67ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾರತಿ ವಿಷ್ಣುವರ್ಧನ್!

Public TV
2 Min Read

– ತನ್ನದೇ ಸಾಕ್ಷ್ಯಚಿತ್ರಕ್ಕೆ ಹಿರಿಯ ನಟಿ ಚಾಲನೆ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಅವರು ತಮ್ಮ 67ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜಯನಗರದ ವಿಷ್ಣುವರ್ಧನ್ ನಿವಾಸದಲ್ಲಿ ಪತಿ ಡಾ. ವಿಷ್ಣುವರ್ಧನ್ ಅವರ ಫೋಟೋಗೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ಭಾರತಿ ವಿಷ್ಣುವರ್ಧನ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಚಾಲನೆ ನೀಡಲಾಯಿತು. ಅಳಿಯ ಅನಿರುದ್ಧ್ ನಿರ್ದೇಶನದಲ್ಲಿ, ಕೀರ್ತಿ ಇನ್ನೋವೇಶನ್ ಬ್ಯಾನರ್ ನಲ್ಲಿ ಈ ಚಿತ್ರ ಇದಾಗಿದೆ.

ಅನಿರುದ್ಧ್ ಸಾಕ್ಷ್ಯ ಚಿತ್ರ ಮಾಡುತ್ತೇನೆ ಎಂದು ಹೇಳಿದ್ದ. ನಾವು ಮಾಡೋ ಒಳ್ಳೆಯ ಕೆಲಸ, ಪ್ರೀತಿ ವಿಶ್ವಾಸ ಸದಾ ಇರುತ್ತೆ. ಹಾಗೆ ಇರಬೇಕು ಅನ್ನೊದು ನನ್ನ ಆಸೆ ಅಂತ ಭಾರತಿ ಹೇಳಿದರು. ಭಾರತಿ ವಿಷ್ಣುವರ್ಧನ್ ಅವರು ಸುಮಾರು 5 ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಇದ್ದಾರೆ. ಹೀಗಾಗಿ ಅನೇಕ ವಿಚಾರಗಳನ್ನು ಈ ಸಾಕ್ಷ್ಯ ಚಿತ್ರ ತಿಳಿಸಲಿದೆ.

ಈ ವೇಳೆ ಮೈರಾ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಚಿತ್ರವನ್ನು ನವೀನ್ ಎಂ ಕೆ ನಿರ್ದೇಶನ ಮಾಡಿದ್ದಾರೆ. `ಮೈರಾ’ ಬಹುಭಾಷಾ ಸಿನಿಮಾವಾಗಿದ್ದು, ಸಂಸ್ಕೃತ ಶಬ್ದದ ಅರ್ಥ ಸದ್ಯದಲ್ಲೆ ರಿವೀಲ್ ಮಾಡುತ್ತೇವೆ ಅಂತ ನಿರ್ದೇಶಕ ನವೀನ್ ಹೇಳಿದ್ದಾರೆ. ನವೀನ್ ಅವರು ಅಭಯಹಸ್ತ ಎಂಬ ಚಿತ್ರವನ್ನು ಈಗಾಗಲೇ ನಿರ್ದೇಶಿಸಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ.

ಅಭಯಹಸ್ತ ಚಿತ್ರದಲ್ಲಿ ಅನಿರುದ್ಧ್ ವಾಹಿನಿಯೊಂದರ ನಿರೂಪಕನಾಗಿ ನಟಿಸಿದ್ದಾರೆ. ಮೀಸೆ ಆಂಜನಪ್ಪ ಅವರು ಆಡಳಿತ ಪಕ್ಷದ ನಾಯಕನ ಪಾತ್ರದಲ್ಲಿ ಹಾಗೂ ನಾಗರಾಜಮೂರ್ತಿ ಅವರು ವಿರೋಧ ಪಕ್ಷದ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗಿನ ರಾಜಕೀಯದ ಬಗ್ಗೆ ಇವರಿಬ್ಬರ ನಡುವೆ ನಿರೂಪಕ ಚರ್ಚಿಸುವ ಸನ್ನಿವೇಶವನ್ನು ತ್ಯಾಗರಾಜನಗರದಲ್ಲಿ ಚಿತ್ರಿಸಿಕೊಳ್ಳುವುದರ ಮೂಲಕ ನಿರ್ದೇಶಕ ಪಿ.ಬಿ.ನವೀನ್ ಚಿತ್ರೀಕರಣ ಪೂರ್ಣಗೊಳ್ಳಿಸಿದ್ದಾರೆ. ನಿರ್ದೇಶಕ ನವೀನ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಛಾಯಾಗ್ರಹಣ, ಸಂಕಲನದೊಂದಿಗೆ ಕಲಾ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಹಾಗೂ ಪ್ರವೀಣ್ ಸಂಗೀತ ನೀಡಿದ್ದಾರೆ. ಪದ್ಮಶ್ರೀ ದೊಡ್ದರಂಗೇಗೌಡ, ಶಿವು, ನವೀನ್ ಅವರು ಬರೆದಿರುವ ಈ ಚಿತ್ರದ ಹಾಡುಗಳನ್ನು ಸೆಂಚುರಿ ಸ್ಟಾರ್ ಶಿವರಾಜಕುಮಾರ್, ನವೀನ್‍ಕೃಷ್ಣ ಹಾಗೂ ಮನೋಜವಂ ಹಾಡಿದ್ದಾರೆ.

ಜಿ.ಕೆ.ಗೋವಿಂದರಾವ್, ಸಾಹಿತಿ ಚಂಪ, ದೊಡ್ಡರಂಗೇಗೌಡ, ಹುಲಿಕಲ್ ನಟರಾಜ್, ಮಹೇಂದರ್ ಮನೋತ್, ಜೇಡ್ರಳ್ಳಿ ಕೃಷ್ಣಪ್ಪ, ಕಪಾಲಿ ಆನಂದ್ ಹಾಗೂ ವಾಟಾಳ್ ನಾಗರಾಜ್ ಅವರು ಅಭಿನಯಿಸಿರುವ ಈ ಚಿತ್ರದ ನಾಯಕರಾಗಿ `ಪಾರು ಐ ಲವ್ ಯು` ಖ್ಯಾತಿಯ ರಂಜನ್ ನಟಿಸಿದ್ದಾರೆ. ಅನಿರುದ್ಧ್, ಮೀಸೆ ಆಂಜನಪ್ಪ, ನಾಗರಾಜಮೂರ್ತಿ, ಮಂಜು, ಮಂಡ್ಯ ಶ್ರೀಧರ್, ಸರು, ಖುಷಿ ಗೌಡ, ಪೂಜಾ, ಐಶ್ವರ್ಯ, ಫಕಿರಪ್ಪ ದೊಡ್ದಮನಿ(ಹಳ್ಳಿಮೆಷ್ಟ್ರು ಖ್ಯಾತಿ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *