INDIA ಒಕ್ಕೂಟದ ರಾಷ್ಟ್ರವಿರೋಧಿ ಮಾನಸಿಕತೆ ಬಹಿರಂಗವಾಗಿದೆ – ತೇಜಸ್ವಿ ಸೂರ್ಯ ಕಿಡಿ

Public TV
1 Min Read

ಬೆಂಗಳೂರು: ಐಎನ್‌ಡಿಐಎ (INDIA) ಒಕ್ಕೂಟದವರು ಎಷ್ಟೇ ಪ್ರಯತ್ನ ಪಟ್ಟರೂ, ಏನೇ ಮುಖವಾಡ ಧರಿಸಿದರೂ ಅವರ ರಾಷ್ಟ್ರವಿರೋಧಿ ಮಾನಸಿಕತೆ ಉದಯನಿಧಿ ಸ್ಟಾಲಿನ್ (Uday Stalin) ಮೂಲಕ ಬಹಿರಂಗವಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಕಿಡಿ ಕಾರಿದ್ದಾರೆ.

ಸಹಸ್ರಾರು ವರ್ಷಗಳಿಂದ ಈ ರಾಷ್ಟ್ರದ ಬುನಾದಿಯಾಗಿರುವ ನಮ್ಮ ಸನಾತನ ಸಂಸ್ಕೃತಿಯನ್ನು ನಿರ್ಮೂಲನೆ ಮಾಡುತ್ತಾರಂತೆ. ಸನಾತನ ಧರ್ಮವನ್ನು ಅಳಿಸುವ ಪ್ರಯತ್ನ ಕಳೆದ 1 ಸಾವಿರ ವರ್ಷದಿಂದಲೂ ನಡೆಯುತ್ತಲೇ ಬಂದಿದೆ. ಉದಯ್ ಸ್ಟಾಲಿನ್ ರ ಈ ಮಾತು ಅದೇ ವಿಕೃತ ಮನಸ್ಥಿತಿಯನ್ನು ದರ್ಶಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಬರೆದುಕೊಂಡಿದ್ದಾರೆ.

ಇಂತಹ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ತಕ್ಕ ಪಾಠ ಕಲಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಇದನ್ನೂ ಓದಿ: ಕೆಎಲ್ ರಾಹುಲ್ ಫಿಟ್ – ಟೀಂ ಇಂಡಿಯಾದಿಂದ ಯಾರು ಔಟ್?

ಸನಾತನನ ಧರ್ಮವು (Sanatan Dharma) ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (M.K.Stalin) ಅವರ ಪುತ್ರ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ ನಾಐಕರು ಮುಗಿಬಿದ್ದು ಟೀಕಿಸುತ್ತಿದ್ದಾರೆ.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್