ಥಾಯ್ಲೆಂಡ್ ನಲ್ಲಿ ಸಂಯುಕ್ತ ಹುಟ್ಟು ಹಬ್ಬ: ಬಿಂದಾಸ್ ಮೂಡ್ ನಲ್ಲಿ ಕಿರಿಕ್ ಬೆಡಗಿ

Public TV
2 Min Read

ಕಿರಿಕ್ ಪಾರ್ಟಿ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸಂಯುಕ್ತ ಹೆಗ್ಡೆ (Samyukta Hegde) ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು (Birthday) ಥಾಯ್ಲೆಂಡ್ ನಲ್ಲಿ ಆಚರಿಸಿಕೊಂಡಿದ್ದಾರೆ. ಪಾರ್ಟಿ ಮೂಡ್ ನಲ್ಲಿರುವ ಸಂಯುಕ್ತ ಫೋಟೋಶೂಟ್ ವೊಂದನ್ನು ಮಾಡಿಸಿಕೊಂಡಿದ್ದು, ಒಂದು ರೀತಿಯಲ್ಲಿ ಕಥಾ ಸರಣಿಯಂತಿದೆ ಫೋಟೋ ಶೂಟ್.

ಥಾಯ್ಲೆಂಡ್ (Thailand) ನ ಕೋಹ್ ಪಂಗೋನ್ ದ್ವೀಪದಲ್ಲಿ ಅವರು ತಮ್ಮ 25ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಶೇರ್ ಮಾಡಿದ್ದಾರೆ. ಅಷ್ಟೂ ಫೋಟೋಗಳಲ್ಲೂ ಸಂಯುಕ್ತ ಬಿಂದಾಸ್.

ಸಾಮಾನ್ಯವಾಗಿ ಹುಟ್ಟು ಹಬ್ಬದ ದಿನದಂದು ಗ್ರ್ಯಾಂಡ್ ಆಗಿರುವ ಬಟ್ಟೆ ಹಾಕೋದು ಕಾಮನ್. ಆದರೆ, ಆ ಸಂಪ್ರದಾಯವನ್ನು ಸಂಯುಕ್ತ ಮುರಿದಿದ್ದಾರೆ. ತುಂಡುಡುಗೆಯಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೇ ಹುಟ್ಟು ಹಬ್ಬವನ್ನು ಎಂಜಾಮ್ ಮಾಡಿದ್ದಾರೆ.

ಯಾವುದನ್ನೂ ಮುಚ್ಚುಮರೆ ಮಾಡದೇ ಕೇಕು, ವೋಡ್ಕ, ವೈನು, ನಾಯಿ ಹೀಗೆ ಕಾನ್ಸೆಪ್ಟ್ ರೀತಿಯಲ್ಲಿ ತಮ್ಮೊಂದಿಗೆ ಇಟ್ಟುಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ ಸಂಯುಕ್ತ. ಇದೆಲ್ಲ ಏನು ಎಂದು ಹಲವರು ನಟಿಗೆ ಪ್ರಶ್ನೆ ಮಾಡಿದ್ದಾರೆ.

ಕೇಕ್ ನೊಂದಿಗೆ ಶುರುವಾಗುವ ಅವರ ಹುಟ್ಟು ಹಬ್ಬ, ನಾನಾ ಭಾವಗಳನ್ನು ದಾಟಿಕೊಂಡು ಬೀದಿಯ ಎಟಿಎಂ ಬಳಿ ನಶೆಯಲ್ಲಿ ಮುಕ್ತಾಯವಾಗುತ್ತದೆ. ಇಂಥದ್ದೊಂದು ವಿಚಿತ್ರ ಕಲ್ಪನೆಯಲ್ಲಿ ಫೋಟೋ ಶೂಟ್ ಮಾಡಿಕೊಂಡಿದ್ದಾರೆ ಸಂಯುಕ್ತ.

ಈ ಹಿಂದೆಯೂ ಸಂಯುಕ್ತ ಟಾಪ್‌ಲೆಸ್ ವೀಡಿಯೋವೊಂದನ್ನ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ನಿಮ್ಮ ದೇಹ, ನಿಮ್ಮ ಆಸ್ತಿ ಎಂದು ನಟಿ ವೀಡಿಯೋದಲ್ಲಿ ಪಾಠ ಮಾಡಿದ್ದರು

‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿಗೆ (Rakshit Shetty) ನಾಯಕಿಯಾಗುವ ಮೂಲಕ ಬಣ್ಣದ ಬದುಕಿಗೆ ಲಗ್ಗೆಯಿಟ್ಟರು. ರಕ್ಷಿತ್, ರಶ್ಮಿಕಾ ಜೊತೆ ಸಂಯುಕ್ತಾ ಕೂಡ ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾದಲ್ಲೂ ನಟಿ ಮಿಂಚಿದ್ರು. ಜಯಂರವಿ, ಪ್ರಭುದೇವ, ಅಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ

ಕೆಲ ತಿಂಗಳುಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದಲ್ಲಿ ಸಂಯುಕ್ತಾ ಕಾಲಿಗೆ ಪೆಟ್ಟಾಗಿತ್ತು. ಬಳಿಕ ಸೂಕ್ತ ಚಿಕಿತ್ಸೆಯ ನಂತರ ನಟಿ ಚೇತರಿಸಿಕೊಂಡಿದ್ದಾರೆ. 5 ತಿಂಗಳ ಬೆಡ್ ರೆಸ್ಟ್ ನಂತರ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಕಿರಿಕ್ ಬೆಡಗಿ ಸಂಯುಕ್ತಾ, ದೇಹ ಪ್ರದರ್ಶಿಸಿರುವ ವೀಡಿಯೋ ಶೇರ್ ಮಾಡುವ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೆಟ್ ಮಾಡಿದ್ದಾರೆ. ನಟಿ ಟಾಪ್‌ಲೆಸ್ ಆಗಿರುವ ವೀಡಿಯೋ ನೋಡಿ ಅಭಿಮಾನಿಗಳು ದಂಗಾಗಿದ್ದರು.

 

ನಟಿ ಸಂಯುಕ್ತಾ ಹೆಗ್ಡೆ ಕೈಯಲ್ಲಿ ಹೇಳಿಕೊಳ್ಳುವಂತಹ ಸಿನಿಮಾಗಳೇನು ಇಲ್ಲ. ‘ಕ್ರೀಮ್’ (Cream) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಸಂಯುಕ್ತಾ ಒಂದೇ ಸಿನಿಮಾದಿಂದ ಲಾಂಚ್ ಆದ್ರೂ ಕೂಡ ರಶ್ಮಿಕಾ ಅವರಿಗೆ ಸಿಕ್ಕಂತಹ ಯಶಸ್ಸು ಸಂಯುಕ್ತಾಗೆ ಸಿಗಲಿಲ್ಲ. ಒಳ್ಳೆಯ ಕಥೆಗಾಗಿ ನಟಿ ಎದುರು ನೋಡ್ತಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್