ಸ್ಕಿನ್ ಕಲರ್ ಬಟ್ಟೆಯಲ್ಲಿ ಪಡ್ಡೆಗಳ ನಿದ್ದೆ ಕೆಡಿಸಿದ ಸಮಂತಾ

Public TV
1 Min Read

ಟನೆ ಜೊತೆ ಫ್ಯಾಶನ್ ಲೋಕದಲ್ಲಿ ಟಾಲಿವುಡ್ ನಟಿ ಸಮಂತಾ (Samantha ) ಟ್ರೆಂಡ್ ಸೆಟರ್. ಇದೀಗ ಫ್ಯಾಶನ್ (Fashion) ಪ್ರಿಯರು ಬೆರಗಾಗುವಂತೆ ಉಡುಗೆ ಧರಿಸಿ ಪೋಸ್ ಕೊಟ್ಟಿದ್ದಾರೆ ಸಮಂತಾ.

38ನೇ ವಯಸ್ಸಿನಲ್ಲೂ ಭಾರೀ ಫಿಟ್ ಆಗಿರುವ ಸಮಂತಾ ಇದೀಗ ಸ್ಕಿನ್ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ. ಮ್ಯಾಗ್‌ಜಿನ್‌ವೊಂದರ ಫೋಟೋಶೂಟ್‌ಗಾಗಿ (Photoshoot) ಸಮಂತಾ ಈ ರೀತಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಕ್ತಸಿಕ್ತ ಅವತಾರದಲ್ಲಿ ನಟಿ ರಶ್ಮಿಕಾ ಮಂದಣ್ಣ


ಭಾರೀ ಬೋಲ್ಡ್ ಲುಕ್ ಒಳಗೊಂಡ ಫೋಟೋಶೂಟ್‌ನಲ್ಲಿ ಸಮಂತಾ ಸ್ಕಿನ್ ಕಲರ್ ನೆಟೆಡ್ ಗೌನ್ ಧರಿಸಿದ್ದಾರೆ. ಯಾವುದೇ ಬಟ್ಟೆ ಧರಿಸಿದರೂ ಅದನ್ನ ಆತ್ಮವಿಶ್ವಾಸದಿಂದ ಕ್ಯಾರಿ ಮಾಡಿದರೆ ಮುಜುಗರ ಅನ್ನಿಸುವುದಿಲ್ಲ. ಇದೀಗ ಸಮಂತಾ ಧರಿಸಿದಿರುವ ಉಡುಗೆಯಂತೂ ಥಟ್ ಅಂತ ನೋಡಿದ್ರೆ ಬೆರಗಾಗೋದು ಗ್ಯಾರಂಟಿ. ಅಂಥಹ ಬೋಲ್ಡ್ ಲುಕ್‌ನಲ್ಲೂ ಸ್ಯಾಮ್ ಆತ್ಮವಿಶ್ವಾಸದಿಂದ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ಜೂ.ಎನ್‌ಟಿಆರ್ ಕೈಯಲ್ಲಿ `ಗಾಡ್ ಆಫ್ ವಾರ್ ಮುರುಗ’ ಬುಕ್ ಯಾಕೆ?

ಕಡಿಮೆ ಸಿನಿಮಾಗಳು, ಆಗಾಗ ವೆಬ್ ಸಿರೀಸ್‌ಗಳು, ಕಂಪನಿ ಪ್ರಚಾರ ಸಮಂತಾ ಆಯ್ಕೆಯ ಲಿಸ್ಟ್‌ಗಳು. ಮಾಡೆಲಿಂಗ್ ಕ್ಷೇತ್ರದಲ್ಲಿ ಸೂಪರ್ ಮಾಡೆಲ್ ಆಗಿ ಮಿಂಚುವ ಸಮಂತಾ ಬೋಲ್ಡ್ ಉಡುಗೆಗಳಿಗೆ ಹೇಳಿ ಮಾಡಿಸಿದ ದೇಹಸಿರಿ ಕಾಪಾಡಿಕೊಂಡಿದ್ದಾರೆ. ಆದರೆ ಇಷ್ಟೊಂದು ಬೋಲ್ಡ್ ಅವತಾರದಲ್ಲಿ ಕಾಣಿಸ್ಕೊಂಡಿರೋದು ಇದೇ ಮೊದಲಲ್ಲ. ಆದರೀಗ ಸ್ಯಾಮ್ ಬೆಂಕಿ ಲುಕ್‌ಗೆ ಹೊಗಳಿಕೆಯ ಜೊತೆ ತೆಗಳಿಕೆಯೂ ಬರ್ತಿದೆ. ಅದ್ಯಾವ್ದುದಕ್ಕೂ ಸಮಂತಾ ತೆಲೆಕೆಡಿಸಿಕೊಳ್ಳೋದಿಲ್ಲ ಅನ್ನೋದು ಅಷ್ಟೇ ಸತ್ಯ.

Share This Article