ಅಮ್ಮನನ್ನು ನೆನೆದು ಭಾವುಕರಾದ್ರು ಪುನೀತ್ ರಾಜ್ ಕುಮಾರ್

Public TV
2 Min Read

ಬೆಂಗಳೂರು: ಇಂದು ತಮ್ಮ 43ನೇ ವರ್ಷದ ಹುಟ್ಟುಹಬ್ಬದ ಸಂಭ್ರದಲ್ಲಿರೋ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಮ್ಮ ಪಾರ್ವತಮ್ಮ ಅವರನನ್ನು ನೆನೆದು ಬೇಸರ ವ್ಯಕ್ತಪಡಿಸಿದ್ರು. ಅಭಿಮಾನಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ತಿರೋದಕ್ಕೆ ಖುಷಿಯಾಗ್ತಿದೆ. ಆದ್ರೆ ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆಯಲ್ಲಿ ಅಮ್ಮ ಇಲ್ಲ ಅನ್ನೋದೇ ಬೇಜಾರಿನ ಸಂಗಂತಿಯಾಗಿದೆ ಅಂದ್ರು. ಇದನ್ನೂ ಓದಿ: ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಹೀರೋ ವಿಶ್- ಅಪ್ಪು ನಂಗೆ ಮಗ ಇದ್ದಂಗೆ ಅಂದ್ರು ಶಿವಣ್ಣ

ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಅದು ಅವರ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನ. ಆದ್ರೆ ಈ ಬಾರಿ ನಾನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಈ ಎರಡು ದಿನ ನಾನು ಅಭಿಮಾನಿಗಳಿಗೋಸ್ಕರ ಅಂತಾನೇ ಇಟ್ಟಿದ್ದೇನೆ. ಈ ಬಾರಿ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಬಾರಿ ಅವರು ನಮ್ಮ ಜೊತೆ ಇಲ್ಲ. ಜೀವನದಲ್ಲಿ ಏನೇ ಸಾಧಿಸಿದ್ರೂ, ಅದಕ್ಕೆ ಅವರೇ ಕಾರಣ. ಹೀಗಾಗಿ ತುಂಬಾ ವಿಚಾರಗಳಲ್ಲಿ ಅಪ್ಪ-ಅಮ್ಮನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಪ್ಪ-ಅಮ್ಮ ನಮ್ಮ ಜೊತೆ ಇಲ್ಲ ಆದ್ರೆ ಅಭಿಮಾನಿಗಳು ಬೇರೆ ಬೇರೆ ಊರುಗಳಿಂದ ಬರುತ್ತಿದ್ದಾರೆ. ಹೀಗಾಗಿ ಅವರನ್ನು ನಿರಾಸೆ ಮಾಡಕ್ಕಾಗಲ್ಲ ಅಂತ ಹೇಳಿದ್ರು.

ರಾಜ್ ಕುಮಾರ್ ಅವರನ್ನು ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ. ಅವರ ಮಗನಾಗಿರುವುದು ನನ್ನ ಪುಣ್ಯ. ಆ ಪ್ರೀತಿ, ವಿಶ್ವಾಸ, ಅಭಿಮಾನ ನಮ್ಮ ಕುಟುಂಬದಲ್ಲಿ ಎಲ್ಲರೂ ನೋಡುತ್ತಿದ್ದಾರೆ. ಅದಕ್ಕೆ ನಾವು ಅವರಿಗೆ ಯಾವತ್ತೂ ಚಿರಋಣಿ ಅಂದ್ರು.

ಅಭಿಮಾನಿಗಳು ರಾಜರತ್ಸೋತ್ಸವ ಹೆಸರಲ್ಲಿ ಅದ್ಧೂರಿಯಾಗಿಯೇ ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ನಟಸಾರ್ವಭೌಮ ಅಂತ ಸಿನಿಮಾಗೆ ಹೆಸರಿಟ್ಟಿರೋದಕ್ಕೆ ಭಯ ಆಗ್ತಿದೆ. ಯಾಕಂದ್ರೆ ಈ ಹಿಂದೆ ರಾಜಕುಮಾರ ಅಂತ ಸಿನಿಮಾಗೆ ಹೆಸರಿಟ್ಟಾಗಲೂ ಭಯವಾಗಿತ್ತು ಅಂತ ಹೇಳಿದ್ರು. ಇದನ್ನೂ ಓದಿ: ದೊಡ್ಮನೆ ರಾಜಕುಮಾರನಿಗೆ ಹುಟ್ಟು ಹಬ್ಬದ ಸಂಭ್ರಮ- ನಟಸಾರ್ವಭೌಮ ತಂಡದಿಂದ ಫಸ್ಟ್ ಟೀಸರ್ ಗಿಫ್ಟ್

ಇದೇ ವೇಳೆ ತಮ್ಮ ಹೇರ್ ಸ್ಟೈಲ್ ಬಗ್ಗೆ ಮಾತನಾಡಿದ ಅವರು, ಹೇರ್ ಸ್ಟೈಲ್ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿರೋದಕ್ಕೆ ಖುಷಿಯಿದೆ. ಜುಲೈಗೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ ಅಂತ ತಿಳಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *