ಅಬ್ಬಬ್ಬಾ ಎನಿಸುವಷ್ಟಿದೆ ಸಮಂತಾ ಧರಿಸಿದ್ದ ಈ ಸೀರೆಯ ಬೆಲೆ?

Public TV
1 Min Read

ಟಾಲಿವುಡ್ (Tollywood) ಬ್ಯೂಟಿ ಸಮಂತಾ (Samantha) ಸದ್ಯ ಶಾಕುಂತಲೆಯಾಗಿ ಮಿಂಚೋಕೆ ರೆಡಿಯಾಗಿದ್ದಾರೆ. ಇತ್ತೀಚೆಗೆ ʻಶಾಕುಂತಲಂʼ ಟ್ರೈಲರ್ ಲಾಂಚ್‌ಗೆ ಸಿಂಪಲ್ ಆಗಿ ನಟಿ ಸಮಂತಾ ಎಂಟ್ರಿ ಕೊಟ್ಟಿದ್ದರು. ಸ್ಯಾಮ್‌ ಧರಿಸಿದ್ದ ಸಿಂಪಲ್‌ ಸೀರೆ ಈಗ ನೆಟ್ಟಿಗರ ತಲೆ ಕೆಡಿಸಿದೆ. ಆ ಸೀರೆಯ ಅಸಲಿ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ.

ಇತ್ತೀಚೆಗೆ ತೆರೆಕಂಡ `ಯಶೋದ’ (Yashoda Film) ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಅದರಲ್ಲೂ ಸಮಂತಾ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅನಾರೋಗ್ಯದ ಮಧ್ಯೆ ಶಾಕುಂತಲೆ ಗೆಲ್ಲಲು ಸಮಂತಾ ಹೊರಟಿದ್ದಾರೆ. ಮೊನ್ನೆಯಷ್ಟೇ ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಸಿಂಪಲ್ ಎಂಟ್ರಿ ಕೊಟ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಬೆನ್ನಲ್ಲೇ ಇವೆಂಟ್‌ನಲ್ಲಿ ನಟಿ ಧರಿಸಿದ್ದ ಸೀರೆಯ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಸಿಕ್ಕಿದೆ.

 

View this post on Instagram

 

A post shared by Samantha (@samantharuthprabhuoffl)

ತೋಳಿಲ್ಲದ ಸ್ಲೀವ್‌ಲೆಸ್ ಬ್ಲೋಸ್‌ಗೆ ಡಿಸೈನರ್ ವರ್ಕ್ ಇಲ್ಲದ ಸೀರೆ ಬಿಳಿ ಬಣ್ಣದ ಸೀರೆಯನ್ನ ಸಮಂತಾ ಉಟ್ಟಿದ್ದರು. ಕಣ್ಣಿಗೆ ತುಸು ದೊಡ್ಡದಾದ ಗ್ಲಾಸ್ ಧರಿಸಿ, ಸರಳವಾಗಿ ಮತ್ತು ಸುಂದರವಾಗಿ ಸಮಂತಾ ಕಾಣಿಸಿಕೊಂಡರು. ಇದನ್ನೂ ಓದಿ: ಶ್ರೀಜಾ 3ನೇ ಮದುವೆ ವದಂತಿ ನಡುವೆ ದುಬಾರಿ ಬಂಗಲೆಯನ್ನ ಮಗಳಿಗೆ ಉಡುಗೊರೆ ನೀಡಿದ ಮೆಗಾಸ್ಟಾರ್

 

View this post on Instagram

 

A post shared by Samantha (@samantharuthprabhuoffl)

ಈ ಸರಳವಾದ ಸೀರೆಗೆ ನಟಿ ಸಮಂತಾ 50,000 ರೂ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಸೀರೆ ಡಿಸೈನ್ ಮಾಡಿರುವುದು ದೇವನಗರಿಯಲ್ಲಿ. ಸೀರೆಯ ಜೊತೆ ಕನ್ನಡಕ, ಪಾದರಕ್ಷೆ ಎಲ್ಲಾ ಸೇರಿದರೆ ಬರೋಬ್ಬರಿ 70,000 ರೂ ಮೌಲ್ಯವಾಗಲಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *