ಅಮ್ಮ ತೆಗೆದ ತಂಗಿ ಜೊತೆಗಿನ ಫೋಟೋ ಶೇರ್ ಮಾಡಿದ ರಶ್ಮಿಕಾ

Public TV
1 Min Read

ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸಹೋದರಿಯೊಂದಿಗೆ ಇರುವ ಅಪರೂಪದ ಫೋಟೋವನ್ನು ಶೇರ್ ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳೊಂದಿಗೆ ಬ್ಯುಸಿಯಾಗಿರುವ ಮಂದಣ್ಣ ಅವರು ಸದ್ಯ ಶೇರ್ ಮಾಡಿರುವ ಫೋಟೋ ಬಹು ವಿಶೇಷವಾಗಿದೆ.

ನಾನು, ನನ್ನ ಸಹೋದರಿ ಒಂದೇ ಕಲರ್ ಡ್ರೆಸ್ಸಿನಲ್ಲಿ ಇರುವ ಸಂದರ್ಭದಲ್ಲಿ ಅಮ್ಮ ತೆಗೆದಿರುವ ಅಪರೂಪದ ಫೋಟೋ ಎಂದು ಅಭಿಮಾನಿಗಳೊಂದಿಗೆ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

 

View this post on Instagram

 

When you match clothes with your sister. And mum gets a good shot of the vibe.????♥️ #sisterlove #whiteandblack

A post shared by Rashmika Mandanna (@rashmika_mandanna) on


‘ಚಲೋ’ ಸಿನಿಮಾ ಮೂಲಕ ಟಾಲಿವುಡ್ ಪ್ರವೇಶ ಮಾಡಿದ್ದ ರಶ್ಮಿಕಾ ಮಂದಣ್ಣ, ‘ಗೀತಾ ಗೋವಿಂದಂ’ ಚಿತ್ರದ ಮೂಲಕ ಸೂಪರ್ ಹಿಟ್ ಪಡೆದಿದ್ದರು. ಅಲ್ಲದೇ ಮತ್ತೊಮ್ಮೆ ನಟ ವಿಜಯ್ ದೇವರಕೊಂಡ ಅವರೊಂದಿಗೆ ‘ಡೀಯರ್ ಕಾಮ್ರೇಡ್’ ಸಿನಿಮಾ ಮಾಡಿದರು. ಸದ್ಯ ಮಂದಣ್ಣ ಅವರು ಮಹೇಶ್ ಬಾಬು ಹಾಗೂ ಅನಿಲ್ ರಾವಿಪೂಡಿ ಕಾಂಬಿನೇಷನ್ನಲ್ಲಿ ಬರುತ್ತಿರುವ ‘ಸರಿಲೇರು ನೀಕೆವ್ವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ವಿಜಯಶಾಂತಿ, ಪ್ರಕಾಶ್ ರಾಜ್, ರಮ್ಯ ಕೃಷ್ಣ, ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವು ಪ್ರಮುಖ ನಟರು ಅಭಿನಯಿಸುತ್ತಿದ್ದಾರೆ.

ತಮಿಳು ಚಿತ್ರರಂಗದಲ್ಲೂ ಬಿಗ್ ಸ್ಟಾರ್ ರೊಂದಿಗೆ ಸಿನಿಮಾ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಅವರು,  ನಟ ಕಾರ್ತಿ ಅವರೊಂದಿಗೆ ‘ಸುಲ್ತಾನ್’ ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ರೆಮೋ ಖ್ಯಾತಿಯ ಭಾಗ್ಯರಾಜ್ ಕಣ್ಣನ್ ನಿರ್ದೇಶನ ಮಾಡುತ್ತಿದ್ದು, ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿ ಎಸ್.ಆರ್ ಪ್ರಭು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿವೇಕ್ ಮರ್ವೀನ್ ಸಂಗೀತ ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *