ಸ್ನೇಹಿತೆಯ ಮದುವೆಗಾಗಿ ಬೆಂಗಳೂರಿಗೆ ಬಂದಿಳಿದ ರಶ್ಮಿಕಾ ಮಂದಣ್ಣ

Public TV
2 Min Read

ನ್ನಡದ `ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ, ಈಗ ಬಾಲಿವುಡ್ ಟಾಲಿವುಡ್ ಹೀಗೆ ಎಲ್ಲಾ ವುಡ್‌ಗಳಲ್ಲೂ ಮಿಂಚ್ತಾ ವೃತ್ತಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟೆಲ್ಲಾ ಕೆಲಸಗಳ ಮಧ್ಯೆ ಕೊಂಚ ಬಿಡುವು ಮಾಡಿಕೊಂಡು ಗೆಳತಿಯ ಮದುವೆಗಾಗಿ ಬಂಗಳೂರಿಗೆ ಬಂದಿಳಿದಿದ್ದಾರೆ. ಇನ್ನು ಗೆಳತಿಗಾಗಿ ವಿಶೇಷ ಸಾಲುಗಳ ಜತೆ ನವದಂತಿಗಳ ಜೊತೆ ಫೋಟೋ ಭಾರೀ ವೈರಲ್ ಆಗಿದೆ.

ಬಣ್ಣದ ಲೋಕದಲ್ಲಿ ಅದೃಷ್ಟ ನಟಿಯಾಗಿ ಅಭಿಮಾನಿಗಳ ಮನ ಬೆಳಗುತ್ತಿರೋ ರಶ್ಮಿಕಾ, ಎಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲೂ ತಮ್ಮ ಚಿತ್ರಗಳ ಮೂಲಕ ಹಾವಳಿ ಕೊಡ್ತಿದ್ದಾರೆ. ಇಷ್ಟೇಲ್ಲಾ ಬ್ಯುಸಿಯಿರೋ ನಟಿ ಈಗ ತಮ್ಮ ಕುಟುಂಬಕ್ಕೂ ಆಪ್ತ ಸ್ನೇಹಿತೆಯರಿಗಾಗಿ ಬಿಡುವು ಮಾಡಿಕೊಂಡು ಕೊಡಗು ಮತ್ತು ಬೆಂಗಳೂರಿನಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ. ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

ಇತ್ತೀಚೆಗಷ್ಟೇ ಕೊಡಿಗಿನ ಕುವರಿ ತನ್ನ ಬಾಲ್ಯದ ಸ್ನೇಹಿತೆ ರಾಗಿಣಿ ಮದುವೆಗಾಗಿ ತನ್ನ ಹುಟ್ಟುರಿಗೆ ಬಂದು ಮದುವೆ ಅಟೆಂಡ್ ಆಗಿ ಮಿಂಚಿದ್ದರು. ಈಗ ಮತ್ತೋರ್ವ ಸ್ನೇಹಿತೆ ಮದುವೆಗಾಗಿ ಬೆಂಗಳೂರಿಗೆ ಆಗಮಿಸಿ, ಗಣಪತಿ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ ಬಳಿಕ ಸ್ನೇಹಿತೆ ಅಪೇಕ್ಷಾ ಮತ್ತು ವರುಣ್ ದಂಪತಿಗೆ ಶುಭಹಾರೈಸಿದ್ದಾರೆ. ಅಷ್ಟೇ ಅಲ್ಲ, ನವದಂಪತಿ ಜತೆಗಿನ ಫೋಟೋ ಹಾಕಿ ವಿಶೇಷ ಸಾಲುಗಳನ್ನು ಬರೆದು ರಶ್ಮಿಕಾ ಹಾರೈಸಿದ್ದಾರೆ. ಇದನ್ನೂ ಓದಿ: ಸಿನಿಮಾಗಾಗಿ ಕಂಬಳದ ಕೋಣ ಓಡಿಸಿದ ರಿಯಲ್ ಹೀರೋ ಶ್ರೀನಿವಾಸ್ ಗೌಡ

ನೀವು ಭೇಟಿಯಾದ ದಿನದಿಂದ, ನೀವು ಸ್ನೇಹಿತರಾಗುವ ದಿನದವರೆಗೆ ಮತ್ತು ನೀವು ಡೇಟಿಂಗ್ ಮಾಡಿದ ದಿನದಿಂದ ಮದುವೆ ಆಗುವವರೆಗೂ ಸಾಕ್ಷಿಯಾಗಿದ್ದೇನೆ. ನಾನು ನಿಮ್ಮಿಬ್ಬರನ್ನು ಪ್ರೀತಿಸುತ್ತೇನೆ. ನೀವು ನನ್ನ ಜೀವನದಲ್ಲಿ ಇರುವುದು ಖುಷಿಯ ವಿಚಾರ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬೆಳಿಗ್ಗೆ ಮದುವೆ ಆಗುತ್ತಿದ್ದಂತೆ ವಿಮಾನ ಹತ್ತಿ ಮುಂಬೈಗೆ ಹಾರಿದ್ದಾರೆ ಸಂಜೆ ಕರಣ್ ಜೋಹರ್ ಬರ್ತಡೇ ಪಾರ್ಟಿ ಅಟೆಂಡ್ ಮಾಡಿದ್ದಾರೆ. ಒಟ್ನಲ್ಲಿ ರಶ್ಮಿಕಾ ಸ್ಟಾರ್ ನಟಿಯಾಗಿದ್ದರು, ಈ ಹಿಂದಿನ ಸ್ನೇಹಿತರನ್ನ ಮರಿಯದೇ ಪ್ರತಿಯೊಬ್ಬರ ಸಂಭ್ರಮದಲ್ಲಿ ತಾನು ಖುಷಿಪಡುತ್ತಾ ಇರೋದನ್ನ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *