ಟಾಯ್ಲೆಟ್‌ನಲ್ಲಿ ಸಮೋಸಾ ತಯಾರಿಕೆ – 30 ವರ್ಷಗಳ ಬಳಿಕ ರೆಸ್ಟೊರೆಂಟ್ ಬಂದ್

Public TV
1 Min Read

ರಿಯಾದ್: ಬರೋಬ್ಬರಿ 30 ವರ್ಷಗಳಿಂದ ಶೌಚಾಲಯದಲ್ಲಿ ಸಮೋಸಾ ಹಾಗೂ ಇತರ ಖಾದ್ಯಗಳನ್ನು ತಯಾರಿಸುತ್ತಿದ್ದ ಉಪಹಾರ ಗೃಹವನ್ನು ಪತ್ತೆ ಹಚ್ಚಿ, ಮುಚ್ಚಿಸಿರುವ ಘಟನೆ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದೆ.

ಕೇಳಿದಂತೆಯೇ ವಾಕರಿಕೆ ಬರುವಂತಹ ವಿಚಿತ್ರ ಆಹಾರ ಸಂಸ್ಕೃತಿಯನ್ನು ಅನುಸರಿಸಿಕೊಂಡಿದ್ದ ಸೌದಿ ಅರೇಬಿಯಾದ ಉಪಹಾರ ಗೃಹದ ಬಗ್ಗೆ ಅಲ್ಲಿನ ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಇದೀಗ ಬರೋಬ್ಬರಿ 3 ದಶಕಗಳ ಬಳಿಕ ಅದನ್ನು ಮುಚ್ಚಿಸಲಾಗಿದೆ. ಇದನ್ನೂ ಓದಿ: ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

ಉಪಹಾರ ಗೃಹದ ಟಾಯ್ಲೆಟ್‌ನಲ್ಲಿ ತಿಂಡಿ ಹಾಗೂ ಊಟವನ್ನು ತಯಾರಿಸಲಾಗುತ್ತಿದ್ದು, ಅವಧಿಯನ್ನು ಮೀರಿರುವ ಆಹಾರ ಪದಾರ್ಥಗಳನ್ನೂ ಬಳಕೆ ಮಾಡಿರುವುದಾಗಿ ಅಧಿಕಾರಿಗಳು ಕಡುಹಿಡಿದಿದ್ದಾರೆ. ಇದೀಗ ಅಸಹ್ಯಕರವಾಗಿ ಖಾದ್ಯವನ್ನು ತಯಾರಿಸುತ್ತಿದ್ದ ರೆಸ್ಟೊರೆಂಟ್ ಅನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಇದನ್ನೂ ಓದಿ: 118 ವರ್ಷದ ಸನ್ಯಾಸಿನಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

ಸೌದಿ ಅರೇಬಿಯಾದಲ್ಲಿ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಉಪಹಾರ ಗೃಹಗಳನ್ನು ಮುಚ್ಚಿರುವುದು ಇದೇ ಮೊದಲೇನಲ್ಲ. ಜನವರಿಯಲ್ಲಿ ಜೆಡ್ಡಾದ ಪ್ರಸಿದ್ಧ ಷವರ್ಮಾ ರೆಸ್ಟೋರೆಂಟ್ ಅನ್ನು ಮುಚ್ಚಲಾಗಿತ್ತು. ಈ ರೆಸ್ಟೋರೆಂಟ್‌ನಲ್ಲಿ ತಯಾರಿಸಲಾದ ಖಾದ್ಯಗಳಲ್ಲಿ ಸತ್ತ ಇಲಿಗಳು ಕಂಡುಬಂದಿತ್ತು. ಅದರ ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಉಪಹಾರ ಗೃಹವನ್ನು ಮುಚ್ಚಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *