ನಮ್ಮದೇ ಮನಸ್ಥಿತಿಗೆ ಕನ್ನಡಿ ಹಿಡಿದಂಥಾ ಬಡ್ಡಿಮಗನ್ ಲೈಫು!

Public TV
1 Min Read

ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಪವನ್ ನಿರ್ಮಾಣ ಮಾಡಿರುವ ಬಡ್ಡಿಮಗನ್ ಲೈಫು ಚಿತ್ರ ಈ ವಾರ ಡಿ.27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹಾಡು ಮತ್ತು ಟ್ರೇಲರ್ ಗಳ ಮೂಲಕ ಸಖತ್ ಕ್ರೇಜ್ ಸೃಷ್ಟಿ ಮಾಡಿರೋ ಈ ಚಿತ್ರ ಹಳ್ಳಿಗಾಡಿನ ಕಥೆಯೊಂದಿಗೆ, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಕಂಟೆಂಟಿನ ಸುಳಿವಿನೊಂದಿಗೆ ಸಮ್ಮೋಹಕವಾದ ವಾತಾವರಣವನ್ನೇ ನಿರ್ಮಿಸಿಕೊಂಡಿದೆ. ಯಶಸ್ವಿ ಸಿನಿಮಾವೊಂದು ಬಿಡುಗಡೆಯ ಹಂತದವರೆಗೆ ದಾಟಿಕೊಳ್ಳುವ ಘಟ್ಟಗಳಿವೆಯಲ್ಲಾ? ಅದೆಲ್ಲವನ್ನೂ ಸಮರ್ಥವಾಗಿಯೇ ದಾಟಿಕೊಂಡು ಬಂದಿರುವ ಈ ಸಿನಿಮಾದತ್ತ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ಅವರ ಮುಂದೆ ಬಡ್ಡಿಮಗನ್ ಲೈಫು ಈ ವಾರವೇ ಅನಾವರಣಗೊಳ್ಳಲಿದೆ.

ಈ ಚಿತ್ರವನ್ನು ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಜೊತೆಯಾಗಿಯೇ ಸಿನಿಮಾ ಕನಸು ಕಂಡು ಒಂದಷ್ಟು ಕ್ರಿಯೇಟಿವ್ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದ ಇವರಿಬ್ಬರೂ ಸೇರಿಕೊಂಡೇ ಮನುಷ್ಯ ಸಹಜ ಮನೋಭೂಮಿಕೆಯನ್ನು ಆಧಾರವಾಗಿಟ್ಟುಕೊಂಡಿರುವಂಥಾ ಪೊಗದಸ್ತಾದ ಕಥೆಯೊಂದನ್ನು ಸಿದ್ಧಡಿಸಿಕೊಂಡು ಈ ಕಥೆಯನ್ನು ರೂಪಿಸಿದ್ದಾರೆ. ಮನೋರಂಜನೆಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಬದುಕಿಗೆ ಲಹತ್ತಿರಾದ ಅಂಶಗಳನ್ನೊಳಗೊಂಡಿರುವ ಈ ಚಿತ್ರ ಈಗಾಗಲೇ ಏನ್ ಚಂದಾನೋ ತಕ್ಕೋ ಎಂಬ ಹಾಡಿನ ಮೂಲಕವೇ ನೈಜ ಪ್ರಚಾರದ ವಿರಾಟ್ ರೂಪ ಪ್ರದರ್ಶಿಸಿದೆ.

ಸಾಮಾನ್ಯವಾಗಿ ಜನರಿಗೆ ತಮ್ಮ ವಲಯದಲ್ಲಿ ಅದೆಂಥಾದ್ದೇ ವಾತಾವರಣ ಇದ್ದರೂ ಪರರ ಬದುಕಿನ ಬಗ್ಗೆ ಎಲ್ಲಿಲ್ಲದ ಕ್ಯೂರಿಯಾಸಿಟಿ ಇರುತ್ತದೆ. ಅದರಲ್ಲಿಯೂ ಒಂದಷ್ಟು ಕುಟುಂಬಗಳಿರುವ, ದಿನಾ ಬೆಳಗೆದ್ದು ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುವಂಥಾ ವಾತಾವರಣವಿರುವ ಹಳ್ಳಿಗಾಡುಗಳ ಕಡೆಯಲ್ಲಿ ಇಂಥಾದ್ದೆಲ್ಲ ಮತ್ತಷು ತೀವ್ರವಾಗಿರುತ್ತದೆ. ಇದೇ ಭೂಮಿಕೆಯಲ್ಲಿ ರೂಪುಗೊಂಡು ದೃಷ್ಯೀಕರಿಸಿರುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇದರ ಒಟ್ಟಾರೆ ರೂಪುರೇಷೆಗಳೇನೆಂಬುದು ನವೀನ್ ಸಜ್ಜು ಹಾಡಿರುವ ಏನ್ ಚಂದಾನೋ ತಕ್ಕೋ ಎಂಬ ಹಾಡಿನ ರೂಪದಲ್ಲಿಯೇ ಅನಾವರಣಗೊಂಡಿದೆ. ಒಟ್ಟಾರೆಯಾಗಿ ಪ್ರತೀ ಕ್ಷಣಂವೂ ಭರ್ಜರಿ ಮನರಂಜನೆ ಮತ್ತು ಲವಲವಿಕೆಯಿಂದ ಕೂಡಿರುವ ಈ ಚಿತ್ರ ಈ ವಾರ ನಿಮ್ಮೆಲ್ಲರ ಮುಂದೆ ಅನಾವರಣಗೊಳ್ಳಲಿದೆ.

Share This Article
Leave a Comment

Leave a Reply

Your email address will not be published. Required fields are marked *