ನಟ ದಿಗಂತ್ ಬಾಳಲ್ಲಿ ಇದು 2ನೇ ದುರಂತ..!

Public TV
1 Min Read

ಸ್ಯಾಂಡಲ್‌ವುಡ್‌ಗೆ `ಮಿಸ್ ಕ್ಯಾಲಿಫೋರ್ನಿಯ’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ದಿಗಂತ್‌ಗೆ ಆರೋಗ್ಯದ ವಿಚಾರದಲ್ಲಿ ಲಕ್ ಕೈಕೊಟ್ಟಂತಿದೆ. ಈ ನಟನ ಬದುಕಲ್ಲಿ ಈಗಾಗಲೇ ಕರಾಳ ಘಟನೆಯೊಂದು ನಡೆದಿದ್ದು, ಇದೀಗ ಇದಕ್ಕೆ ಮತ್ತೊಂದು ಘಟನೆ ಸೇರಿಕೊಂಡಿದೆ.

ಪಂಚರಂಗಿ, ಮನಸಾರೆ, ಲೈಫು ಇಷ್ಟೇನೆ, ಸಿನಿಮಾಗಳ ಮೂಲಕ ಹೆಚ್ಚು ಖ್ಯಾತಿಯನ್ನು ಪಡೆದ ನಟನ ಬಾಳಲ್ಲಿ ಈ ಎರಡು ಕರಾಳ ಘಟನೆ ನಡೆದಿದೆ. ಈ ಹಿಂದೆ ಚಿತ್ರೀಕರಣವೊಂದರಲ್ಲಿ ಬಲಗಣ್ಣಿಗೆ ಪೆಟ್ಟು ಬಿದ್ದಿತ್ತು. ಈಗ ಸ್ಪೈನಲ್ ಮೈನರ್ ಇಂಜುರಿ ಆಗಿದೆ. ಆರೋಗ್ಯದ ವಿಚಾರದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ದಿಗಂತ್ ಸುದ್ದಿಯಾಗುತ್ತಲೇ ಇರುತ್ತಾರೆ.‌ ಇದನ್ನೂ ಓದಿ: ದಿಗಂತ್‌ಗೆ ಆಗಿರೋದು ಸಣ್ಣ ಗಾಯ, ಗಾಬರಿಪಡುವ ಅಗತ್ಯವಿಲ್ಲ: ಯೋಗರಾಜ್ ಭಟ್

ಸ್ಯಾಂಡಲ್‌ವುಡ್ ನಟ ದಿಗಂತ್ ಕನ್ನಡ ಚಿತ್ರರಂಗದಲ್ಲಿ ಪೀಕ್‌ನಲ್ಲಿರುವಾಗ `ಟಿಕೆಟ್ ಟು ಬಾಲಿವುಡ್’ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಬಲಕಣ್ಣಿಗೆ ಬಲವಾಗಿ ಪೆಟ್ಟು ಬಿದ್ದು ಸಂಕಷ್ಟ ದಿಗಂತ್ ಅನುಭವಿಸಿದ್ದರು. ೨೦೧೬ರಲ್ಲಿ ಈ ಅವಘಡ ಸಂಭವಿಸಿ ಬಲಕಣ್ಣಿನ ತೊಂದರೆಗೆ ನಟ ದಿಗಂತ್ ಒಳಗಾಗಿದ್ದರು. ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿಯೇ ನಾಯಕಿಯ ಹೀಲ್ಡ್ ಚಪ್ಪಲಿ ಎಸೆಯುವ ಸೀನ್‌ನಲ್ಲಿ ದಿಗಂತ್ ಕಣ್ಣಿಗೆ ಏಟಾಗಿತ್ತು.

ಈಗ ಮತ್ತೊಮ್ಮೆ ಗೋವಾದಲ್ಲಿ ಬೀಚ್ ಬದಿಯಲ್ಲಿ ಸೊಮಾರ್ ಸಾಲ್ಟ್ ಮಾಡುವಾಗ ಬೆನ್ನು ಹಾಗೂ ಕತ್ತಿಗೆ ಏಟು ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಇನ್ನು ನೆಚ್ಚಿನ ನಟನ ಆರೋಗ್ಯದಲ್ಲಿ ಚೇತರಿಕೆಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *