ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು

Public TV
3 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಂದು ಅಧಿಕಾರಿಗಳು ಸ್ಟಾರ್ ನಟರ ವಿಚಾರಣೆ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳ ಪ್ರಶ್ನೆಗೆ ಸ್ಟಾರ್ ನಟರು ಖಡಕ್ ಆಗಿ ಉತ್ತರ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಗುರುವಾರ ಐಟಿ ಅಧಿಕಾರಿಗಳು ಯಶ್, ಸುದೀಪ್, ಪುನೀತ್, ಶಿವಣ್ಣ ಹಾಗೂ ರಾಧಿಕಾ ಅವರ ಮನೆ ಮೇಲೆ ನಡೆಸಿದ್ದರು. ಈ ವೇಳೆ ಹಲವು ದಾಖಲೆಗಳು ಸಿಕ್ಕಿದ್ದು, ಸ್ಟಾರ್ ನಟರು ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ವ್ಯವಹಾರಗಳ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಪ್ರಶ್ನೆ ಕೇಳುತ್ತಿದ್ದಾರೆ.

* ಐಟಿ ಕೇಳಿದ ಪ್ರಶ್ನೆಗೆ ಯಶ್ ಉತ್ತರವೇನು….?
ಐಟಿ ಪ್ರಶ್ನೆ: 70 ಕೋಟಿ ವೆಚ್ಚದಲ್ಲಿ ಕೆಜಿಎಫ್ ನಿರ್ಮಿಸಲಾಗಿದೆ. ಹೂಡಿಕೆ ಬಗ್ಗೆ ನಿಮಗೇನು ಗೊತ್ತು?
ಯಶ್ ಉತ್ತರ: ಹಣಕಾಸಿನ ವ್ಯವಹಾರ ಬಗ್ಗೆ ನನಗೇನೂ ಗೊತ್ತಿಲ್ಲ. ನಿರ್ಮಾಪಕರನ್ನೇ ಕೇಳಬೇಕು
ಐಟಿ: ನಿಮಗೆ ಸ್ವಲ್ಪನೂ ಮಾಹಿತಿ ಇಲ್ಲದೆ ಬಹುಕೋಟಿ ಸಿನಿಮಾದಲ್ಲಿ ನಟಿಸಿದ್ರಾ?
ಯಶ್: ನಿರ್ಮಾಪಕರ ವ್ಯವಹಾರ ಬಗ್ಗೆ ನನಗೇನೂ ತಿಳಿದಿಲ್ಲ. ನಾನು ಒಬ್ಬ ನಟನಷ್ಟೇ.
ಐಟಿ: ನೀವು ಕನ್ನಡದ ಸೂಪರ್ ಸ್ಟಾರ್. ನಿಮ್ಮ ಸಂಭಾವನೆ ಎಷ್ಟು?
ಯಶ್: ಒಂದೊಂದು ಸಿನಿಮಾಕ್ಕೆ ಒಂದೊಂದು ಸಂಭಾವನೆ ಇರುತ್ತೆ. ಅದು ಬದಲಾಗುತ್ತಿರುತ್ತದೆ.
ಐಟಿ: ನಿಮ್ಮ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಬಹುದೇ?
ಯಶ್: ನನಗೆ 40 ಕೋಟಿ ಸಾಲವಿದೆ. 2 ಬ್ಯಾಂಕ್‍ನಲ್ಲಿ ಸಾಲ ಮಾಡಿದ್ದೇನೆ.
ಐಟಿ: ನೀವು ಹೊಸ ಮನೆ ಖರೀದಿ ಮಾಡಿದ್ದೀರಿ. ಇದರ ಬಗ್ಗೆ ದಾಖಲೆ ಕೊಡಬಹುದಾ?
ಯಶ್: ಸಾಲ ಪಡೆದು ಮನೆ ಖರೀದಿಸಲಾಗಿದೆ. ಇದರ ಬಗ್ಗೆ ನಮ್ಮ ಅಕೌಂಟೆಂಟ್ ಮಾಹಿತಿ ನೀಡಲಿದ್ದಾರೆ.

* ಐಟಿ ಕೇಳಿದ ಪ್ರಶ್ನೆಗೆ ಪುನೀತ್ ಉತ್ತರವೇನು….?
ಐಟಿ ಪ್ರಶ್ನೆ: ನೀವು ಬಹು ಬೇಡಿಕೆಯ ನಟ. ನಿಮ್ಮ ಸಿನಿಮಾಗಳ ಸಂಭಾವನೆ ಎಷ್ಟು?
ಪುನೀತ್ ಉತ್ತರ: ಒಂದೊಂದು ಸಿನಿಮಾಗಳಿಗೆ ಒಂದು ಸಂಭಾವನೆ ಇದೆ.
ಐಟಿ: ನಿಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಬಹುದಾ?
ಪುನೀತ್: ಎಲ್ಲದಕ್ಕೂ ರಸೀತಿ ಇದೆ. ಸ್ವಲ್ಪ ಟೈಂ ಬೇಕು.
ಐಟಿ: ನೀವು ಕೋರಮಂಗಲದಲ್ಲಿ ಆಸ್ತಿ-ಪಾಸ್ತಿ ಹೊಂದಿದ್ದೀರಿ. ಇದರ ವಿವರಣೆ ನೀಡಿ.
ಪುನೀತ್: ಎಲ್ಲದಕ್ಕೂ ದಾಖಲಾತಿಗಳಿವೆ. ನನ್ನ ಅಕೌಂಟೆಂಟ್ ಮಾಹಿತಿ ನೀಡ್ತಾರೆ.
ಐಟಿ: ಇತ್ತೀಚೆಗೆ ಹೊಸ ಪ್ರಾಜೆಕ್ಟ್‍ಗಳನ್ನು ಆರಂಭಿಸಿದ್ದೀರಿ. ಏನದು?
ಪುನೀತ್: ಪಿಆರ್ ಕೆ ಆಡಿಯೋ ಹಾಗೂ ಪಿಆರ್ ಕೆ ಪ್ರೊಡಕ್ಷನ್ ಆರಂಭಿಸಿದ್ದೇವೆ.
ಐಟಿ: ದೊಡ್ಡ ದೊಡ್ಡ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದೀರಾ. ಅದರ ಮಾಹಿತಿ ಕೊಡಿ.
ಪುನೀತ್: ದೊಡ್ಡ ವ್ಯವಹಾರ ಆಗುತ್ತಿರೋದ್ರಿಂದ ಮಾಹಿತಿಗೆ ಕಾಲಾವಕಾಶ ಬೇಕು.

* ಐಟಿ ಕೇಳಿದ ಪ್ರಶ್ನೆಗೆ ಸುದೀಪ್ ಉತ್ತರವೇನು….?
ಐಟಿ ಪ್ರಶ್ನೆ: ನಿಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿ.
ಸುದೀಪ್ ಉತ್ತರ: ನನಗೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ.
ಐಟಿ: ನಿಮ್ಮಲ್ಲಿ ಐಷಾರಾಮಿ ಕಾರುಗಳಿವೆ. ಅದರ ಮಾಹಿತಿ ನೀಡಿ.
ಸುದೀಪ್: ಹೊಸದಾಗಿ ಯಾವುದು ಖರೀದಿಸಿಲ್ಲ. ಇವೆಲ್ಲಾ ಹಳೆಯದ್ದು
ಐಟಿ: ನೀವು ಬೆಳ್ಳಿತೆರೆ ಅಲ್ಲದೆ, ಕಿರುತೆರೆಯಲ್ಲೂ ನಟನೆ ಮಾಡುತ್ತಿದ್ದೀರಿ. ಎಷ್ಟು ಸಂಭಾವನೆ ಪಡೆಯುತ್ತೀರಿ?
ಸುದೀಪ್: ಸಂಭಾವನೆ, ವ್ಯವಹಾರ ಬಗ್ಗೆ ನಮ್ಮ ಅಕೌಂಟೆಂಟ್ ಮಾಹಿತಿ ಕೊಡಲಿದ್ದಾರೆ
ಐಟಿ: ಚಿತ್ರರಂಗವಲ್ಲದೆ ಇತರ ವ್ಯವಹಾರಗಳ ಬಗ್ಗೆ ಮಾಹಿತಿ ಕೊಡಿ.
ಸುದೀಪ್: ಎಲ್ಲವನ್ನೂ ಲಿಖಿತ ರೂಪದಲ್ಲಿ ನಮ್ಮ ಅಕೌಂಟೆಂಟ್ ನೀಡಲಿದ್ದಾರೆ.

* ಐಟಿ ಕೇಳಿದ ಪ್ರಶ್ನೆಗೆ ಶಿವಣ್ಣ ಉತ್ತರವೇನು….?
ಐಟಿ ಪ್ರಶ್ನೆ: ಮೋಸ್ಟ್ ಬ್ಯುಸಿ ನಟ ನೀವು. ವರ್ಷಕ್ಕೆ ಎಷ್ಟು ಸಿನಿಮಾಗಳ ನಟಿಸುತ್ತೀರಾ?
ಶಿವಣ್ಣ ಉತ್ತರ: ವರ್ಷಕ್ಕೆ 7ರಿಂದ 8 ಸಿನಿಮಾಗಳಲ್ಲಿ ನಟಿಸುತ್ತೇನೆ.
ಐಟಿ: ನಿಮ್ಮ ಪುತ್ರಿಯ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಇದೆ. ಇದರ ಮಾಹಿತಿ ಕೊಡಿ.
ಶಿವಣ್ಣ: ನಮ್ಮ ಅಕೌಂಟೆಂಟ್ ಸಂಪರ್ಕಿಸಿ ಕೊಡುತ್ತೇನೆ.
ಐಟಿ: ನೀವು ಸಿನಿಮಾವಲ್ಲದೆ, ಸೀರಿಯಲ್ ನಿರ್ಮಾಣದಲ್ಲಿ ತೊಡಗಿದ್ದೀರಾ?
ಶಿವಣ್ಣ: ಹೌದು, ಅದರ ವ್ಯವಹಾರವನ್ನೆಲ್ಲಾ ಪತ್ನಿ ನೋಡಿಕೊಳ್ಳುತ್ತಾರೆ.
ಐಟಿ: ರಿಯಲ್ ಎಸ್ಟೇಟ್‍ನಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಾ?
ಶಿವಣ್ಣ: ಹೂಡಿಕೆಯ ಬಗ್ಗೆ ನನ್ನ ಅಕೌಂಟೆಂಟ್ ಮಾಹಿತಿ ಕೊಡುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *