ವರ್ಕೌಟ್‌ನಲ್ಲಿ ಬ್ಯುಸಿಯಾದ ವರದನಾಯಕನ ರಾಣಿ

Public TV
1 Min Read

ಚಂದನವನದ ಅಭಿನಯ ಚಕ್ರವರ್ತಿ ಸುದೀಪ್ ಜೊತೆ ನಟಿಸಿ ಕನ್ನಡಿಗರಿಗೆ ಪರಿಚಯವಾಗಿರುವ ಸಮೀರಾ ರೆಡ್ಡಿ ವರ್ಕೌಟ್ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ತಾಯಿಯಾದ ನಂತರ ಅವರು ಸಿನಿರಂಗದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು. ಆದರೂ ತಮ್ಮ ಫಿಟ್‍ನೆಸ್‍ ಕಡೆ ಗಮನ ಕೊಡುವುದನ್ನು ಅವರು ಮರೆತಿಲ್ಲ. ಸಮೀರಾ ಫಿಟ್‍ನೆಸ್‍ಗಾಗಿ ವರ್ಕೌಟ್ ಮಾಡುತ್ತಿರುತ್ತಾರೆ.

Romance Between Sudeep and Sameera Reddy | Kannada Junction - YouTube

ಇಂದು ತಮ್ಮ ವರ್ಕೌಟ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಫಿಟ್ನೆಸ್ಗಾಗಿ ಆಸೆ ಪಡುವ ಎಲ್ಲ ತಾಯಂದಿರಿಗೆ ಈ ವೀಡಿಯೋ ಸ್ಫೂರ್ತಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ವೀಡಿಯೋದಲ್ಲಿ ಸಮೀರಾ ಜೋಶ್ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಇದನ್ನೂ ಓದಿ: ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ 

 

View this post on Instagram

 

A post shared by Sameera Reddy (@reddysameera)

ಸಮೀರಾ ರೆಡ್ಡಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಎರಡು ಮಕ್ಕಳ ತಾಯಿಯಾದರೂ ಫಿಟ್‍ನೆಸ್‍ಗೆ ಹೆಚ್ಚು ಒತ್ತು ನೀಡುವುದರಲ್ಲಿ ಎಲ್ಲರಿಗೂ ಸ್ಫೂರ್ತಿ ಆಗಿದ್ದಾರೆ. ಇನ್ಸ್ಟಾದಲ್ಲಿ ಈ ನಟಿ ತಮ್ಮ ವರ್ಕೌಟ್ ವೀಡಿಯೋ ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಸಮೀರಾ ಮಗಳ ಜೊತೆ ಆಟವಾಡಿಕೊಂಡೇ ವರ್ಕೌಟ್ ಹೇಗೆ ಮಾಡಬಹುದು ಎಂದು ಅಭಿಮಾನಿಗಳಿಗೆ ಹೇಳಿಕೊಟ್ಟಿದ್ದಾರೆ. ತಮ್ಮ ಮಗಳು ನೈರಾ ಜೊತೆ ಆಟವಾಡುವುದರ ಜೊತೆಗೆ ಏಕಕಾಲದಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ತಾಯಂದಿರಿಗೆ ಈ ರೀತಿಯ ಐಡಿಯಾ ಯೂಸ್ ಆಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Weighed 105 kgs, even as I held my gorgeous son, didn't feel happy: Sameera Reddy on postpartum depression

ವೀಡಿಯೋ ಪೊಸ್ಟ್ ಮಾಡಿದ ಅವರು, “ನಿಮ್ಮ ದೊಡ್ಡ ಬಂಡವಾಳ ನೀವೇ. ನಾನು ನನ್ನ ಆರೋಗ್ಯ, ದೇಹ, ಸಂತೋಷ, ಮನಸ್ಸನ್ನು ಹೂಡಿಕೆ ಮಾಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಿಮ್ಮ ಸಂತೋಷಕ್ಕೆ ನೀವೇ ಬಂಡವಾಳ ಅಂದರೆ ಕಾರಣರಾಗಬೇಕು ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

Share This Article
Leave a Comment

Leave a Reply

Your email address will not be published. Required fields are marked *