ಗಣೇಶನ ಮೂರ್ತಿಯನ್ನು ಬರಮಾಡಿಕೊಂಡ ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು

Public TV
4 Min Read

ಬೆಂಗಳೂರು: ಇಂದು ದೇಶಾದ್ಯಂತ ಗಣೇಶ ಹಬ್ಬವನ್ನು ಜನರು ಸಡಗರದಿಂದ ಆಚರಿಸುತ್ತಿದ್ದಾರೆ. ಈ ಮಧ್ಯೆ ಸ್ಯಾಂಡಲ್‍ವುಡ್ ಕಲಾವಿದರು ಗಣೇಶನ ಮೂರ್ತಿ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮುಂಜಾನೆ ಗೌರಿ, ಗಣೇಶ ವಿಗ್ರಹವನ್ನು ಮನೆಗೆ ತಂದು ಪೂಜೆ ಸಲ್ಲಿಸಿ ಹಬ್ಬ ಆಚರಿಸುತ್ತಿವುದರಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್‍ವುಡ್ ತಾರೆಯರು, ಸಂಪ್ರದಾಯಿಕ ಉಡುಗೆಯಲ್ಲಿ ಬಣ್ಣ-ಬಣ್ಣದ ಗಣೇಶನ ಮೂರ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.  ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಸೇನಾ ವಾಹನಕ್ಕೆ ಒದ್ದು ಯುವತಿ ರಂಪಾಟ – ವೀಡಿಯೋ ವೈರಲ್

 

View this post on Instagram

 

A post shared by Karthik Jayaram (@karthik.jayaram)

ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಉಪೇಂದ್ರರವರು ಪತ್ನಿಯೊಂದಿಗೆ ಕುಳಿತುಕೊಂಡು ಪೂಜೆ ಸಲ್ಲಿಸುತ್ತಿರುವ ವೀಡಿಯೋವನ್ನು ಪ್ರಿಯಾಂಕ ಉಪೇಂದ್ರವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by priyanka upendra (@priyanka_upendra)

ಶ್ಯಾನೆ ಟಾಪ್ ಆಗವ್ಳೆ.. ಹುಡುಗಿ ನಟಿ ಅದಿತಿ ಪ್ರಭುದೇವ ಅವರು ನೀಲಿ ಬಣ್ಣದ ಬಟ್ಟೆ ತೊಟ್ಟು, ಮೂರು ಪುಟ್ಟ, ಪುಟ್ಟ ಗಣೇಶನ ವಿಗ್ರಹದ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ನೂರಾರು ಕೋಟಿ ಟೆಂಡರ್ ವಂಚನೆ ಪ್ರಕರಣ- ಐಷಾರಾಮಿ ಹೋಟೆಲ್ ನಲ್ಲಿ ಸಿಕ್ಕಿಬಿದ್ದ ಮಾಲೀಕ

 

View this post on Instagram

 

A post shared by ADITI PRABHUDEVA (@aditiprabhudeva)

ನಟಿ ಆಶಿಕಾ ರಂಗನಾಥ್ ಗುಲಾಬಿ ಬಣ್ಣದ ಸೀರೆಯುಟ್ಟು, ಮಣ್ಣಿನಿಂದ ತಯಾರಿಸಿರುವ ಗಣೇಶನ ಮೂರ್ತಿಗೆ ಹೂವಿನಿಂದ ಅಲಂಕಾರ ಮಾಡುತ್ತಿರುವ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: 10 ವರ್ಷದಲ್ಲಿ 25 ಬಾರಿ ಅನ್ಯ ಪುರುಷರೊಂದಿಗೆ ಓಡಿಹೋದಳು – ಗಂಡನಿಗೆ ಮಾತ್ರ ಅವಳೇ ಬೇಕಂತೆ

ನವರಸ ನಾಯಕ ಜಗ್ಗೇಶ್‍ರವರು ಗರಿಕೆ ಮತ್ತು ಹೂವಿನಿಂದ ಅಲಂಕರಿಸಿರುವ ಗಣೇಶನ ಮೂರ್ತಿಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಸಣ್ಣ ಕಥೆಯನ್ನು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಗಣಪನಿಗೆ 34 ವರ್ಷ. 1987ರಲ್ಲಿ ಬಿಡಿಗಾಸಿಲ್ಲದ ದಿನಗಳು. ರವಿಚಂದ್ರನ್ ರವರ ರಣಧೀರ ಚಿತ್ರಿಕರಣ ಸಮಯ. ಅವರ ಸಂಸ್ಥೆಯಲ್ಲಿ 500ರೂ ಸಂಬಳ ಪಡೆದು ನಾನು ಪರಿಮಳ ಮಲ್ಲೇಶ್ವರ 10ನೇ ಕ್ರಾಸ್ ಜೀರಿಗೆ ವ್ಯಾಯಾಮ ಶಾಲೆ ಬಳಿ 20ರೂ.ಗೆ ಈ ಗಣಪನನ್ನು ಕೊಂಡು ಮನೆಯಲ್ಲಿ ಇಟ್ಟು ಚಿತ್ರಿಕರಣಕ್ಕೆ 8ನೇ ಮೈಲಿ ಸ್ಟೋನ್ ಮೆಡೋ ಮನೆಗೆ ಓಡಿದೆ. ನನ್ನ ಗ್ರಹಚಾರಕ್ಕೆ ಅಂದು ರಾತ್ರಿ 2 ಗಂಟೆಗೆ ಮುಗಿಯಿತು. ಪಾಪ ಪರಿಮಳ ನನಗಾಗಿ ನಿದ್ರೆ ಮಾಡದೇ ಕಾಯುತ್ತಿದ್ದಳು. ಆಗ ಮನೆಗೆ ಬಂದು ಸ್ನಾನ ಮಾಡಿ ಗಣಪತಿ ವ್ರತ ಶುರು ಮಾಡಿ ಬೆಳಗಿನ ಜಾವ 5ಕ್ಕೆ ಪೂಜೆ ಮುಗಿಸಿ ಗಣಪನಿಗೆ ಪ್ರಾರ್ಥಿಸಿದೆ.

ಗಣಪ ಎಲ್ಲರು ಪೂಜೆ ನಂತರ ನಿನ್ನ ವಿಸರ್ಜನೆ ಮಾಡಿ ಬಿಡುತ್ತಾರೆ. ನಾನು ಮಾತ್ರ ನಿನ್ನ ನನ್ನ ಕೊನೆ ಉಸಿರಿನವರೆಗೂ ಇಟ್ಟುಕೊಳ್ಳುವೆ ಎಂದು ಸಂಕಲ್ಪ ಮಾಡಿದೆ. ಅದರಂತೆ ಇಂದಿಗೂ ಈ ಗಣಪನೇ ನನ್ನ ಆತ್ಮೀಯ ಬಂಧು. ಇಂದು ಇವನಿಗೆ ಪೂಜೆ ಮಾಡುವಾಗ ನನ್ನ ಬೆಳವಣಿಗೆ ನೆನೆದು ಆಶ್ಚರ್ಯ ಅನುಭವ ಆಯಿತು.  ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು ‘ಶ್ರದ್ಧಾವಾನ್ ಲಭತೆ ಜ್ಞಾನಂ’ ಶ್ರದ್ಧೆ ಇದ್ದ ಜಾಗದಲ್ಲಿ ಸರ್ವ ಜ್ಞಾನ ನೀಡುವೆ ಎಂದು ಧನ್ಯೋಸ್ಮಿ. ಈ ಗಣಪನಿಗೆ ನನ್ನ ಹಿರಿಮಗ ಗುರು ರಾಜನಿಗೆ ಒಂದೇ ವಯಸ್ಸು 34 ವರ್ಷಗಳು. ನಂಬಿಕೆಗೆ ಕೆಡುಕಿಲ್ಲಾ ಗೆದ್ದೆ ಗೆಲ್ಲುವ. ಅದಕ್ಕೆ 4 ಬಾರಿ ತೀರ್ಪು ಎಂದರು ತಮಿಳುಕವಿ ಭಾರತೀಯಾರ್ ಸರ್ವರಿಗೂ ಗಣಪನ ಹಬ್ಬದ ಶುಭಾಶಯ. ಶುಭಮಸ್ತು ಎಂದು ಶುಭಾಶಯ ತಿಳಿಸಿದ್ದಾರೆ.

ಗಂಡ-ಹೆಂಡತಿ ಸಿನಿಮಾ ಖ್ಯಾತಿಯ ನಟಿ ಸಂಜನಾ ಗಲ್ರಾನಿ ಕೂಡ ಗಣೇಶನ ವಿಗ್ರದ ಮುಂದೆ ಕುಳಿತು ಬೇಡುತ್ತಿರುವ ವೀಡಿಯೋಗೆ ಸಾಂಗ್ ಸೆಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬಿಗ್‍ಬಾಸ್ ಸೀಸನ್-8 ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ ಗಣೇಶನ ಮೂರ್ತಿಯನ್ನು ತಬ್ಬಿಕೊಂಡಿರುವ ಫೋಟೋವನ್ನು ಹಂಚಿಕೊಂಡು ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

ಕನ್ನಡ ಕಿರುತೆರೆ ನಟಿ ಅಮೃತಾ ರಾಮ್ ಮೂರ್ತಿ ಗರ್ಭಿಣಿಯಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಹೀಗಿದ್ದರೂ ಅಮೃತಾ ಬೆಳ್ಳಿ ಗಣೇಶನ ವಿಗ್ರಹವನ್ನಿಟ್ಟು ದೇವರಿಗೆ ಪುಷ್ಪ ಅರ್ಪಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ನಟಿ ದೀಪಿಕಾ ದಾಸ್, ನಟ ಕಾರ್ತಿಕ್ ಜಯರಾಮ್ ಸೇರಿದಂತೆ ಹಲವು ಕಲಾವಿದರು ಗಣೇಶನ ಜೊತೆ ಫೋಟೋ  ಕ್ಲಿಕ್ಕಿಸಿಕೊಂಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *