ಅಮೆರಿಕಾದಲ್ಲಿ ದುಡ್ಡು ಪಡೆದು ಪ್ರಚಾರ ಮಾಡ್ತಿದ್ದಾರಾ ಸಮಂತಾ- ಏನಿದು ಸುದ್ದಿ?

Public TV
2 Min Read

ಸೌತ್ ನಟಿ ಸಮಂತಾ (Samantha) ಅಮೆರಿಕಾಕ್ಕೆ ಹೋಗಿದ್ದೇ ಹೋಗಿದ್ದು ನಿತ್ಯ ಒಂದು ಸುದ್ದಿ ಬರುತ್ತಿದೆ. ಇದೀಗ ಸಮಂತಾ ಅಲ್ಲೂ ಹವಾ ಎಬ್ಬಿಸಿದ್ದಾರೆ. ಖುಷಿ (Kushi) ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ದುಡ್ಡು ಕೊಟ್ಟು ಸಮಂತಾ ಪ್ರಚಾರ ಕಾರ್ಯಕ್ರಮ ನೋಡೋಕೆ ಬರುತ್ತಿದ್ದಾರೆ. ಏನಿದು ಹೊಸ ಸುದ್ದಿ? ಇಲ್ಲಿದೆ ಮಾಹಿತಿ.

ಮಯೋಸಿಟಿಸ್ ಖಾಯಿಲೆ ಚಿಕಿತ್ಸೆಗಾಗಿ ಅಮೆರಿಕಾಕ್ಕೆ (America) ಹೋಗಿದ್ದಾರೆ ಸಮಂತಾ. ಆದರೂ ಬಿಡುಗಡೆಯಾಗಲಿರುವ ‘ಖುಷಿ’ ಸಿನಿಮಾ ಪ್ರಚಾರವನ್ನು ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗವಹಿಸಿದ್ದರು. ಇದೀಗ ಖುಷಿ ಸಿನಿಮಾದ ಮೀಟ್ ದಿ ಗ್ರೀಟ್‌ಗೆ ಸಜ್ಜಾಗುತ್ತಿದ್ದಾರೆ. 25ನೇ ತಾರೀಖು ಅಲ್ಲಿಯ ಡಲ್ಲಾಸ್ ಹಾಗೂ ಟೆಕ್ಸಾಸ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಜಾ ಅಂದರೆ ಇದು ಸ್ಯಾಮ್ (Samantha) ಸಿನಿಮಾ ಪ್ರಚಾರ. ಪುಕ್ಕಟೆ ಮಾಡಬೇಕು. ಭರ್ತಿ 30 ಲಕ್ಷ ರೂಪಾಯಿ ಸಮಂತಾ ಅಕೌಂಟ್‌ಗೆ ಸೇರಿಸಿದ್ದಾರೆ. ಇದನ್ನೂ ಓದಿ:ಎಸ್ತರ್ ನರೋನ ಈಗ ನಿರ್ದೇಶಕಿ-‘ದಿ ವೆಕೆಂಟ್ ಹೌಸ್‌’‌ ಮೂಲಕ ಹೊಸ ಹೆಜ್ಜೆ ಇಟ್ಟ ನಟಿ

ಇದು ನೋಡಿ ಸಮಂತಾ ತಾಕತ್ತು. ಟಾಲಿವುಡ್ (Tollywood) ಹೀಗನ್ನುತ್ತಿದೆ. ಸ್ಯಾಮ್‌ಗೆ ಮೂವತ್ತು ಲಕ್ಷ ಕೊಟ್ಟಿದ್ದೇನೊ ಸರಿ. ಆದರೆ ಈ ಹಣವನ್ನು ಆರ್ಗನೈಸ್ ಮಾಡಿದವರು ಹೇಗೆ ಗಳಿಸುತ್ತಾರೆ? ಉತ್ತರವೂ ಇದೆ. ಡಲ್ಲಾಸ್-ಟೆಕ್ಸಾಸ್‌ನ ಈ ಕಾರ್ಯಕ್ರಮಕ್ಕೆ 150 ರುಪಾಯಿ ಟಿಕೆಟ್ ದರ. ಅದರ ಜೊತೆಗೆ ಬಂಪರ್ ಆಫರ್ ಇದೆ. 2500 ಡಾಲರ್ ಕೆಮ್ಮಿದರೆ ಸಮಂತಾ ಕೈ ಕುಲುಕಿ ಕ್ಲೋಸ್‌ಅಪ್‌ನಲ್ಲಿ ದರ್ಶನ. 2500 ಡಾಲರ್ ಅಂದ್ರೆ ಇಂಡಿಯಾ ಲೆಕ್ಕದಲ್ಲಿ 2 ಲಕ್ಷ. ಸಾಕಾ ಬೇಕಾ ಆಘಾತ.

ತಲೆ ಕೆಟ್ಟಿದೆಯಾ ಎರಡು ಲಕ್ಷ ಕೊಡೋದಿಕ್ಕೆ? ಹೀಗಂತ ನೀವು ಕೇಳಬಹುದು. ಆದರೆ ಅಷ್ಟು ಕಾಸನ್ನು ಜನರು ಸಾಲುಗಟ್ಟಿ ಕ್ರೆಡಿಟ್ ಕಾರ್ಡಿನಿಂದ ಉಜ್ಜುತ್ತಿದ್ದಾರೆ. ನೂಕುನುಗ್ಗಲು ಲಾಠಿ ಚಾರ್ಜ್ ಆಗಿಲ್ಲ. ಕಾರಣ ಅದು ಅಮೆರಿಕಾ. ಒಟ್ಟಾರೆಯಾಗಿ ಸಮಂತಾ ಅಲ್ಲಿಗೆ ಹೋಗಿದ್ದು ಚಿಕಿತ್ಸೆ ಪಡೆಯಲಿಕ್ಕಾ ಅಥವಾ ಹರೆಯದ ಹುಡುಗರ ಆರೋಗ್ಯವನ್ನು ಇಂಚಿಂಚಾಗಿ ಹಾಳು ಮಾಡಲಿಕ್ಕಾ? ಪ್ರಶ್ನೆ ಕೇಳುತ್ತಿದೆ ಟಾಲಿವುಡ್.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್