ಸಸ್ಪೆನ್ಸ್, ಥ್ರಿಲ್ಲರ್‌ಗಳ ಆಗರ ಶಿವಾಜಿ ಸುರತ್ಕಲ್!

Public TV
1 Min Read

ಮೇಶ್ ಅರವಿಂದ ಅಭಿನಯದ ಆಕಾಶ್ ಶ್ರೀವತ್ಸ ನಿರ್ದೇಶನದ ಬಹು ನಿರೀಕ್ಷೆ ಮೂಡಿಸಿದ ಶಿವಾಜಿ ಸುರತ್ಕಲ್ ಚಿತ್ರ ಇಂದು ಯಶಸ್ವಿಯಾಗಿ ಬಿಡುಗಡೆಯಾಗಿದೆ. ಚಿತ್ರ ಸೆಟ್ಟೇರಿದ ದಿನದಿಂದಲೂ ಸದ್ದು ಮಾಡಿದ್ದ ಶಿವಾಜಿ ಸುರತ್ಕಲ್ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಶಿವಾಜಿ ಸುರತ್ಕಲ್ ಮಿಸ್ಟ್ರಿ, ಸಸ್ಪೆನ್ಸ್, ಥ್ರಿಲ್ಲರ್ ಕಥಾನಕವುಳ್ಳ ಸಿನಿಮಾ. ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ರಣಗಿರಿಯಲ್ಲಿ ನಡೆದ ಸಚಿವರ ಮಗನ ಕೊಲೆಯ ರಹಸ್ಯ ಬೇಧಿಸುವ ಜವಾಬ್ದಾರಿ ಹೊತ್ತ ಶಿವಾಜಿ ಸುರತ್ಕಲ್ ಅದು ಕೊಲೆಯೋ..? ಆತ್ಮಹತ್ಯೆಯೋ ಎಂಬುದನ್ನು ಭೇಧಿಸುವ ಸ್ಟೋರಿ ಚಿತ್ರದಲ್ಲಿದೆ. ಇತ್ತ ಶಿವಾಜಿ ಪತ್ನಿ ಜನನಿ ಕೂಡ ಅದೇ ಸಮಯದಲ್ಲಿ ಕಾಣೆಯಾಗಿ ಚಿತ್ರ ಮತ್ತೊಂದು ತಿರುವು ಪಡೆದುಕೊಳ್ಳುತ್ತೆ. ಈ ಘಟನೆ ಡಿಟೆಕ್ಟಿವ್ ಶಿವಾಜಿಗೆ ಅನುಮಾನ ಹುಟ್ಟಿಸಲು ಶುರು ಮಾಡುತ್ತದೆ. ಇದನ್ನು ಶಿವಾಜಿ ಹೇಗೆ ಬೇಧಿಸುತ್ತಾನೆ..? ಆತನಿಗೆ ಎದುರಾಗುವ ಸವಾಲುಗಳು, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ನೋಡುಗರನ್ನು ಸೀಟಿನ ತುದಿ ಕೂರುವಂತೆ ಮಾಡಿಸುತ್ತೆ. ಜನನಿ ಸಿಗ್ತಾಳಾ..? ಸಚಿವರ ಮಗನ ಕೊಲೆಗಾರರು ಸಿಗ್ತಾರಾ ಅನ್ನೋ ಕುತೂಹಲ ನಿಮಗಿದ್ರೆ ನೀವು ಸಿನಿಮಾ ನೋಡ್ಲೇಬೇಕು.

ರೋಚಕ ಚಿತ್ರಕಥೆ ಹಾಗೂ ಕಥೆಯ ಮೇಲಿನ ನಿರ್ದೇಶಕರ ಹಿಡಿತ ಪ್ರೇಕ್ಷಕರನ್ನು ಕ್ಷಣ ಕ್ಷಣಕ್ಕೂ ಹಿಡಿದಿಡುತ್ತೆ. ಎಲ್ಲಾ ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಸಿನಿಮಾಗಳಂತೆ ಶಿವಾಜಿ ಸುರತ್ಕಲ್ ಸಿನಿಮಾ ಇದ್ದರೂ ಕೂಡ ಆ ಎಲ್ಲಾ ಚಿತ್ರಕ್ಕೆ ಹೋಲಿಕೆ ಮಾಡಿದ್ರೆ ಈ ಚಿತ್ರ ಒಂದು ಹೆಜ್ಜೆ ಮುಂದೆ ಇದೆ. ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಅಷ್ಟು ಪರ್ಫೆಕ್ಷನ್ ಇದೆ. ಹಿನ್ನೆಲೆ ಸಂಗೀತ, ಕ್ಯಾಮೆರಾ ವರ್ಕ್, ಸಂಕಲನ, ಚಿತ್ರಕಥೆ, ಕಲಾವಿದರ ಅಭಿನಯ ಎಲ್ಲವೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪತ್ತೇದಾರಿ ಕಥೆಯನ್ನು ಇಷ್ಟಪಡುವರಿಗೆ ಈ ಸಿನಿಮಾ ಸಖತ್ ಥ್ರಿಲ್ ಕೊಡಲಿದೆ.

ಚಿತ್ರ: ಶಿವಾಜಿ ಸುರತ್ಕಲ್
ನಿರ್ದೇಶಕ: ಆಕಾಶ್ ಶ್ರೀವತ್ಸ
ನಿರ್ಮಾಪಕ: ರೇಖಾ.ಕೆ.ಎನ್, ಅನೂಪ್ ಗೌಡ
ಸಂಗೀತ: ಜ್ಯೂಡಾ ಸ್ಯಾಂಡಿ
ಛಾಯಾಗ್ರಹಣ: ಗುರುಪ್ರಸಾಧ್.ಎಂ.ಜಿ
ತಾರಾಬಳಗ: ರಮೇಶ್‍ಅರವಿಂದ್, ರಾಧಿಕಾ ನಾರಾಯಣ್, ಆರೋಹಿ, ಅವಿನಾಶ್, ರಘು ರಾಮನಕೊಪ್ಪ, ಇತರರು.

Rating: 4/5

Share This Article
Leave a Comment

Leave a Reply

Your email address will not be published. Required fields are marked *