ಬಿಟ್ಟಿ ಸಲಹೆ ಕೊಟ್ಟ ನೆಟ್ಟಿಗನಿಗೆ ಸಮಂತಾ ತಿರುಗೇಟು

Public TV
1 Min Read

ಸೌತ್ ಬ್ಯೂಟಿ ಸಮಂತಾ (Samantha) ‘ಹನಿ ಬನಿ ಸಿಟಾಡೆಲ್’ ವೆಬ್ ಸಿರೀಸ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ನಟಿಗೆ ದೇಹ ತೂಕ ಹೆಚ್ಚಿಸಿಕೊಳ್ಳಿ ಎಂದು ಹೇಳಿದ ನೆಟ್ಟಿಗನಿಗೆ ಸಮಂತಾ ತಕ್ಕ ಶಾಸ್ತಿ ಮಾಡಿದ್ದಾರೆ. ಇದನ್ನೂ ಓದಿ:ಯಶ್ ಬೇಗ ಸಿನಿಮಾ ಮಾಡಿ: ‘ಟಾಕ್ಸಿಕ್’ ನೋಡುವ ನಿರೀಕ್ಷೆ ವ್ಯಕ್ತಪಡಿಸಿದ ಶಾರುಖ್ ಖಾನ್

ವರುಣ್ ಧವನ್ ಜೊತೆ ಬಾಲಿವುಡ್ ಪ್ರಾಜೆಕ್ಟ್ ಪ್ರಚಾರ ಕಾರ್ಯದಲ್ಲಿ ಸಮಂತಾ ತೊಡಗಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಅಭಿಮಾನಿಗಳ ಜೊತೆ ನಟಿ ಪ್ರಶ್ನಾವಳಿ ನಡೆಸಿದ್ದಾರೆ. ಆಗ ನೆಟ್ಟಿಗನೊಬ್ಬ ನಟಿಯ ದೇಹದ ತೂಕದ ಕುರಿತು ಮಾತನಾಡಿದ್ದಾರೆ. ನಿಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡಿದ್ದಾರೆ.

ಅದಕ್ಕೆ ನಟಿ ಪ್ರತಿಕ್ರಿಯಿಸಿ, ನನ್ನ ದೇಹ ಸ್ಥಿತಿಗೆ ಅಗತ್ಯವಿರುವ ಕಟ್ಟುನಿಟ್ಟಾದ ಆಹಾರ ಕ್ರಮವನ್ನು ನಾನು ಫಾಲೋ ಮಾಡುತ್ತಿದ್ದೇನೆ. ಅದು ನನ್ನ ದೇಹದ ತೂಕ ಹೆಚ್ಚಿಸುವುದನ್ನು ತಡೆಯುತ್ತಿದೆ. ಜನರನ್ನು ಮೊದಲು ಜಡ್ಜ್ ಮಾಡೋದನ್ನು ನಿಲ್ಲಿಸಿ. ಬದುಕಿ, ಬದುಕಲು ಬಿಡಿ ಈಗ 2024ರ ಸಮಯ ಎಂದು ನೆಟ್ಟಿಗನಿಗೆ ಸಖತ್ ಆಗಿ ತಿರುಗೇಟು ನೀಡಿದ್ದಾರೆ. ನಟಿಯ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

Share This Article