ಸಮಂತಾ ನಟನೆಯ ಹಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

Public TV
1 Min Read

ಸೌತ್ ಬ್ಯೂಟಿ ಸಮಂತಾಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆಯಿದೆ. ‘ಪುಷ್ಪ’ (Pushpa) ಸಿನಿಮಾದ ಐಟಂ ಹಾಡಿನ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸದ್ಯ ಸ್ಯಾಮ್ ತಮ್ಮ ಇಂಗ್ಲೀಷ್ ಚಿತ್ರದ ಟೈಟಲ್ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಸಮಂತಾ ನಟನೆಯ ಚೊಚ್ಚಲ ಹಾಲಿವುಡ್‌ ಚಿತ್ರಕ್ಕೆ ಟೈಟಲ್‌ ಫೈನಲ್‌ ಆಗಿದೆ.

ನಟಿ ಸಮಂತಾ ಅವರು ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಡಿವೋರ್ಸ್ ನಂತರ ನಟಿಗೆ ಬೇಡಿಕೆ ಇರೋದಿಲ್ಲ ಎಂದವರಿಗೆ ತಮ್ಮ ಸಿನಿಮಾದ ಸಕ್ಸಸ್ ಮೂಲಕ ತಿರುಗೇಟು ನೀಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಮೂಲಕ ಅವರು ಹಿಂದಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ‘ಪುಷ್ಪ’ ಸಿನಿಮಾದ ಹಾಡಿನಲ್ಲಿ ಐಟಂ ಡ್ಯಾನ್ಸ್ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದ್ದಾರೆ. ಈಗ ಅವರು ಇಂಗ್ಲಿಷ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಚಿತ್ರಕ್ಕೆ ‘ಚೆನ್ನೈ ಸ್ಟೋರೀಸ್’ ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯದಲ್ಲೇ ಚೆನ್ನೈನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಇಂಗ್ಲೆಂಡ್‌ನಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುವುದು ಎಂಬ ಮಾಹಿತಿಯಿದೆ.

‘ಅರೇಂಜ್‌ಮೆಂಟ್ಸ್ ಆಫ್ ಲವ್’ (Arrangements Of Love) ಕಾದಂಬರಿ ಆಧರಿಸಿ ‘ಚೆನ್ನೈ ಸ್ಟೋರೀಸ್’ (Chennai Stories) ಸಿನಿಮಾ ತಯಾರಾಗಲಿದೆ. ಇಂಗ್ಲಿಷ್ ಮತ್ತು ತಮಿಳಿನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ತಾಯಿ ಸತ್ತ ಬಳಿಕ ವಿದೇಶದಿಂದ ಚೆನ್ನೈಗೆ ಬಂದು ತನ್ನ ತಂದೆಯನ್ನು ಹುಡುಕುವ ವ್ಯಕ್ತಿಯ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಆ ವ್ಯಕ್ತಿಗೆ ಸಹಾಯ ಮಾಡುವ ಡಿಟೆಕ್ಟೀವ್ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ ಪಾತ್ರಕ್ಕೆ ಸಿನಿಮಾದಲ್ಲಿ ಪ್ರಾಮುಖ್ಯತೆಯಿದೆ. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್

ಸದ್ಯ ಸಮಂತಾ ಕೈಯಲ್ಲಿ, ಬಾಲಿವುಡ್‌ನ ಸಿಟಾಡೆಲ್ (Citadel), ತೆಲುಗಿನ ಖುಷಿ ಚಿತ್ರ, ಚೆನ್ನೈ ಸ್ಟೋರೀಸ್’ ಸೇರಿದಂತೆ ಹಲವು ಸಿನಿಮಾಗಳಿವೆ. ‘ಶಾಕುಂತಲಂ’ ಚಿತ್ರದ ಸೋಲಿನ ಬಳಿಕವೂ ಸಮಂತಾಗೆ ಡಿಮ್ಯಾಂಡ್ ಕಮ್ಮಿಯಾಗಿಲ್ಲ.

Share This Article