‘ಅಭಿ’ ಚಿತ್ರಕ್ಕೆ 20 ವರ್ಷ- ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ ರಮ್ಯಾ

Public TV
1 Min Read

ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar)  ‘ಅಭಿ’ ಸಿನಿಮಾಗೆ ನಾಯಕಿಯಾಗುವ ಮೂಲಕ ರಮ್ಯಾ ಚಂದನವನಕ್ಕೆ ಎಂಟ್ರಿ ಕೊಟ್ಟರು. ಇದೀಗ ‘ಅಭಿ’ (Abhi Film) ಸಿನಿಮಾ ತೆರೆಕಂಡು ಇಂದಿಗೆ 20 ವರ್ಷಗಳಾಗಿದೆ. ಅಪ್ಪು ಜೊತೆಗಿನ ಚಿತ್ರೀಕರಣದ ಸಮಯ ನೆನಪುಗಳನ್ನ ರಮ್ಯಾ (Ramya) ಮೆಲುಕು ಹಾಕಿದ್ದಾರೆ.

20 ವರ್ಷದ ಹಿಂದಿನ ಫೋಟೋಗಳನ್ನ ಶೇರ್ ಮಾಡುತ್ತಿದ್ದೇನೆ. ನನ್ನ ಮೊದಲ ಸಿನಿಮಾ ಅಭಿ ಚಿತ್ರದ ಫೋಟೋಗಳಿವು. ಮೊದಲ ಫೋಟೋ ಸೈಂಟ್ ಜೋಸೆಫ್ ಕಾಲೇಜ್‌ನಲ್ಲಿ ತೆಗೆದಿದ್ದು. ‘ಸುಮ್ ಸುಮ್ನೆ’ ಸಾಂಗ್ ಶೂಟಿಂಗ್ ಸಮಯದ್ದು ಎಂದಿದ್ದಾರೆ. 2ನೇ ಫೋಟೋ ಚಿಕ್ಕಮಗಳೂರು ಶೂಟಿಂಗ್‌ನ ಕೊನೆಯ ದಿನ ಕ್ಲಿಕ್ ಮಾಡಿದ್ದು. ‘ಈ ನನ್ನ ಕಣ್ಣನೆ’ ಹಾಡಿಗಾಗಿ ನಾವು ಶೂಟಿಂಗ್ ಮಾಡಿದ್ದೆವು ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

 

View this post on Instagram

 

A post shared by Ramya|Divya Spandana (@divyaspandana)

ಮೂರನೇ ಫೋಟೋ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ ನಂತರ ನನ್ನ ತಂದೆ ಆಯೋಜಿಸಿದ ಪಾರ್ಟಿಯದ್ದು ಎಂದು ಹೇಳಿದ್ದಾರೆ ರಮ್ಯಾ. ಅವರ ಫೋಟೋಗಳು ಅಭಿಮಾನಿಗಳನ್ನೂ ಹಳೆಯ ದಿನಗಳಿಗೆ ಕರೆದೊಯ್ದಿದೆ.ನಾಲ್ಕನೇ ಫೋಟೋ ಸಿನಿಮಾ 100 ದಿನ ತಲುಪಿದ ಸಂಭ್ರಮದ್ದು. ಅಪ್ಪಾಜಿ ನನಗೆ ಮೊಮೆಂಟೋ ಕೊಟ್ಟರು. ಶೂಟಿಂಗ್‌ನ ಮೊದಲ ದಿನ ನಾನು ನರ್ವಸ್ ಆಗಿ ಜೋರಾಗಿ ಅತ್ತಿದ್ದೆ. ಆದರೆ ಕೊನೆಯ ದಿನ ಆ ತಂಡದೊಂದಿಗೆ ತುಂಬಾ ಅಟ್ಯಾಚ್ಡ್ ಆಗಿ ಅಲ್ಲಿಂದ ಬರುವಾಗ ಅತ್ತಿದ್ದೆ ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.

ನನಗೆ ಅವಕಾಶ ಕೊಟ್ಟ ಡಾ.ರಾಜ್ (Rajkumar Family) ಕುಟುಂಬಕ್ಕೆ ಸದಾ ಚಿರಋಣಿ ಎಂದು ರಮ್ಯಾ ಎಂದಿದ್ದಾರೆ. ಅಪ್ಪು ಅವರು ನನ್ನ ಮೊದಲ ಸ್ನೇಹಿತ ಮತ್ತು ನನ್ನ ಬೆಸ್ಟ್ ಕೋ ಸ್ಟಾರ್ ಎಂದು ಪುನೀತ್ ಅವರನ್ನ ರಮ್ಯಾ (Ramya) ಸ್ಮರಿಸಿದ್ದಾರೆ. ಈ ಮೂಲಕ ಅಪ್ಪು ಬಗ್ಗೆ ರಮ್ಯಾ ಭಾವುಕರಾಗಿದ್ದಾರೆ.

Share This Article