ಕಿರುತೆರೆ ನಟನಿಗೆ ವಂಚಿಸಿದ್ದ ಸ್ಯಾಂಡಲ್ ವುಡ್ ನಟಿ ಉಷಾ ಬಂಧನ

Public TV
1 Min Read

ದುನಿಯಾ ವಿಜಯ್ ನಟನೆಯ ಸಲಗ (Salaga) ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಮತ್ತು ಕಿರುತೆರೆ ಹಾಗೂ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದ ಬೆಂಗಳೂರಿನ ನಟಿ ಉಷಾ ಆರ್ (Usha Ravi Shankar) ಬಂಧನಕ್ಕೆ ಒಳಗಾಗಿದ್ದಾರೆ. ವಂಚನೆಯ (Cheating) ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗದ ಪೊಲೀಸರು ನಟಿಯನ್ನು ಬಂಧಿಸಿದ್ದು (Arrest), ವೈದ್ಯಕೀಯ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ.

ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ನಟರೊಬ್ಬರನ್ನು ಮದುವೆಯಾಗುವುದಾಗಿ ಉಷಾ ನಂಬಿಸಿದ್ದರಂತೆ. ಪ್ರೀತಿ, ಮದುವೆಯ ನಂಬಿಕೆಯಲ್ಲೇ ಆ ನಟನಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ. ನಂತರ ಮದುವೆ ಮಾಡಿಕೊಳ್ಳಲು ತಕರಾರು ತಗೆದಿದ್ದಾರೆ ಎಂದು ಹೇಳಲಾಗುತ್ತಿದೆ.

ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ನಟನಿಗೆ ಅರಿವಾಗುತ್ತಿದ್ದಂತೆಯೇ ವಂಚಿತನಾದ ನಟ ಕೋರ್ಟ್‌ ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆ ಉಷಾಗೆ ವಾರಂಟ್ ಕೂಡ ಜಾರಿಯಾಗಿತ್ತು.  ಈ ಹಿನ್ನೆಲೆ ಚಿತ್ರನಟಿಯನ್ನು (Actress) ಬಂಧಿಸಿ ಪೊಲೀಸರು ಶಿವಮೊಗ್ಗಕ್ಕೆ ಕರೆತಂದಿದ್ದರು. ಉಷಾ ‘ಒಂದಲ್ಲ ಎರಡು’, ‘ಸಲಗ’ ಚಿತ್ರಗಳಲ್ಲಿ ಸಹ ನಟಿಯಾಗಿ ನಟಿಸಿದ್ದಾರೆ.

Share This Article