ತಾನೆಂಥ `ಡ್ರಾಮಾ ಕ್ವೀನ್’ ಎಂದು ಹೇಳಿಕೊಂಡ್ರು ಮೋಹಕತಾರೆ ರಮ್ಯಾ: ಕಾರಣವೇನು?

Public TV
1 Min Read

ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಬಣ್ಣ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಚಿತ್ರರಂಗದವರಿಂದ ದೂರವಿಲ್ಲ. ಹೊಸಬರಿಗೆ, ಹೊಸ ಚಿತ್ರತಂಡಕ್ಕೆ ಸಾಥ್ ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಆದರೆ ಈಗ ರಮ್ಯಾ ತಮ್ಮನ್ನು ತಾವೇ ಸ್ವತಃ ಡ್ರಾಮಾ ಕ್ವೀನ್ ಎಂದು ಕರೆದುಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗುವಂತಹ ವಿಡಿಯೋ ಶೇರ್ ಮಾಡಿ, ರಮ್ಯಾ ಕಾಮೆಂಟ್ ಮಾಡಿದ್ದಾರೆ.

ಸಿನಿಜಗತ್ತಿನಲ್ಲಿ ರಮ್ಯಾಗೆ ಇಂದಿಗೂ ಅಪಾರ ಅಭಿಮಾನಿಗಳ ಬಳಗವಿದೆ. ಇಂದಿಗೂ ರಮ್ಯಾ ಮೇಲಿರುವ ಕ್ರೇಜ್ ಒಂದಚೂರು ಕಡಿಮೆಯಾಗಿಲ್ಲ. ಚಿತ್ರರಂಗಕ್ಕೆ ಹಾಟ್ ಫೇಚರೇಟ್ ನಟಿ ಕಂಬ್ಯಾಕ್ ಆಗಲಿ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ. ಈ ನಡುವೆ ತಮ್ಮ ಹಳೆಯ ಸಂದರ್ಶನದ ʻಮಜಾ ಟಾಕೀಸ್ʼ ವಿಡಿಯೋ ತುಣುಕನ್ನ ನೋಡಿ, ತಾನೆಂಥಹ ಡ್ರಾಮಾ ಕ್ವೀನ್ ಅಂತಾ ತಮ್ಮನ್ನ ತಾವೇ ರಮ್ಯಾ ಕರೆದುಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ತೆರೆಗೆ ಬರಲಿದೆ `ಓಂ’ ಸಿನಿಮಾ: ಚಿತ್ರದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ರು ಶಿವಣ್ಣ

 

View this post on Instagram

 

A post shared by Meme Anthammas (@meme.anthammas)

ಈ ಶೋನಲ್ಲಿ ನಟಿ ರಮ್ಯಾ ಡಿಫರೆಂಟ್ ಆಗಿ ಎಕ್ಸಪ್ರೇಶನ್ ನೀಡಿದ್ದರು. ಈ ವಿಡಿಯೋ ನೋಡಿ ಟ್ರೋಲಿಗರಿಗೂ ಮುದ್ದಾಗಿ ಕಾಣಿಸಿದ ಕಾರಣ, ಮೋಹಕತಾರೆ ಅಂತಾ ಟೈಟಲ್ ನೀಡಿ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ನೋಡಿ, ರಮ್ಯಾ ರಿಯಾಕ್ಟ್ ಮಾಡಿದ್ದು, ತಾವು ಡ್ರಾಮಾ ಕ್ವೀನ್ ಅಂತಾ ಹೇಳಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನು ಅಭಿಮಾನಿಗಳ ಆಸೆಯಂತೆ ನಟಿ ರಮ್ಯಾ ಸದ್ಯದಲ್ಲೇ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಯಾವ ಸಿನಿಮಾ, ಯಾವ ಬಗೆಯ ಪಾತ್ರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ಕಾಣಿಸಿಕೊಳ್ಳುತ್ತಾರೆ ಅಂತಾ ಸದ್ಯದಲ್ಲೇ ರಿವೀಲ್ ಆಗಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *