ತಾಯಂದಿರ ದಿನ ಆಚರಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್

Public TV
1 Min Read

ಮ್ಮನ ಪ್ರೀತಿಗೆ ಎಂದೂ ಬೆಲೆ ಕಟ್ಟಲಾಗದು, ನಿರ್ಮಲ ಪ್ರೀತಿ ಹೊಂದಿರುವ ಅದ್ಭುತ ಶಕ್ತಿ ತಾಯಿ ಋಣವನ್ನು ತೀರಿಸಲು ಸಾಧ್ಯವಿಲ್ಲ. ಹೀಗಿರುವಾಗ ವಿಶ್ವ ಅಮ್ಮಂದಿರ ದಿನದಂದು (Mother’s Day) ವಿಶೇಷವಾಗಿ ಸೆಲೆಬ್ರಿಟಿಗಳು ಶುಭಕೋರಿದ್ದಾರೆ. ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.

 

View this post on Instagram

 

A post shared by DrShivaRajkumar (@nimmashivarajkumar)

ಅಮ್ಮ ಒಂದು ಪದವೂ ಹೌದು. ಒಂದು ಶಕ್ತಿಯೂ ಹೌದು. ಇಡೀ ಪ್ರಪಂಚವು ಹೌದು ಎಂದು ಶಿವರಾಜ್‌ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಾಯಿ ಜೊತೆಗಿನ ಫೋಟೋ ಹಂಚಿಕೊಂಡು ಶಿವಣ್ಣ ಸ್ಮರಿಸಿದ್ದಾರೆ.

ಕೊಡಗಿನ ಸುಂದರಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ತಮ್ಮ ತಾಯಿ ಸುಮನ್ ಮಂದಣ್ಣಗೆ ಶುಭಕೋರಿದ್ದಾರೆ. ಇದನ್ನೂ ಓದಿ:‘ಕರಾವಳಿ’ಯಲ್ಲಿ ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡ ನಟ ಮಿತ್ರ

ನಿಮ್ಮ ಅಮ್ಮನ ಅಗತ್ಯವನ್ನು ನಿಲ್ಲಿಸುವ ಸಮಯ ಎಂದಿಗೂ ಬರುವುದಿಲ್ಲ.ತಾಯಂದಿರು ಮಾಂತ್ರಿಕರು. ಎಲ್ಲಾ ಪ್ರೀತಿಯ ಅಮ್ಮಂದಿರಿಗೆ ತಾಯಂದಿರ ದಿನದ ಶುಭಾಶಯಗಳು ಎಂದು ರಾಧಿಕಾ ಪಂಡಿತ್ (Radhika Pandit) ವಿಶ್ ಮಾಡಿದ್ದಾರೆ.

ಬಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ತಮ್ಮ ತಾಯಿ ಮತ್ತು ಅತ್ತೆಯ ಫೋಟೋ ಹಂಚಿಕೊಂಡಿದ್ದಾರೆ. ಅಮ್ಮಂದಿರ ದಿನಾಚರಣೆಗೆ ವಿಶೇಷವಾಗಿ ಶುಭಕೋರಿದ್ದಾರೆ.

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ (Pragathi Rishab Shetty) ಅವರ ಪೋಸ್ಟ್ ಕೂಡ ಗಮನ ಸೆಳೆದಿದೆ. ಪ್ರೀತಿಯಲ್ಲಿ ಆಗಸ, ತಾಳ್ಮೆಯಲ್ಲಿ ಭೂಮಿ, ಮಮಕಾರದಲ್ಲಿ ಕಡಲು ಎಂದರೆ ತಾಯಿ ಎಂದು ಬಣ್ಣಿಸಿ ಅಮ್ಮನಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ.

Share This Article