ಜೀವನ ಹೇಗೆ ಬರುತ್ತೆ ಹಾಗೆ ತೆಗೆದುಕೊಳ್ಳಿ- ಕೇರಳದಲ್ಲಿ ಸಮಂತಾ

Public TV
1 Min Read

ಹೈದರಾಬಾದ್: ಟಾಲಿವುಟ್ ನಟಿ ಸಮಂತಾ ಪತಿಯಿಂದ ವಿಚ್ಛೇದನ ಪಡೆದ ನಂತರ ಸಿನಿಮಾ, ಪ್ರವಾಸದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ದೇಶ, ವಿದೇಶಗಳನ್ನು ಸುತ್ತಾಡುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಸಮಂತಾ ಕೇರಳದ ಅತಿರಪ್ಪಿಲ್ಲಿ ಫಾಲ್ಸ್‌ಗೆ ಭೇಟಿ ನೀಡಿದ್ದು, ಗುಲಾಬಿ ಬಣ್ಣದ ಈಜುಡುಗೆಯಲ್ಲಿ ಬೆರಗುಗೊಳಿಸುವ ಚಿತ್ರಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಏರಿಳಿತಗಳು ಸಹಜ ನೀವು ಅದನ್ನು ಆನಂದಿಸಿ. ಜೀವನ ಹೇಗೆ ಬರುತ್ತೆ ಹಾಗೆ ತೆಗೆದುಕೊಳ್ಳಿ ಎನ್ನುವ ಜೀವನದ ಸಂದೇಶವನ್ನು ಸಾರುವ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಣ್ಣದ ಲೋಕಕ್ಕೆ ಕಾಲಿಟ್ಟ ಬಿ.ಎಸ್ ಯಡಿಯೂರಪ್ಪ

 

View this post on Instagram

 

A post shared by Samantha (@samantharuthprabhuoffl)

ನಟಿ ಬಂಡೆಗಳ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ವೀಡಿಯೋವನ್ನು ಸಹ ಹಂಚಿಕೊಂಡಿದ್ದು, ಸದ್ಗುರುಗಳ ಉಲ್ಲೇಖವನ್ನು ಬರೆದಿದ್ದು, ಧ್ಯಾನವು ನಿಮ್ಮ ಅಸ್ತಿತ್ವದ ಸೌಂದರ್ಯವನ್ನು ಅರಿತುಕೊಳ್ಳುವ ಸಾಧನವಾಗಿದೆ ಎಂದು ಬರೆದುಕೊಂಡಿದ್ದಾರೆ.

ಅಕ್ಟೋಬರ್ 2021 ರಲ್ಲಿ ದುಬೈ ಮತ್ತು ರಿಷಿಕೇಶಕ್ಕೆ ಹೋಗಿದ್ದು, 2022ರ ಹೊಸ ವರ್ಷವನ್ನು ಗೋವಾದಲ್ಲಿ ತಮ್ಮ ಸ್ನೇಹಿತೆಯರೊಂದಿಗೆ ಸ್ವಾಗತಿಸಿದ್ದಾರೆ. ಇದೀಗ ಕೇರಳ ಪ್ರವಾಸವದಲ್ಲಿ ತೊಡಗಿಕೊಂಡಿದ್ದಾರೆ. ಊ ಅಂಟವ ಐಟಂ ಸಾಂಗ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಚರ್ಚೆಯಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *