ಡಿಬಾಸ್‌ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಯಾಂಡಲ್‌ವುಡ್ ತಾರೆಯರು

Public TV
2 Min Read

ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ (Darshan) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 47ನೇ ವಯಸ್ಸಿಗೆ ಕಾಲಿಟ್ಟಿರುವ ದಾಸನಿಗೆ ಸ್ಯಾಂಡಲ್‌ವುಡ್ ನಟ-ನಟಿಯರು ವಿಶೇಷವಾಗಿ ಶುಭಕೋರಿದ್ದಾರೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.

 

View this post on Instagram

 

A post shared by Amulya (@nimmaamulya)

ದರ್ಶನ್ ಹುಟ್ಟುಹಬ್ಬವನ್ನು ಈ ಬಾರಿ ಅದ್ಧೂರಿಯಾಗಿಯೇ ಆಚರಿಸಲಾಗುತ್ತಿದೆ. ಅಭಿಮಾನಿಗಳಷ್ಟೇ ದಾಸನ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡ್ತಿಲ್ಲ. ಚಂದನವನದ ತಾರೆಯರು ಕೂಡ ಹಬ್ಬದಂತೆಯೇ ಡಿಬಾಸ್ ಬರ್ತ್‌ಡೇಯನ್ನು ಸಂಭ್ರಮಿಸುತ್ತಿದ್ದಾರೆ. ಗೋಲ್ಡನ್ ಕ್ವೀನ್ ಅಮೂಲ್ಯ (Amulya) ಅವರು ‘ಹ್ಯಾಪಿ ಬರ್ತ್‌ಡೇ ಡಿಬಾಸ್ ಜಗದ ಸುಖವೆಲ್ಲವೂ ಇರಲಿ ಈ ಕೈಯಲ್ಲಿ ಇರುವವರೆಗೂ ಕೊನೆಯವರೆಗೂ’ ಎಂದು ಎಂದು ಸ್ವೀಟ್ ಆಗಿ ಶುಭಹಾರೈಸಿದ್ದಾರೆ.

 

View this post on Instagram

 

A post shared by Rakshitha ???? (@rakshitha__official)

ಡಿಬಾಸ್ ಜೊತೆ ತೆರೆಹಂಚಿಕೊಂಡಿದ್ದ ರಕ್ಷಿತಾ ಪ್ರೇಮ್ (Rakshitha Prem) ಅವರು ಆತ್ಮೀಯ ದರ್ಶನ್ ಒಂದು ದಿವಸ ನೀವು ನನಗೆ ಹೇಳಿದ್ರಿ. ನಾನು ಯಾವಾಗಲೂ ನಿನ್ನ ಜೊತೆ ಕಷ್ಟ ಆಗಲಿ, ಸುಖ ಆಗಲಿ ನಿಂತಿರುತ್ತೀನಿ ಅಂತ. ಅವತ್ತು ನಾನು ತುಂಬಾ ನೊಂದಿದ್ದೆ. ತೀರಾ ಅಪ್‌ಸೆಟ್ ಆಗಿದ್ದೆ. ಆಗ ನನಗೆ ಧೈರ್ಯ ತುಂಬಿದ್ದು ನಿಮ್ಮ ಮಾತುಗಳು. ನನ್ನ ಕಡೆಯಿಂದಲೂ ಅದೇ ರೀತಿ. ನಾನು ಕೂಡ ಯಾವಾಗಲೂ ಇದ್ದೇನೆ ಎಂದು ನಟಿ ಬರೆದುಕೊಂಡಿದ್ದಾರೆ. ಹ್ಯಾಪಿ ಬರ್ತ್‌ಡೇ ಸದಾ ಖುಷಿಯಾಗಿರು, ಆರೋಗ್ಯವಾಗಿರು ಎಂದು ದರ್ಶನ್‌ಗೆ ರಕ್ಷಿತಾ ವಿಶ್ ಮಾಡಿದ್ದಾರೆ.‌

 

View this post on Instagram

 

A post shared by Shruthi (@shruthi__krishnaa)

ಪ್ರೀತಿಯ ಸಹೋದರನಿಗೆ ಜನುಮ ದಿನದ ಶುಭಾಶಯಗಳು. ಎಲ್ಲಾ ಸವಾಲುಗಳನ್ನು ಶಕ್ತಿ, ಸಂತೋಷ, ಆರೋಗ್, ಯಶಸ್ಸು ಎಲ್ಲವನ್ನೂ ಡಬಲ್‌ ಡಬಲ್‌ ಕೊಟ್ಟು ದೇವರು ಕಾಪಾಡಲಿ. ಮುಖ್ಯವಾಗಿ ನಿಮ್ಮ ಹಾಗೂ ನಿಮ್ಮ ಸೆಲೆಬ್ರಿಟಿಸ್‌ ಮಧ್ಯೆ ಇರುವ ಪ್ರೀತಿ ನೂರು ಕಾಲ ಹೀಗೆ ಇರಲಿ ಎಂದು ‘ಕಾಟೇರ’ ನಟಿ ಶ್ರುತಿ (Shruthi Krishna) ಶುಭಹಾರೈಸಿದ್ದಾರೆ. ಇದನ್ನೂ ಓದಿ:ನಟ ಸೃಜನ್ ನಿರ್ದೇಶನದ ಮೊದಲ ಚಿತ್ರದ ಶೂಟಿಂಗ್ ಮುಕ್ತಾಯ

‘ರಾಬರ್ಟ್’ (Robert) ನಟಿ ಸೋನಾಲ್ (Sonal) ಅವರು ಹುಟ್ಟು ಹಬ್ಬದ ಶುಭಾಶಯಗಳು ಬ್ರದರ್. ಸದಾ ಖುಷಿಯಾಗಿರಿ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ದರ್ಶನ್ ಅವರ ಆಪ್ತ ಚಿಕ್ಕಣ್ಣ (Actor Chikkanna) ಕೂಡ ಹುಟ್ಟುಹಬ್ಬಕ್ಕೆ ಡಿಬಾಸ್‌ಗೆ ಶುಭಕೋರಿದ್ದಾರೆ.

ಅದರಂತೆಯೇ ಸ್ಯಾಂಡಲ್‌ವುಡ್ ನಟಿಯರಾದ ಶರಣ್ಯ ಶೆಟ್ಟಿ, ಅಭಿಷೇಕ್‌ ಅಂಬರೀಶ್, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಅನೇಕರು ಶುಭಕೋರಿದ್ದಾರೆ.

Share This Article