿ ನಟಿಯರ ಅಂಗಾಂಗ ಫೋಕಸ್ ಮಾಡಿ, ರೀಲ್ಸ್, ಮೀಮ್ಸ್, ಶಾರ್ಟ್‌ಗಳನ್ನು ಹಾಕುವ ಡಿಜಿಟಲ್ ಛಾಯಾಗ್ರಾಹಕರಿಗೆ ತಾರೆಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ಜೊತೆಗೆ ಇದನ್ನು ನಿಲ್ಲಿಸದಿದ್ದರೆ ಕ್ರಮ ಕೈಗೊಳ್ಳೋದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಗೃಹಲಕ್ಷ್ಮಿಯಾದ ಖುಷಿಯಲ್ಲಿ ಬಡವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ವಿಜಯ್ ದೇವರಕೊಂಡ
ಕಾರ್ಯಕ್ರಮದಲ್ಲಿ ತಾರೆಯರ ಖಾಸಗಿ ಸಮಯದಲ್ಲೂ ಮೊಬೈಲ್ ಕ್ಯಾಮೆರಾಗಳನ್ನ ಹಿಡಿಯುವುದನ್ನ ನಿಲ್ಲಿಸಲು ರಕ್ಷಿತಾ ಹಾಗೂ ಸಪ್ತಮಿ ಕರೆ ಕೊಟ್ಟಿದ್ದು, ಇದರಿಂದ ಯಾತನೆ ಅನುಭವಿಸಿರುವ ಕಲಾವಿದರೆಲ್ಲರೂ ಸಾಥ್ ಕೊಟ್ಟಿದ್ದಾರೆ. ಈ ಮೂಲಕ ಹೊಸ ಅಭಿಯಾನ ಕಿಚ್ಚು ಜೋರಾಗಿದೆ.
#ActorsNotObjects ಎಂಬ ಹ್ಯಾಷ್‌ಟ್ಯಾಗ್ ಮೂಲಕ ಆಂದೋಲಕ್ಕೆ ಚಾಲನೆ ಸಿಕ್ಕಿದ್ದು, ನಟಿಯರು ಪಾಪರಾಜಿಗಳ ಸಂಸ್ಕೃತಿ ವಿರುದ್ಧ ಧ್ವನಿ ಎತ್ತಿದ್ದಾರೆ. ಬಾಲಿವುಡ್‌ನಿಂದ ಬಂದ ಪಾಪರಾಜಿ ಸಂಸ್ಕೃತಿ ಸ್ಯಾಂಡಲ್‌ವುಡ್‌ನಲ್ಲಿ ಸಲ್ಲದು ಅನ್ನೋದೇ ಹೊಸ ಅಭಿಯಾನದ ಉದ್ದೇಶ. ಸದ್ಯಕ್ಕೀಗ ಒಬ್ಬಬ್ಬರಾಗೇ ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ. ವೀವ್ಸ್, ಲೈಕ್ಸ್ ಸಲುವಾಗಿ ತಮ್ಮನ್ನು ಅಸಭ್ಯವಾಗಿ ತೋರಿಸುವ ಸಂಸ್ಕೃತಿ ಸರಿ ಇಲ್ಲ ಅನ್ನುವುದು ಈ ಅಭಿಯಾನದ ಉದ್ದೇಶ. ಇತ್ತೀಚೆಗೆ ಥಿಯೇಟರ್‌ನಲ್ಲಿ ನಟಿ ಸಪ್ತಮಿ ಗೌಡ ಥಿಯೇಟರ್‌ನಲ್ಲಿ ಪೂಜೆ ಮಾಡ್ತಿದ್ದ ವೇಳೆ ಮೊಬೈಲ್ ಕ್ಯಾಮೆರಾಗಳು ಚಿತ್ರೀಕರಿಸಿದ್ದ ರೀತಿ ಸರಿ ಇಲ್ಲವೆಂದು ಸಪ್ತಮಿ ಗೌಡ ಪಾಪರಾಜಿಗಳ ಆಟಾಟೋಪಕ್ಕೆ ಬ್ರೇಕ್ ಹಾಕಬೇಕು ಎಂದಿದ್ದಾರೆ.ಇದನ್ನೂ ಓದಿ: ಮೋಜು, ಮಸ್ತಿ, ಡ್ಯಾನ್ಸ್ ಅದೊಂದು ಅದ್ಭುತ ರಾತ್ರಿ – ಸಂಗೀತ್ ಫೋಟೋ ಹಂಚಿಕೊಂಡ ವಿಜಯ್, ರಶ್ಮಿಕಾ


