ರಿಯಲಿಸ್ಟಿಕ್ ಸಾಹಸಕ್ಕೆ ಮುಂದಾದ ಲಕ್ಷ್ಮಿ ರೈ!

Public TV
1 Min Read

ನಾಲ್ಕೈದು ವರ್ಷಗಳಿಂದ ಬೇರೆ ಭಾಷೆಗಳಲ್ಲಿಯೇ ಬ್ಯುಸಿಯಾಗಿದ್ದ ಲಕ್ಷ್ಮಿ ರೈ ಮರಳಿ ಬಂದಿದ್ದಾರೆ. ಇದೀಗ ಮುಹೂರ್ತವನ್ನೂ ಆಚರಿಸಿಕೊಂಡು ಚಿತ್ರೀಕರಣಕ್ಕೆ ಸಜ್ಜಾಗಿರೋ ಈ ಚಿತ್ರದಲ್ಲಿ ಜ್ಯೂಲಿ ಲಕ್ಷ್ಮಿ ಯಾವುದೇ ಡ್ಯೂಪ್ ಬಳಸದೆ ಸಾಹಸ ಸನ್ನಿವೇಶಗಳಲ್ಲಿ ನಟಿಸೋ ರಿಸ್ಕಿನ ನಿರ್ಧಾರ ತಳೆದಿದ್ದಾರೆ!

ಪತ್ತಿ ಗುರುಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಲಕ್ಷ್ಮಿ ರೈ ಝಾನ್ಸಿಯಾಗಿ ಮಿಂಚಲಿದ್ದಾರೆ. ಪಕ್ಕಾ ಆಕ್ಷನ್ ಜಾನರಿನ ಈ ಚಿತ್ರದಲ್ಲಿ ಸಾಕಷ್ಟು ಸಾಹಸ ಸನ್ನಿವೇಶಗಳಿವೆ. ಈ ಕಾರಣದಿಂದಲೇ ಈ ಚಿತ್ರವನ್ನು ಒಪ್ಪಿಕೊಂಡಿರೋ ಲಕ್ಷ್ಮಿ ಈಗಾಗಲೇ ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ.

ಮಾರ್ಷಲ್ ಆರ್ಟ್ಸ್  ಮುಂತಾದ ಸಮರ ಕಲೆಗಳನ್ನೂ ಕರಗತ ಮಾಡಿಕೊಂಡಿದ್ದಾರಂತೆ. ಇಷ್ಟೆಲ್ಲ ಕಲಿತಿರೋ ಅವರು ಇಡೀ ಚಿತ್ರದಲ್ಲಿ ಡ್ಯೂಪ್ ಬಳಸದೇ ಸಾಹಸ ಸನ್ನಿವೇಶಗಳಲ್ಲಿ ನಟಿಸಲಿದ್ದಾರೆ.

ಕನ್ನಡದ ಮಟ್ಟಿಗೆ ಲಕ್ಷ್ಮಿ ರೈ ಈವರೆಗೂ ರೊಮ್ಯಾಂಟಿಕ್ ಆದ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದರು. ಆದರೆ ಆ ಬಳಿಕ ನಾಲ್ಕು ವರ್ಷ ಬಾಲಿವುಡ್ ಟಾಲಿವುಡ್ ಸೇರಿದಂತೆ ಪರಭಾಷಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಅವರೀಗ ಭಿನ್ನವಾದ ಗೆಟಪ್ಪಿನಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಇದಕ್ಕಾಗಿ ಭಾರೀ ರಿಸ್ಕು ತೆಗೆದುಕೊಳ್ಳಲೂ ಮುಂದಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *