ದಕ್ಷಿಣ ಭಾರತದ ಮುದ್ದಾದ ಜೋಡಿ ಅಂತಲೇ ಹೈಲೆಟ್ ಆಗಿದ್ದ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನವಾಗಿ ಕೆಲವೇ ತಿಂಗಳುಗಳೇ ಕಳೆದಿದೆ. ಖಾಸಗಿ ಜೀವನ ಪಕ್ಕಕ್ಕಿಟ್ಟು ಸಿನಿಮಾಗಳಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ. ಪತಿಯ ಸಹವಾಸವೇ ಬೇಡ ಅಂತಾ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಜಿ ಪತಿಯ ಮೂರು ವರ್ಷಗಳ ಹಳೆಯ ನೆನಪನ್ನು ಪೋಸ್ಟ್ ಮಾಡುವ ಮೂಲಕ ಸಮಂತಾ ಸದ್ದು ಮಾಡ್ತಿದ್ದಾರೆ.
ವಿಚ್ಛೇದನವಾಗ್ತಿದ್ದಂತೆ ಸಮಂತಾ, ಮಾಜಿ ಪತಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ರು. ಆದರೆ ಈಗ ಮತ್ತೆ ಮಾಜಿ ಪತಿ ನಾಗಚೈತನ್ಯಗೆ ಸಂಬಂಧಿಸಿದ ಸ್ಟೋರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಂತ ಸ್ಯಾಮ್ ತಮ್ಮ ಖಾಸಗಿ ಜೀವನದ ಕುರಿತು ಪೋಸ್ಟ್ ಮಾಡಿಲ್ಲ. ಬದಲಾಗಿ ಮೂರು ವರ್ಷಗಳ ಹಿಂದಿನ ಸಮಂತಾ, ನಾಗಚೈತನ್ಯ ನಟಿಸಿದ್ದ `ಮಜಿಲಿ’ ಚಿತ್ರದ ಪೋಸ್ಟರ್‌ನ್ನ ಶೇರ್ ಮಾಡಿದ್ದಾರೆ.
ನಟಿ ಸಮಂತಾ ಮೂರು ವರ್ಷಗಳ ಹಿಂದಿನ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಮಜಿಲಿ ಚಿತ್ರಕ್ಕೆ ಮೂರು ವರ್ಷಗಳು ಪೂರೈಸಿರುವ ಖುಷಿಯಲ್ಲಿ ಆ ಸಿನಿಮಾದ ಪೋಸ್ಟರ್‌ನ್ನ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಆ ಪೋಸ್ಟರ್‌ನಲ್ಲಿ ನಾಗಚೈತನ್ಯ ಪೋಸ್ಟರ್ ಹೈಲೆಟ್ ಆಗಿದೆ. ಇದನ್ನು ಓದಿ:ಸಿನಿಮಾ ಮುಹೂರ್ತದಲ್ಲೇ ನೆಚ್ಚಿನ ನಟನಿಗೆ ದೃಷ್ಟಿ ತಗೆದ ರಶ್ಮಿಕಾ ಮಂದಣ್ಣ
`ಯೇ ಮಯಾ ಚೇಸಾವೆ’, `ಮನಂ’, `ಮಜಿಲಿ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿರೋ ಈ ಜೋಡಿಯ ಮತ್ತೊಂದು ಹೊಸ ಚಿತ್ರ ಬರಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಪೂರಕವಾಗಿರುವಂತೆ ಸ್ಯಾಮ್ ಶೇರ್ ಮಾಡಿರೋ ಪೋಸ್ಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ನೆಚ್ಚಿನ ಜೋಡಿ ತೆರೆಯ ಮೇಲೆ ಆದರೂ ಒಂದಾಗಲಿ ಅಂತಾ ಕಾಯ್ತಿದ್ದಾರೆ.