‘ಜೈ ಶ್ರೀರಾಮ್’ ಎನ್ನುತ್ತಾ ಮುಸ್ಲಿಂ ಹತ್ಯೆ ವಿಚಾರ: ಸಾಯಿ ಪಲ್ಲವಿ ಬೆಂಬಲಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

Public TV
2 Min Read

ನಾನು ನ್ಯೂಟ್ರಲ್ ಕುಟುಂಬದಲ್ಲಿ ಜನಿಸಿದವಳು. ಮಾನವತಾವಾದವನ್ನ ಕಲಿತಿದ್ದೇನೆ. ಯಾರು ದಮನಿತರೋ ಅವರನ್ನ ರಕ್ಷಿಸಬೇಕೆಂದು ಕಲಿತಿದ್ದೇನೆ. ನಾನು ಬಲ ಪಂಕ್ತಿ ಎಡ ಪಂಕ್ತಿ ಬಗ್ಗೆ ಕೇಳಿದ್ದೇನೆ. ಆದರೆ ಯಾರದು ಸರಿ, ಯಾರದು ತಪ್ಪು ಅಂತ ನನಗೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಕಾಶ್ಮೀರಿ ಫೈಲ್ಸ್ ನೋಡಿದಾಗ  ಅದರಲ್ಲಿ ಕಾಶ್ಮೀರಿ ಪಂಡಿತರನ್ನು ಅಮಾನುಶವಾಗಿ ಸಾಯಿಸಲಾಯಿತು ಎಂದಿದೆ. ಆದರೆ ಇತ್ತೀಚೆಗೆ ಒಂದು ಘಟನೆ ನೋಡಿದಾಗ ಓರ್ವ ಮುಸ್ಲಿಂ ಡ್ರೈವರ್ ಹಸುಗಳನ್ನ ಸಾಗಿಸುತ್ತಿದ್ದಾಗ ಆತನ ಮೇಲೆ ಗುಂಪೊಂದು ಎಗರಿಬಿದ್ದು ಹೊಡೆದು ಬಡಿದು ಜೈ ಶ್ರೀರಾಮ್ ಎಂದು ಹೇಳಿಸಲಾಯಿತು. ಈ ಎರಡು ಘಟನೆ ನೋಡಿದಾಗ ಯಾವ ನಿರ್ಧಾರಕ್ಕೆ ಬರಲಾಗುತ್ತದೆ ಹೇಳಿ? ಎಂದು ಹೇಳುವ ಮೂಲಕ ಭಾರೀ ವಿವಾದ ಸೃಷ್ಟಿಸಿಕೊಂಡಿದ್ದಾರೆ ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ.

ವಿರಾಟ ಪರ್ವಂ ಸಿನಿಮಾದ ಪ್ರಚಾರದ ವೇಳೆ ನಡೆದಿದೆ ಎನ್ನಲಾದ ಸಂದರ್ಶನದಲ್ಲಿ ಅವರು ಈ ರೀತಿಯ ಮಾತುಗಳನ್ನು ಆಡಿದ್ದಾರೆ. ಆ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಸದಾ ತುಳಿತಕ್ಕೊಳಗಾದವರನ್ನ ರಕ್ಷಿಸಬೇಕು. ಸತ್ಯ ಯಾವುದರ ಕಡೆ ಇದೆ ? ಬಲದ ಕಡೆಯಾ ಎಡದ ಕಡೆಗಾ ? ನಾನು ಈ ವಿಚಾರದಲ್ಲಿ ತುಂಬಾ ನ್ಯೂಟ್ರಲ್ ಎಂದೂ ವೀಡಿಯೋದಲ್ಲಿ ಹೇಳಿದ್ದಾರೆ. ಸಾಯಿ ಪಲ್ಲವಿ ಅವರ ಈ ವಿಚಾರವನ್ನು ನಟಿ, ಮಾಜಿ ಸಂಸದೆ ರಮ್ಯಾ ಬೆಂಬಲಿಸಿದ್ದಾರೆ. ಸಾಯಿ ಪಲ್ಲವಿಗೆ ಸತ್ಯವನ್ನ ಮಾತನಾಡುವ ಶಕ್ತಿ ಇದೆ ಎಂದು ಬರೆದು, ಚಪ್ಪಾಳೆ ಚಿನ್ಹೆ ಮೂಲಕ ಬೆಂಬಲಕ್ಕೆ ನಿಂತಿದ್ದಾರೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಇವರ ಮಾತಿಗೆ ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *