ಸಾಹಸ ಕಲಾವಿದರ ಕಟ್ಟಡ ನಿರ್ಮಾಣಕ್ಕೆ ಸುದೀಪ್ 10 ಲಕ್ಷ ದೇಣಿಗೆ

Public TV
1 Min Read

ಬೆಂಗಳೂರು: ಸದಾ ಒಂದಿಲ್ಲೊಂದು ಸಮಾಜಮುಖಿ ಕೆಲಸಗಳಿಂದ ಹಲವರಿಗೆ ಮಾದರಿಯಾಗಿ ನಿಲ್ಲುತ್ತಿರುವ ಸ್ಯಾಂಡಲ್ ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ‘ಪೈಲ್ವಾನ್’ ಚಿತ್ರದ ಬಳಿಕ ಫೈಟರ್ ಅಸೋಸಿಯೇಷನ್ ಬೆಂಬಲಕ್ಕೆ ಸಾಥ್ ನೀಡಿದ್ದಾರೆ.

ಸಾಹಸ ಕಲಾವಿದರ ಕಟ್ಟಡ ನಿರ್ಮಾಣಕ್ಕೆ ಕಿಚ್ಚ ಸುದೀಪ್ ಧನಸಹಾಯ ಮಾಡಿದ್ದಾರೆ. ನಾಯಂಡಳ್ಳಿ ಬಳಿ ಸಾಹಸ ಕಲಾವಿದರ ಸಂಘದ ಕಟ್ಟಡ ಸಿದ್ಧವಾಗುತ್ತಿದೆ. ಕಟ್ಟದ ನಿರ್ಮಾಣಕ್ಕಾಗಿ ಹತ್ತು ಲಕ್ಷ ಹಣವನ್ನು ಸುದೀಪ್ ಸಹಾಯ ಮಾಡಿದ್ದಾರೆ.

https://twitter.com/ThrillerManju/status/1191657488216739842

ಹಣ ಸಹಾಯ ಮಾಡಿರುವ ಬಗ್ಗೆ ಫೈಟರ್ ಅಸೋಸಿಯೇಷನ್ ಅಧ್ಯಕ್ಷ ಥ್ರಿಲ್ಲರ್ ಮಂಜು ಟ್ವೀಟ್ ಮಾಡಿ, ಸುದೀಪ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

”ಎಲ್ಲರಿಗೂ ನಮಸ್ಕಾರ.. ಇಂದು ನನ್ನ ಗೆಳೆಯ ಹಾಗೂ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಸರ್ ಕಟ್ಟಡ ನಿರ್ಮಾಣಕ್ಕಾಗಿ 10 ಲಕ್ಷ ಧನಸಹಾಯ ಮಾಡಿದ್ದಾರೆ. ನಿಮಗೆ ಧನ್ಯವಾದಗಳು” ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಇತ್ತ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ”ಇಷ್ಟು ವರ್ಷ ತಮ್ಮ ಸಿನಿಮಾಗಳಿಗೆ ಉತ್ತಮ ಸಾಹಸ ನಿರ್ದೇಶನ ಮಾಡಿದ ಎಲ್ಲರಿಗೂ ಧನ್ಯವಾದಗಳು. ಎಲ್ಲಾ ಅದ್ಭುತ ತಂತ್ರಜ್ಞರು ಸೇರಿ ನನ್ನನ್ನು ಹೀರೋ ಮಾಡಿದ್ದಾರೆ. ಧನ್ಯವಾಗಳು…” ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *